ಕುಣಿಗಲ್: ಇಟ್ಟಿಗೆ ಕಾರ್ಖಾನೆ ಚಿಮಣಿ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಣ್ಣಗೌಡನಪಾಳ್ಯದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಒಂದು ವರ್ಷದ ಲಾವಣ್ಯ ಎಂದು ಗುರುತಿಸಲಾಗಿದೆ. ಈಕೆ ಮೂಲತಹ ಪಹಲ್ ಗ್ರಾಮ ಒಡಿಶಾ ರಾಜ್ಯದವರಾಗಿದ್ದು ಕಳೆದ ಕೆಲ ತಿಂಗಳಿನಿಂದ ತಾಲೂಕಿನ ಕೊತ್ತಗೆರೆ ಹೋಬಳಿಯ ಮಾಯಣ್ಣ ಗೌಡನಪಾಳ್ಯದ ಕೃಷ್ಣಪ್ಪ ಎಂಬುವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ತಂದೆ ಬರಿಯಾ, ತಾಯಿ ಭಗವತಿರೊಂದಿಗೆ ವಾಸವಾಗಿದ್ದು, ಕಾರ್ಖಾನೆ ಆವರಣದಲ್ಲೆ ಶೆಡ್ ನಲ್ಲಿ ವಾಸವಿದ್ದರು. ಬುಧವಾರ ಸಂಜೆ ಗಾಳಿ, ಮಳೆಗೆ ಕಾರ್ಖಾನೆಯ ಚಿಮಣಿ ಶೆಡ್ ಮೇಲೆ ಬಿದ್ದ ಕಾರಣ ಲಾವಣ್ಯ ಸೇರಿದಂತೆ ತಂದೆ, ತಾಯಿ ಗಾಯಗೊಂಡರು. ಕೂಡಲೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಕರೆತಂದರೂ ಲಾವಣ್ಯ ಮೃತಪಟ್ಟಿದ್ದು ಘಟನೆಗೆ ಸಂಬಂಧಿಸಿದಂತೆ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಚಿಮಣಿ ಬಿದ್ದು ಬಾಲಕಿ ಸಾವು
Get real time updates directly on you device, subscribe now.
Prev Post
Next Post
Comments are closed.