200 ದಿನಪತ್ರಿಕೆ ವಿತರಕರಿಗೆ ದಿನಸಿ ಕಿಟ್‌ ವಿತರಿಸಿದ ಜಪಾನಂದಜೀ

ಸರಕಾರ ದಿನಪತ್ರಿಕೆ ವಿತರಕರ ಸಂಕಷ್ಟಕ್ಕೆ ಸ್ಪಂದಿಸಲಿ

177

Get real time updates directly on you device, subscribe now.

ತುಮಕೂರು: ಸರಕಾರ ದಿನಪತ್ರಿಕೆ ವಿತರಕರ ಸಂಕಷ್ಟಕ್ಕೆ ಸ್ಪಂದಿಸುವ ಅಗತ್ಯವಿದ್ದು, ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ಪ್ಯಾಕೇಜ್‌ ಘೋಷಿಸಬೇಕು ಎಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಸಲಹೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಪತ್ರಕರ್ತ ದಿ.ಸಂಜೀವಪ್ಪ ಅವರಿಗೆ ಶ್ರದ್ಧಾಂಜಲಿ ಹಾಗೂ 200 ದಿನಪತ್ರಿಕೆ ವಿತರಕರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿ, ಚಳಿ, ಗಾಳಿ, ಮಳೆ, ಸಾಂಕ್ರಾಮಿಕ ರೋಗ ಎನ್ನದೇ ಕರ್ತವ್ಯ ನಿರತರಾಗಿ ಸಮಾಜದ ಒಳಿತು ಕೆಡುಕುಗಳನ್ನು ಜನರ ಮುಂದಿಡುತ್ತಿರುವ ಮಾಧ್ಯಮ ಮಂದಿಯ ಸಂಕಷ್ಟವನ್ನು ಸಮಾಜ ಮತ್ತು ಸರಕಾರ ಅರಿಯಬೇಕಿದೆ. ಮಾಧ್ಯಮಗಳಿಂದ ಲೋಕದ ಒಳಿತನ್ನು ಅಪೇಕ್ಷಿಸುವ ಸಮಾಜ ಮತ್ತು ಸರಕಾರ ಅವರಿಗೆ ನಾವೇನು ಮಾಡಿದ್ದೇವೆ ಎಂಬುದನ್ನು ಯೋಚಿಸಬೇಕಿದೆ. ಚಳಿಯಿರಲಿ, ಮಳೆಯಿರಲಿ, ಬಿಸಿಲಿರಲಿ ಸೈಕಲ್‌ ತುಳಿದು ಮನೆ ಬಾಗಿಲಿಗೆ ಪತ್ರಿಕೆ ಹಾಕುವ ಹುಡುಗನಿದೆ ಒಂದು ದಿನ ಕಾಫಿ ಕೊಡುವ ಸೌಜನ್ಯವನ್ನು ನಾವು ತೋರುವುದಿಲ್ಲ. ನಮ್ಮ ಸುತ್ತಮುತ್ತಲಿನ ವಿದ್ಯಮಾನವನ್ನು ಮನೆ ಬಳಿಗೆ ತಲುಪಿಸುವವರನ್ನು ಸಂಕಷ್ಟ ಅರಿಯಬೇಕಿದೆ. ಸರಕಾರದ ಅವರ ಬಗ್ಗೆ ಕಣ್ತೆರೆಯಬೇಕಿದೆ. ಈ ದಿಸೆಯಲ್ಲಿ ರಾಜ್ಯಾಧ್ಯಕ್ಷ ಶಿವಾನಂದ್‌ ತಗಡೂರು ಅವರು ಮುಖ್ಯಮಂತ್ರಿಗಳ ಗಮನಸೆಳೆಯಬೇಕಿದೆ. ಅವರು ಈ ನಿಟ್ಟಿನಲ್ಲಿ ಅನುಕೂಲ ಮಾಡಿಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ದಿ.ಸಂಜೀವಯ್ಯ ಅವರ ಅಕಾಲಿಕ ನಿಧನ ಜಿಲ್ಲೆಯ ಪತ್ರಿಕಾ ರಂಗಕ್ಕೆ ಭರಿಸಲಾಗದ ನಷ್ಟ ಉಂಟುಮಾಡಿದೆ, ಅವರು ಸ್ನೇಹಜೀವಿ, ಸಾಮಾಜಿಕ ಕಳಕಳಿಯುಳ್ಳವರಾಗಿದ್ದರು ಎಂಬುದನ್ನು ಅರಿತಿದ್ದೇನೆ. ಶ್ರದ್ಧೆ, ಶಿಸ್ತಿನ ಪತ್ರಕರ್ತರಾಗಿ ಹೆಸರು ಮಾಡಿದ್ದರು ಎಂದರು.
ಹಕ್ಕಿಪಿಕ್ಕಿ ಜನಾಂಗಕ್ಕೆ ಅವರ ಜಾಗದಲ್ಲಿ ಹೋಗಿ ಲಸಿಕೆ ಹಾಕದಿದ್ದರೆ ಸೋಂಕು ಸೇಫ್‌ ಎಂದು ಕೊಂಡಿರುವ ನಗರ, ಪಟ್ಟಣಕ್ಕೆ ಮತ್ತೆ ವಿಸ್ತರಿಸುವ ಆತಂಕವಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಸ್ವಾಮೀಜಿ ಮನವಿ ಮಾಡಿದರು.
ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ್‌ ತಗಡೂರು ಮಾತನಾಡಿ ಸಂಜೀವಯ್ಯ ಅವರ ಸರಳ ಸ್ನೇಹಮಯಿ ಪತ್ರಕರ್ತರಾಗಿದ್ದರು, ಅವರ ನಿಧನ ದುಃಖ ತಂದಿದೆ, ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ, ಪತ್ರಿಕೆ ಹಾಕುವವರು ಕೀಳರಿಮೆ ಹೊಂದುವ ಅಗತ್ಯವಿಲ್ಲ, ಕಲಾಂ ಅವರು ಬಾಲ್ಯದಲ್ಲಿ ಪತ್ರಿಕಾ ವಿತರಕರಾಗಿ ರಾಷ್ಟ್ರಪತಿ ಹುದ್ದೆಯ ತನಕ ಏರಿದರು, ನಿಮ್ಮ ಸಂಕಷ್ಟಗಳ ಅರಿವಿದೆ, ಈ ಬಗ್ಗೆ ಅನುಕೂಲ ಕಲ್ಪಿಸಲು ಸರಕಾರದ ಮಟ್ಟದಲ್ಲಿ ಹೋರಾಡುತ್ತೇನೆ, ಸ್ವಾಮಿ ಜಪಾನಂದಜೀ ಅವರ ಸಾಮಾಜಿಕ ಕಳಕಳಿ, ಗಡಿ ಭಾಗದಲ್ಲಿದ್ದುಕೊಂಡು ರಾಜ್ಯದ ಉದ್ದಗುಲಕ್ಕೂ ಸಲ್ಲಿಸುತ್ತಿರುವ ಸೇವೆ ಅದ್ಭುತವಾದದು. ಎಸಿ ರೂಂನಲ್ಲಿರುವ ಅನೇಕ ಸ್ವಾಮೀಜಿಗಳ ಮಧ್ಯೆ ಬೀದಿಯಲ್ಲಿ ನಿಂತು ಜನಸೇವೆ ಮಾಡುತ್ತಿದ್ದಾರೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್‌ ಮಾತನಾಡಿ, ದಿ.ಸಂಜೀವಯ್ಯ ಅವರ ಕಾರ್ಯತತ್ಪರೆ ಸ್ಮರಿಸಿ, ಸ್ವಾಮಿ ಜಪಾನಂದಜೀ ಅವರು ಕಷ್ಟದಲ್ಲಿರುವ ಪತ್ರಕರ್ತರು, ದಿನಪತ್ರಿಕೆ ವಿತರಕರ ಕಷ್ಟಕ್ಕೆ ಸ್ಪಂದಿಸುತ್ತಿರುವ ಮಾದರಿ ಶ್ಲಾಘಿಸಿ, ವಿತರಕರ ಸಂಕಷ್ಟಕ್ಕೆ ಸ್ಪಂದಿಸಲು ನಮ್ಮ ಸಂಘ ಸದಾ ಬದ್ಧವಿದೆ ಎಂದರು.
ಪತ್ರಿಕೋದ್ಯಮಿ ಎಸ್‌.ನಾಗಣ್ಣ, ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ರಘು, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಡಿ.ರಂಗರಾಜು, ರಾಜ್ಯಸಮಿತಿಯ ನಾಗಣ್ಣ, ನಿರ್ದೇಶಕರಾದ ಟಿ.ಇ.ರಘುರಾಂ, ರಂಗನಾಥ್‌, ಈಶ್ವರ್‌ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!