ತುಮಕೂರು: ಜಿಲ್ಲೆಯಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸಿದ್ದು, ಜೂಜಾಟದಲ್ಲಿ ತೊಡಗಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ 11 ಪ್ರಕರಣಗಳು ನಡೆದಿದ್ದು 61 ಮಂದಿ ಬಂಧಿಸಿ, 57 ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ.
ತುಮಕೂರಿನಲ್ಲಿ 03 ಪ್ರಕರಣ ದಾಖಲಾಗಿದ್ದು, 18 ಮಂದಿಯನ್ನು ಬಂಧಿಸಲಾಗಿದೆ, 10,330 ಹಣ ವಶಪಡಿಸಿಕೊಳ್ಳಲಾಗಿದೆ. ಶಿರಾದಲ್ಲಿ 03 ಪ್ರಕರಣ, 16 ಜನರ ಬಂಧನ, 21,010 ವಶ.
ಮಧುಗಿರಿಯಲ್ಲಿ 02 ಪ್ರಕರಣ, 15 ಜನರ ಬಂಧನ, 12,750 ವಶ, ತಿಪಟೂರಿನಲ್ಲಿ 01 ಪ್ರಕರಣ, 09 ಜನರ ಬಂಧನ, 4,770 ವಶ, ಹಾಗೂ ಕುಣಿಗಲ್‌ನಲ್ಲಿ 02 ಪ್ರಕರಣ, 03 ಜನರ ಬಂಧನ, 8,150 ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ಕಾಯ್ದೆಯಡಿ ತಿಪಟೂರಿನಲ್ಲಿ 5 ಪ್ರಕರಣ, 5 ಜನರ ಬಂಧನ, 455.90 ಎಂಎಲ್ ಮದ್ಯ ವಶ. ಶಿರಾದಲ್ಲಿ 07 ಪ್ರಕರಣ, 07 ಜನರ ಬಂಧನ, 63.87 ಎಂಎಲ್ ಮದ ವಶ. ಮಧುಗಿರಿಯಲ್ಲಿ 02 ಪ್ರಕರಣ, 03 ಜನರ ಬಂಧನ 14.150 ಲೀಟರ್ ಮದ್ಯ ವಶ. ಕುಣಿಗಲ್‌ನಲ್ಲಿ 03 ಪ್ರಕರಣ, 03 ಬಂಧನ, 4.26 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 16 ಪ್ರಕರಣಗಳು, 17 ಜನರ ಬಂಧನ, 15.158 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
Get real time updates directly on you device, subscribe now.
Prev Post
Comments are closed.