ನಿಟ್ಟೂರು: ಒಂದೇ ದಿನದಲ್ಲಿ 20 ಕ್ಕೊ ಹೆಚ್ಚು ಪಾಸಿಟಿವ್ ಪ್ರಕರಣ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕಂಚಿಗಾನಹಳ್ಳಿ, ಶಿವಸಂದ್ರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಚಿಗಾನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿ, ಒಮ್ಮೆಗೆ ಇಷ್ಟೊಂದು ಪಾಸಿಟಿವ್ ಪ್ರಕರಣ ಹೇಗೆ ಬಂತು ಎನ್ನುವ ಮಾಹಿತಿ ಪಡೆದ ಅವರು ಯಾರು ಸಹ ಹೆದರುವ ಅಗತ್ಯವಿಲ್ಲ, ಯಾರಿಗೆ ಪಾಸಿಟಿವ್ ಬಂದಿದ್ದರು ಸಹ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಿಗೆ ಬನ್ನಿ, ಇದರಿಂದ ಇನ್ನೂ ಹೆಚ್ಚಿನದಾಗಿ ಸಮುದಾಯಕ್ಕೆ ಹರಡುವುದನ್ನು ತಡೆಗಟ್ಟಬಹುದು ಮತ್ತು ಅಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತದೆ, ಹಾಗಾಗಿ ಪಾಸಿಟಿವ್ ಬಂದ ಕೂಡಲೇ ಅಲ್ಲಿಗೆ ಬಂದಲ್ಲಿ ಯಾವುದೇ ರೀತಿಯ ಸಮಸ್ಯೆಯಾಗುವುದಿಲ್ಲ ಎಂದ ಅವರು ಗ್ರಾಮದಲ್ಲಿ ವಾಸ ಮಾಡುತ್ತಿರುವ ನೀವು ಆತ್ಮವಿಶ್ವಾಸದಿಂದ ಬದುಕು ಮಾಡಬೇಕಾದ ಅನಿವಾರ್ಯತೆ ಇದೆ, ಪಾಸಿಟಿವ್ ಬಂದ ಕೂಡಲೇ ಭಯ ಪಡುವ ಅವಶ್ಯಕತೆ ಇಲ್ಲ, ನಮ್ಮ ಜಾಗೃತಿ ಬಹಳ ಮುಖ್ಯವಾಗಿದ್ದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದು ಬಹಳ ಮುಖ್ಯ, ಗ್ರಾಮದಲ್ಲಿ ಯಾವುದೇ ಜನ ಸೇರುವ ಕಾರ್ಯಕ್ರಮ ಮಾಡಬೇಡಿ ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಜಯ್, ಎಸ್.ಪಿ ಡಾ.ವಂಶಿ ಕೃಷ್ಣ, ತಹಶೀಲ್ದಾರ್ ಡಾ.ಪ್ರದೀಪ ಕುಮಾರ್, ಕಂದಾಯ ಇಲಾಖೆ ಸಿಬ್ಬಂದಿ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿ ಹಾಜರಿದ್ದರು.
ಪಾಸಿಟಿವ್ ಪ್ರಕರಣ ಇರುವ ಗ್ರಾಮಗಳಿಗೆ ಡೀಸಿ ಭೇಟಿ
Get real time updates directly on you device, subscribe now.
Prev Post
Next Post
Comments are closed.