1,200 ಕುಟುಂಬಗಳಿಗೆ ತರಕಾರಿ ವಿತರಣೆ

251

Get real time updates directly on you device, subscribe now.

ಮಧುಗಿರಿ: ರೈತರು ಬೆಳೆದ ತರಕಾರಿಯನ್ನು ಮಾರಲು ಸಾಧ್ಯವಾಗದೆ ಸಂಕಷ್ಟ ಪಡುತ್ತಿರುವುದನ್ನು ಮನಗಂಡು ಸುಮಾರು 6.5 ಟನ್‌ ತರಕಾರಿಯನ್ನು ಕ್ರಿಬ್ಕೊ ನಿರ್ದೇಶಕ ಆರ್‌.ರಾಜೇಂದ್ರ ಅವರು ಖರೀದಿಸಿ ಶನಿವಾರ ಐಡಿ ಹಳ್ಳಿ ಹೋಬಳಿಯ ಜನಕಲೋಟಿ, ತಿಪ್ಪಾಪುರ ಹಾಗೂ ದಾದಗೊಂಡನಹಳ್ಳಿಯ 1,200 ಕುಟುಂಬಗಳಿಗೆ ವಿತರಿಸಿದರು.
ಕ್ರಿಬ್ಕೊ ನಿರ್ದೇಶಕ ಆರ್‌.ರಾಜೇಂದ್ರ ಮಾತನಾಡಿ, ಅಲ್ಪಸ್ವಲ್ಪ ಬರುವ ನೀರಿನಲ್ಲೇ ರೈತರು ಕಷ್ಟಪಟ್ಟು ಬೆಳೆದ ತರಕಾರಿಯನ್ನು ಲಾಕ್ ಡೌನ್‌ ಸಂದರ್ಭದಲ್ಲಿ ಮಾರಲಾಗದೆ ಕಂಗೆಟ್ಟಿರುವ ಸ್ಥಿತಿಯಲ್ಲಿ ರೈತರು ಬೆಳೆದ ತರಕಾರಿಯನ್ನು ಸೂಕ್ತ ಬೆಲೆಗೆ ಖರೀದಿಸಿ ಅದನ್ನು ಬಡ ಜನರಿಗೆ ಹಂಚಲು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌.ರಾಜಣ್ಣ ನವರ ಸೂಚನೆ ಮೇರೆಗೆ ತೀರ್ಮಾನಿಸಿದ್ದೇವೆ, ಸದ್ಯ ಖರೀದಿಸಿರುವ ತರಕಾರಿಯನ್ನು 3 ಗ್ರಾಮಗಳಲ್ಲಿ ಪ್ರತಿ ಮನೆಗೆ 5 ಕೆಜಿ ಯಷ್ಟು ತರಕಾರಿ ನೀಡುತ್ತಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಮಧುಗಿರಿ ತಾಲ್ಲೂಕಿನಲ್ಲಿ ತರಕಾರಿ ಬೆಳೆದಿರುವ ಮತ್ತು ಅದನ್ನು ವ್ಯಾಪಾರ ಮಾಡಲು ತೊಂದರೆಯಾಗಿರುವ ರೈತರು ಯಾರೇ ಆಗಲಿ ಲಾಕ್ ಡೌನ್‌ ಮುಗಿಯುವವರಿಗೂ ನಾಗೇಶ್‌ ಬಾಬು (9880949476), ಎಸ್‌.ಡಿ.ವೆಂಕಟೇಶ್‌ (8553339111) ಅವರನ್ನು ಸಂಪರ್ಕಿಸಿದರೆ ಖರೀದಿಸಿದ ತರಕಾರಿಯನ್ನು ತಾಲ್ಲೂಕಿನ ಇತರೆ ಗ್ರಾಮಗಳಿಗೂ ವಿತರಿಸಲಾಗುವುದು. ಈ ಸೋಂಕನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕಾದರೆ ನಾವೆಲ್ಲ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡಾಗ ಮಾತ್ರ, ಹಾಗಾಗಿ ಗ್ರಾಮೀಣ ಜನರಲ್ಲಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್‌ ನಿರ್ದೇಶಕ ನಾಗೇಶ್‌ ಬಾಬು ಮಾತನಾಡಿ, ಲಾಕ್‌ ಡೌನ್ ನಿಂದ ರೈತರು ಸಂಕಷ್ಟದಲ್ಲಿರುವಾಗ ರೈತರಿಂದ ತರಕಾರಿ ಖರೀದಿಸುವ ಸಂದರ್ಭದಲ್ಲಿ ಪೇಚಾಡದೆ ಮಾರುಕಟ್ಟೆ ಬೆಲೆಗಿಂತ ಸ್ವಲ್ಪ ಹೆಚ್ಚಾಗೆ ಹಣ ನೀಡಿ ತರಕಾರಿ ಖರೀದಿಸಿ ಗ್ರಾಮಗಳಿಗೆ ಸ್ವತಃ ತೆರಳಿ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ಕಾಂಗ್ರೆಸ್‌ ಯುವ ಮುಖಂಡ ಎಸ್‌.ಡಿ.ವೆಂಕಟೇಶ್‌, ಚಿಕ್ಕದಾಳವಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್‌ ರೆಡ್ಡಿ, ಸದಸ್ಯರಾದ ರಾಮಕ್ಕ, ನರಸಿಂಹಯ್ಯ, ಐಡಿ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹರೆಡ್ಡಿ, ಮುಖಂಡರಾದ ಪಿ.ಟಿ.ಗೋವಿಂದಪ್ಪ, ಶ್ರೀನಿವಾಸರೆಡ್ಡಿ, ಶನಿವಾರಮರೆಡ್ಡಿ, ನರಸಿಂಹರೆಡ್ಡಿ, ಡಿಸಿಸಿ ಬ್ಯಾಂಕ್‌ ಮೇಲ್ವಿಚಾರಕ ಎನ್‌.ರಾಮಕೃಷ್ಣ, ಸೀತಾರಾಮ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!