ಶಿರಾ: ತಾಲ್ಲೂಕು ಟಿಬಿಜೆ ಅಭಿಮಾನಿಗಳ ಬಳಗ ಮತ್ತು ಬ್ಲಾಕ್ ಕಾಂಗ್ರೆಸ್ ಸಂಯುಕ್ತಾಶ್ರಯದಲ್ಲಿ ಶನಿವಾರ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಮತ್ತು ಆಸ್ಪತ್ರೆಗೆ ಆಕ್ಸಿಜನ್ ಮಾಸ್ಕ್, ಕೊರೋನಾ ಸೋಂಕಿನಿಂದ ಸಾವಿಗೀಡಾದವರ ಶವ ಸಂಸ್ಕಾರ ಮಾಡುವ ವಾರಿಯರ್ ಗಳಿಗೆ ಪಿಪಿಇ ಕಿಟ್ ವಿತರಣಾ ಕಾರ್ಯಕ್ರಮವನ್ನು ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸಿ ಮಾತನಾಡಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿಷ್ಟೆ ಮೆರೆದು, ತಾವು ಅಪಾಯಕ್ಕೆ ಈಡಾಗುವುದನ್ನೂ ಲೆಕ್ಕಿಸದೆ ಮನೆ ಮನೆಗೆ ತೆರಳಿ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸುವುದು, ಅವರಿಗೆ ಅಗತ್ಯವಾದ ಆರೋಗ್ಯ ಮಾಹಿತಿ ನೀಡುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದರು.
ಕರ್ತವ್ಯವಷ್ಟೇ ಅಲ್ಲದೇ ಸಮಾಜದ ಆರೋಗ್ಯ ಕಾಪಾಡುವ ಆಶಾಗಳಿಗೆ ಏನಾದರೂ ಸಹಾಯ ಮಾಡಬೇಕು ಎಂದು ಯೋಚನೆ ಮಾಡಿದಾಗ, ಅವರಿಗೆ ದಿನಸಿ ಕಿಟ್, ಮಾಸ್ಕ್ ಕೊಡುವ ಯೋಜನೆ ರೂಪುಗೊಂಡಿತು. ಅದರಂತೆ ತಾಲ್ಲೂಕು ಆಡಳಿತದ ಸಹಾಯದೊಂದಿಗೆ ತಾಲ್ಲೂಕಿನ ಸುಮಾರು 266 ಆಶಾ ಕಾರ್ಯಕರ್ತೆಯರಿಗೆ ಕಿಟ್ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಸ್ಕಾರ ನಡೆಸುತ್ತಿರುವವರೂ ಕೊರೊನಾ ವಾರಿಯರ್‌ಗಳೇ ಆಗಿದ್ದು, ಅವರನ್ನು ಗೌರವಿಸುವ ಮೂಲಕ ಅವರಿಗೆ ಕೃತಜ್ಞತೆ ತಿಳಿಸುತ್ತಿದ್ದೇವೆ ಎಂದರು.
ಮುಖಂಡ ಸಂಜಯ್ ಜಯಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು, ನಗರಸಭೆ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಪಕ್ಷದ ಜಿಲ್ಲಾ ಮುಖಂಡ ಎಚ್.ಸಿ.ಹನುಮಂತಯ್ಯ, ಕಲ್ಲಶೆಟ್ಟಿಹಳ್ಳಿ ರುದ್ರೇಶ್, ಹನುಮಂತಪ್ಪ, ಅಜಯ ಕುಮಾರ್, ಶೇಷಾನಾಯ್ಕ, ಹಾರೋಗೆರೆ ಮಹೇಶ್, ಡಿ.ಸಿ.ಆಶೋಕ್, ನೂರುದ್ದೀನ್ ಮತ್ತಿತರರು ಇದ್ದರು.
ಆಶಾಗಳಿಗೆ ಕಾಂಗ್ರೆಸ್ ಪಕ್ಷದಿಂದ ದಿನಸಿ ಕಿಟ್ ವಿತರಣೆ
Get real time updates directly on you device, subscribe now.
Comments are closed.