ಚಿಕ್ಕನಾಯಕನಹಳ್ಳಿ: ಲಾಕ್ ಡೌನ್ ಅವಧಿಯಲ್ಲಿ ಅಬಕಾರಿ ಇಲಾಖೆ ದಾಳಿಯಿಂದ ತಾಲೂಕಿನಲ್ಲಿ 40 ಪ್ರಕರಣಗಳು ದಾಖಲಾಗಿದ್ದು. 33 ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 37 ಲೀಟರ್ 530 ಮಿಲಿ ಮದ್ಯ ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕರಾದ ಗಂಗರಾಜು ತಿಳಿಸಿದ್ದಾರೆ.
ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ಜಾಲಗಳಿಗೆ ಕಡಿವಾಣ ಹಾಕಲು ಚಿಕ್ಕನಾಯಕನಹಳ್ಳಿ ತಾಲೂಕಿನ ಅಬಕಾರಿ ಇಲಾಖೆ ನಿರಂತರವಾಗಿ ದಾಳಿ, ಗಸ್ತು, ರಾತ್ರಿಗಸ್ತು, ರಸ್ತೆ ಕಾವಲು ಕಾರ್ಯಚರಣೆಯಲ್ಲಿ ನಿರಂತರವಾಗಿದ್ದು, ಏ.23 ರಿಂದ ಮೇ 31ರವರೆಗೆ ಒಟ್ಟು 65 ದಾಳಿಗಳನ್ನು ನಡೆಸಿ, 40 ಪ್ರಕರಣಗಳನ್ನು ದಾಖಲಿಸಿದ್ದು, 33 ಜನ ಆರೋಪಿಗಳನ್ನು ಬಂಧಿಸಲಾಗಿದೆ, ಒಟ್ಟು 37 ಲೀಟರ್ 530 ಮಿಲಿ ಮದ್ಯ ಹಾಗೂ 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಇವುಗಳ ಮೌಲ್ಯ ಒಟ್ಟು 1,84,099 ರೂ ಆಗಿದೆ. ಹಳ್ಳಿಗಳಲ್ಲಿ ಕೆಲ ಜನರು ಇಬ್ಬರು ಅಥವಾ ಮೂರು ಜನ ಜೊತೆಗೂಡಿ ಮದ್ಯಗಳನ್ನು ಅಂಗಡಿಗಳಲ್ಲಿ ಸಂಗ್ರಹಿಸಿ ಅಕ್ರಮ ಮಾರಾಟದ ಉದ್ದೇಶಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು, ಈಗಾಗಲೆ ಅಂತಹ ಕೃತ್ಯದಲ್ಲಿ ತೆಗೆದುಕೊಂಡು ಹೋಗುತ್ತಿರುವುದು ಇಲಾಖೆ ಗಮನಕ್ಕೆ ಬಂದಿದ್ದು ಇಂತಹ ಕೃತ್ಯಗಳಲ್ಲಿ ಬಾಗಿಯಾಗಿರುವವರನ್ನು ಒಂದೇ ಪ್ರಕರಣದಲ್ಲಿ ಬಂದಿಸಿ ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದರು.
ಈ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಅಬಕಾರಿ ಉಪ-ನಿರೀಕ್ಷಕ ಆಶಾ ಹೆಚ್.ಸಿ. ಲಮಾಣಿ ಪೂಜಾ ರಾಮು, ಪೇದೆಗಳಾದ ಕೃಷ್ಣಮೂರ್ತಿ, ಪರಶುರಾಮಯ್ಯ, ರಾಜಕುಮಾರ್ ಸಿಬ್ಬಂದಿ ಮಂಜು, ಚಿದಾನಂದ್ ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.