ತುರುವೇಕೆರೆ: ತಾಲೂಕಿನ ಹಲವೆಡೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ತಾಣಗಳ ಮೇಲೆ ದಾಳಿ ನೆಡೆಸಿರುವ ಅಬಕಾರಿ ಪೋಲೀಸರು 40 ಲೀಟರ್ ಮದ್ಯ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪಟ್ಟಣದಲ್ಲಿ ಬೆಳಿಗ್ಗೆ 10 ರ ನಂತರ ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯದಂಗಡಿಗಳು ಬೀಗಮುದ್ರೆಗೊಳಗಾಗುತ್ತಿದ್ದವು. ಈ ಹಿನ್ನಲೆಯಲ್ಲಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ಸಾಗಿದೆ ಎನ್ನುವ ಖಚಿತ ಮಾಹಿತಿಯನ್ನಾದರಿಸಿ ಅಬಕಾರಿ ನಿರೀಕ್ಷಕ ಬಿ.ಎಲ್. ರವಿಶಂಕರ್ ಸಿಬ್ಬಂದಿಯೊಂದಿಗೆ ದಾಳಿ ನೆಡೆಸಿದ್ದರು. ಆ ವೇಳೆ ಮಾಯಸಂದ್ರ ಹೋಬಳಿಯ ಶೆಟ್ಟಿಗೊಂಡನಹಳ್ಳಿ ತಿಮ್ಮಮ್ಮ, ಕಸಬಾ ಹೋಬಳಿಯ ಹರಿದಾಸನಹಳ್ಳಿ ನಾಗರಾಜು, ದಂಡಿನಶಿವರ ಹೋಬಳಿಯ ದುಂಡಾ ಗ್ರಾಮದ ಗಂಗಾಧರಯ್ಯ ಹಾಗೂ ಗೋಣಿತುಮಕೂರಿನ ಲೆಂಕಪ್ಪನ ವಿರುದ್ದ ಪ್ರಕರಣ ದಾಖಲಿಸಿರುವುದಾಗಿ ಅಬಕಾರಿ ಪೋಲೀಸರು ತಿಳಿಸಿದ್ದಾರೆ.
ದಾಳಿ ವೇಳೆ ಅಬಕಾರಿ ಉಪನಿರೀಕ್ಷಕಿ ರಾಚಮ್ಮ, ಸಿಬ್ಬಂದಿಗಳಾದ ಮಂಜುನಾಥ್, ರಾಮು, ಕೇಶವ್, ನರಸಿಂಹಮೂರ್ತಿ ಮತ್ತು ರವಿಶಂಕರ್ ಇದ್ದರು.
ಅಬಕಾರಿ ದಾಳಿ ಅಕ್ರಮ ಮದ್ಯ ವಶ
Get real time updates directly on you device, subscribe now.
Prev Post
Next Post
Comments are closed.