1,220 ಮಂದಿಗೆ ಕೋವಿಡ್: 15 ಸಾವು

2,185

Get real time updates directly on you device, subscribe now.

ತುಮಕೂರು: ಗುರುವಾರದಂದು ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತೆ 1,220 ಏರಿಕೆ ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 308 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 99,385 ಕ್ಕೆ ಏರಿಕೆ ಕಂಡಿದೆ. 14,912 ಸಕ್ರಿಯ ಪ್ರಕರಣಗಳ ಪೈಕಿ 1,339 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 308, ಚಿನಾಹಳ್ಳಿ 104, ಗುಬ್ಬಿ 105, ಕೊರಟಗೆರೆ 89, ಕುಣಿಗಲ್ 80, ಮಧುಗಿರಿ 129, ಪಾವಗಡ 68, ಶಿರಾ 151, ತಿಪಟೂರು 104, ತುರುವೇಕೆರೆಯಲ್ಲಿ 82 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ:15
ತುಮಕೂರು: ಸದಾಶಿವನಗರದ ವ್ಯಕ್ತಿ (60), ಡಿಎಂ ಪಾಳ್ಯ ಬಡಾವಣೆಯ ಮಹಿಳೆ(70), ಕೊಂತಿಹಳ್ಳಿ ಗ್ರಾಮದ ವ್ಯಕ್ತಿ(55), ಯಳೇನಹಳ್ಳಿ ಗ್ರಾಮದ ವ್ಯಕ್ತಿ (55).
ಕುಣಿಗಲ್: ಕುರುಡಿ ಗ್ರಾಮದ ಮಹಿಳೆ (55)
ಶಿರಾ: ಸಪ್ತಗಿರಿ ಬಡಾವಣೆಯ ವ್ಯಕ್ತಿ (58), ಪುರ ಗ್ರಾಮದ ಮಹಿಳೆ (60)
ಚಿಕ್ಕನಾಯಕನಹಳ್ಳಿ: ಹುಳಿಯಾರು ಗ್ರಾಮದ ವ್ಯಕ್ತಿ (65), ಬಡಕೇಗುಡ್ಲು ಗ್ರಾಮದ ಮಹಿಳೆ (62).
ಕೊರಟಗೆರೆ: ಮಲ್ಲೇಕಾವು ಗ್ರಾಮದ ವ್ಯಕ್ತಿ(67).
ಪಾವಗಡ: ವೈ.ಎನ್ ಹೊಸಕೋಟೆ ಗ್ರಾಮದ ವ್ಯಕ್ತಿ (68), ಸಿಕೆ ಪುರ ಗ್ರಾಮದ ವ್ಯಕ್ತಿ(70), ಮತ್ತೋರ್ವ ಇದೇ ಗ್ರಾಮದ ವ್ಯಕ್ತಿ (60).
ಗುಬ್ಬಿ: ತಿಮ್ಮಪ್ಪನ ಹಟ್ಟಿ ಗ್ರಾಮದ ವ್ಯಕ್ತಿ (50)
ತಿಪಟೂರು: ಹಟ್ನ ಗ್ರಾಮದ ಮಹಿಳೆ (50)
ಒಟ್ಟು15 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!