ಕೋವಿಡ್‌ ಕೇರ್‌ ಸೆಂಟರ್ ಗೆ ಡಾ.ರಂಗನಾಥ್‌ ಭೇಟಿ

137

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಎಡೆಯೂರು ಹೋಬಳಿಯ ಮಲ್ಲನಾಯ್ಕನಹಳ್ಳಿ ಮುರಾರ್ಜಿ ಶಾಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಆರಂಭಿಸಲಾಗಿರುವ ಕೊವಿಡ್ ಕೇರ್‌ ಸೆಂಟರ್ ನಲ್ಲಿ ಬುಧವಾರ ಮಹಿಳಾ ಸೋಂಕಿತರು ಅವ್ಯವಸ್ಥೆ ಖಂಡಿಸಿ ಊಟ ಬಿಟ್ಟು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಗುರುವಾರ ಶಾಸಕ ಡಾ.ರಂಗನಾಥ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಕೊವಿಡ್ ಕೇರ್ ಸೆಂಟರ್ ನ ಮಹಿಳಾ ಸೋಂಕಿತರ ಕೊಠಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ ಶಾಸಕರು, ಸೋಂಕಿತರಿಗೆ ಧೈರ್ಯ ತುಂಬಿ, ಸರ್ಕಾರ ಎಲ್ಲಾ ಹಂತದಲ್ಲೂ ವ್ಯವಸ್ಥೆ ಮಾಡಲಾಗುತ್ತಿಲ್ಲ, ಅದರೂ ನಾವು ನಮ್ಮ ಟೆಸ್ಟ್ ವತಿಯಿಂದ ಸೋಂಕಿತರಿಗೆ ಮೆಡಿಕಲ್‌ ಕಿಟ್‌ ಕೊಡುವುದು ಸೇರಿದಂತೆ ತಾಲೂಕಿನಾದ್ಯಂತ ಇರುವ 75 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್‌ ನೀಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಕೊವಿಡ್‌ ಕೇರ್‌ ಸೆಂಟರ್ ನಲ್ಲಿ ಸ್ವಚ್ಛತೆ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಗುಣಮಟ್ಟದ ಆಹಾರ ನೀಡದೆ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಕುಡಿಯುವ ನೀರು ಸೇರಿದಂತೆ ಬಳಸುವ ನೀರು ಪೂರೈಕೆಗೆ ತೊಂದರೆ ಇದ್ದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ನೆರವು ಪಡೆದು ಸೆಂಟರ್ ನಲ್ಲಿನ ಸೋಂಕಿತರ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ತಾಕೀತು ಮಾಡಿದ ಅವರು, ಯಾವುದೇ ಹಂತದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದಲ್ಲಿ ಮುಲಾಜಿಲ್ಲದೆ ಕ್ರಮ ವಹಿಸುವ ಎಚ್ಚರಿಕೆ ನೀಡದರು. ಸೋಂಕಿತರ ಪೈಕಿ ಗಂಭಿರ ಸ್ಥಿತಿಯಲ್ಲಿದ್ದ ಮೂವರನ್ನು ಕುಣಿಗಲ್‌ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿ, ಸೋಂಕಿತರಿಗೆ ಯಾವುದೆ ಸಮಸ್ಯೆ ಇದ್ದಲ್ಲಿ ಕರೆ ಮಾಡಿ ತಿಳಿಸುವಂತೆ ಸೂಚಿಸಿದರು. ಸ್ಥಳೀಯ ವೈದ್ಯರು, ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!