ತುಮಕೂರು: ಬುಧವಾರದಂದು ಕೋವಿಡ್ ಸೋಂಕು 1,399 ಮಂದಿಗೆ ಕಾಣಿಸಿಕೊಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 316 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 98,165 ಕ್ಕೆ ಏರಿಕೆ ಕಂಡಿದೆ. 17,642 ಸಕ್ರಿಯ ಪ್ರಕರಣಗಳ ಪೈಕಿ 1,847 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 316, ಚಿನಾಹಳ್ಳಿ 145, ಗುಬ್ಬಿ 106, ಕೊರಟಗೆರೆ 100, ಕುಣಿಗಲ್ 58, ಮಧುಗಿರಿ 146, ಪಾವಗಡ 98, ಶಿರಾ 232, ತಿಪಟೂರು 102, ತುರುವೇಕೆರೆಯಲ್ಲಿ 96 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಕೋವಿಡ್ ಗೆ ಬಲಿ: 14
ತುಮಕೂರು: ನಗರದ ಖಾದರ್ ನಗರದ ವ್ಯಕ್ತಿ (36), ಮರಳುರುದಿಣ್ಣೆ ಬಡಾವಣೆಯ ಮಹಿಳೆ (26), ಮಂಡಿಪೇಟೆ ಬಡಾವಣೆಯ ಮಹಿಳೆ (85), ಕೋರ ಗ್ರಾಮದ ಮಹಿಳೆ (75).
ಶಿರಾ: ನಗರದ ಬೀಡಿ ಕಾಲೋನಿಯ ವ್ಯಕ್ತಿ (45) ಕಾಳಿದಾಸ ನಗರದ ವ್ಯಕ್ತಿ (72), ಹನುಮಂತಪುರ ಬಡಾವಣೆಯ ವ್ಯಕ್ತಿ (52).
ಚಿಕ್ಕನಾಯಕನಹಳ್ಳಿ: ತಿಮ್ಮನಹಳ್ಳಿ ಗ್ರಾಮದ ವ್ಯಕ್ತಿ (50), ಕೆಂಕೆರೆ ಗ್ರಾಮದ ಮಹಿಳೆ (55).
ಕೊರಟಗೆರೆ: ನಗರದ ಮಹಿಳೆ (74), ಕರೇಕಲ್ಲುಹಟ್ಟಿ ಗ್ರಾಮದ ವ್ಯಕ್ತಿ (80).
ಪಾವಗಡ: ದೇವಯ್ಯನಪಾಳ್ಯ ಗ್ರಾಮದ ವ್ಯಕ್ತಿ (75), ದೇವದಬೆಟ್ಟ ತಾಂಡ್ಯ ಗ್ರಾಮದ ವ್ಯಕ್ತಿ (70).
ಕುಣಿಗಲ್: ಬೈರನಾಯಕನಹಳ್ಳಿ ಗ್ರಾಮದ ಮಹಿಳೆ (55).
ಒಟ್ಟು 14 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
1,399 ಮಂದಿಗೆ ಪಾಸಿಟಿವ್: 14 ಸಾವು
Get real time updates directly on you device, subscribe now.
Prev Post
Next Post
Comments are closed.