ನೀರಿನ ಸಮಸ್ಯೆ ಆತಂಕ ದೂರ- ಸಿಎಂಗೆ ಅಭಿನಂದನೆ ಸಲ್ಲಿಸಿದ ಶಾಸಕ

ಬುಗುಡನಹಳ್ಳಿ ಕೆರೆಗೆ ಹರಿದಳು ಹೇಮೆ

474

Get real time updates directly on you device, subscribe now.

ತುಮಕೂರು: ನಗರದ ಕುಡಿಯುವ ನೀರಿನ ಜಲ ಸಂಗ್ರಹಾರ ಬುಗಡನಹಳ್ಳಿ ಕೆರೆಗೆ ಹೇಮಾವತಿ ನೀರು ತಲುಪಿದೆ, 2000 ಕ್ಯೂಸೆಕ್ಸ್ ನೀರು ಗೊರೂರು ಜಲಾಶಯದಿಂದ ಹರಿದು ಬಾಗೂರು ನವಿಲೆ ಗೇಟ್ ನಿಂದ 1100 ಕ್ಯೂಸೆಕ್ಸ್ ಹೊರ ಹರಿವು ಇದ್ದು ಬುಗುಡನಹಳ್ಳಿ ಕೆರೆಯ ಕಾಲುವೆಗೆ ಸರಾಸರಿ 400 ರಿಂದ 500 ಕ್ಯೂಸೆಕ್ಸ್ ನಷ್ಟು ನೀರಿನ ಹರಿವು ಪ್ರಮಾಣದಲ್ಲಿ ಬುಗುಡನಹಳ್ಳಿ ಕೆರೆಗೆ ನೀರು ತಲುಪಿದೆ.
ಶಾಸಕರ ಮನವಿ ಮೇರೆಗೆ ಬುಗುಡನಹಳ್ಳಿಯ ಕೆರೆಗೆ ಹೇಮೆ ನೀರು ಹರಿಸಲಾಗುತ್ತಿದೆ.
ಬುಗುಡನಹಳ್ಳಿ ಕೆರೆಗೆ ಹೇಮಾವತಿ ನೀರು ಹರಿದ ಹಿನ್ನಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ತುಮಕೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್, ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಮಂಗಳವಾರ ಬುಗಡನಹಳ್ಳಿ ಕೆರೆಗೆ ಭೇಟಿ ನೀಡಿದ್ದರು.
ಈ ವೇಳೆ ಮಾತನಾಡಿದ ಜ್ಯೋತಿಗಣೇಶ್‌, ಕೋವಿಡ್‌ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು, ಈ ವಿಷಮ ಪರಿಸ್ಥಿತಿಯಲ್ಲಿ ವಾಟರ್‌ ಟ್ಯಾಂಕರ್‌ ಮೂಲಕ ನೀರನ್ನು ವಾರ್ಡ್ ಗಳಿಗೆ ನೀಡುವುದು ಮತ್ತಷ್ಟು ಕಷ್ಟ ಸಾಧ್ಯವೇ ಆಗಿತ್ತು, ನಮ್ಮ ಈ ಕಷ್ಟವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ ತಕ್ಷಣವೇ ತುಮಕೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಗೂರೂರು ಜಲಶಾಯದಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಸಂಸದ ಜಿ.ಎಸ್.ಬಸವರಾಜ್ ಅವರಿಗೆ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ಗೆ ಶಾಸಕರು ಅಭಿನಂದನೆ ತಿಳಿಸಿದ್ದಾರೆ.
ಪಾಲಿಕೆ ಮಹಾಪೌರರಾದ ಬಿ.ಜಿ.ಕೃಷ್ಣಪ್ಪ ಮಾತನಾಡಿ ಬುಗುಡನಹಳ್ಳಿಗೆ ನೀರು ಹರಿಸುತ್ತಿರುವುದು ತುಂಬ ಸಂತಸದ ವಿಷಯ, ಒಂದು ರೀತಿಯಲ್ಲಿ ತುಮಕೂರು ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Get real time updates directly on you device, subscribe now.

Comments are closed.

error: Content is protected !!