ಚಿಕ್ಕನಾಯಕನಹಳ್ಳಿ 5, ತುಮಕೂರು 3, ಶಿರಾ 3 ಸೇರಿ ಒಟ್ಟು 13 ಸಾವು

1 ಲಕ್ಷದ ದಾಟಿದ ಸೋಂಕಿತರ ಸಂಖ್ಯೆ

3,326

Get real time updates directly on you device, subscribe now.

ತುಮಕೂರು: ಶನಿವಾರದಂದು ಕೋವಿಡ್‌19 ಸೋಂಕಿತರ ಸಂಖ್ಯೆ 1,102 ಕಂಡಿದೆ. ತುಮಕೂರು ನಗರ ಹಾಗೂ ಗ್ರಾಮಾಂತರದಲ್ಲಿ 196 ಪ್ರಕರಣ ದಾಖಲಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,01,786 ಕ್ಕೆ ಏರಿಕೆ ಕಂಡಿದೆ. 14,331 ಸಕ್ರಿಯ ಪ್ರಕರಣಗಳ ಪೈಕಿ 1,984 ಮಂದಿ ಬಿಡುಗಡೆ ಹೊಂದಿದ್ದಾರೆ.
ಹೊಸದಾಗಿ ತುಮಕೂರು ತಾಲ್ಲೂಕಿನಲ್ಲಿ 196, ಚಿನಾಹಳ್ಳಿ 85, ಗುಬ್ಬಿ 84, ಕೊರಟಗೆರೆ 87, ಕುಣಿಗಲ್‌ 34, ಮಧುಗಿರಿ 100, ಪಾವಗಡ 130, ಶಿರಾ 222, ತಿಪಟೂರು 91, ತುರುವೇಕೆರೆಯಲ್ಲಿ 73 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್‌ ಗೆ ಬಲಿ:13
ಚಿಕ್ಕನಾಯಕನಹಳ್ಳಿ: ಚೌಳಕಟ್ಟೆ ಗ್ರಾಮದ ಮಹಿಳೆ (45), ಕಂದಿಕೆರೆ ಗ್ರಾಮದ ಮಹಿಳೆ (65), ಬಳ್ಳೇಕಟ್ಟೆ ಗ್ರಾಮದ ವ್ಯಕ್ತಿ (95), ಸಾಸಲು ಗ್ರಾಮದ ವ್ಯಕ್ತಿ (80), ಸಾಲುಕಟ್ಟೆ ಗ್ರಾಮದ ವ್ಯಕ್ತಿ (28).
ತುಮಕೂರು: ಉಪ್ಪಾರಹಳ್ಳಿ ಬಡಾವಣೆಯ ಮಹಿಳೆ (63), ನರುಗನಹಳ್ಳಿ ಗ್ರಾಮದ ವ್ಯಕ್ತಿ (42), ಹೆಗ್ಗೆರೆ ಗ್ರಾಮದ ವ್ಯಕ್ತಿ (80).
ಶಿರಾ: ಮಾರಗೊಂಡನಹಳ್ಳಿ ಗ್ರಾಮದ ವ್ಯಕ್ತಿ (66), ಜವನಹಳ್ಳಿ ಗ್ರಾಮದ ವ್ಯಕ್ತಿ (33), ಎಂ.ಕೆ. ಪಾಳ್ಯ ಗ್ರಾಮದ ವ್ಯಕ್ತಿ (65).
ಗುಬ್ಬಿ: ಕಡಬ ಗ್ರಾಮದ ವ್ಯಕ್ತಿ (60)
ಪಾವಗಡ: ಚಿಕ್ಕಜಾಲೋಡು ಗ್ರಾಮದ ಮಹಿಳೆ (48)
ಒಟ್ಟು13 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!