ಪಾವಗಡ: ತಾಲ್ಲೂಕಿನ ಟೈಲರ್ಸ್ ಅಸೋಸಿಯೇಷನ್ ಮತ್ತು ಸ್ವಯಂ ಸೇವಾ ಸಂಸ್ಥೆ ಕೋರಿಕೆ ಮೇರೆಗೆ ಕೋವಿಡ್-19 ಲಾಕ್ ಡೌನ್ ಪರಿಣಾಮವಾಗಿ ದಿನ ನಿತ್ಯ ಜೀವನಕ್ಕೂ ತೊಂದರೆ ಅನುಭವಿಸುತ್ತಿರುವ ಬಡ ಟೈಲರ್ ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
150ಕ್ಕೂ ಹೆಚ್ಚು ಕುಟುಂಬಗಳ ಪಟ್ಟಿಯನ್ನು ಅನುಸರಿಸಿ ಅಧ್ಯಕ್ಷ ಕರಿಯಣ್ಣ ಅವರ ಸಲಹೆಯಂತೆ ಎರಡು ದಿನ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಸ್ವಾಮಿ ಜಪಾನಂದಜೀ ಅವರು ಎಲ್ಲಾ ಟೈಲರುಗಳಿಗೆ ಲಸಿಕೆ ಮತ್ತು ಅದರ ಪ್ರಭಾವವನ್ನು ಹಾಗೂ ಅನುಕೂಲಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ತಮ್ಮ ತಮ್ಮ ಅಂಗಡಿಗಳನ್ನು ತೆರೆಯುವ ದಿನಗಳು ಬಂದಾಗ ಅಂಗಡಿಯ ಮುಂದೆ ಮಾಸ್ಕ್ ಇಲ್ಲದೆ, ಶುಚಿತ್ವವಿಲ್ಲದೆ ಒಳಗೆ ಬರುವಂತಿಲ್ಲ ಎಂಬ ಸೂಚನಾ ಫಲಕವನ್ನು ಹಾಕಬೇಕೆಂದು ಸೂಚಿಸಿದರು.
ಸುದೇಶ್ ಬಾಬು, ಯಜ್ಞ ನಾರಾಯಣ ಶರ್ಮ, ಪ್ರಸನ್ನ ಮೂರ್ತಿ, ಲೋಕೇಶ್, ವೇಣುಗೋಪಾಲರೆಡ್ಡಿ ಹಾಗೂ ವಿವೇಕ ಬ್ರಿಗೇಡಿನ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೂಜ್ಯ ಸ್ವಾಮೀಜಿ ನೇತೃತ್ವದಲ್ಲಿ ಎಂದಿನಂತೆ ಈ ಸೇವಾ ಯಜ್ಞ ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದಿಂದ ನಡೆಯಿತು.
Get real time updates directly on you device, subscribe now.
Prev Post
Next Post
Comments are closed.