ಕೊಡಿಗೇನಹಳ್ಳಿ: ಹೋಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ಕುರಿತು ಮಕ್ಕಳ ಸಹಾಯವಾಣಿಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಕ್ಕದ ಗೌರಿಬಿದನೂರು ತಾಲ್ಲೂಕಿನ ರವಿಕುಮಾರ್ ಬಿನ್ ಗಂಗಪ್ಪ ಎಂಬುವವರು ವಿಧುರಾಶ್ವತ್ಥದಲ್ಲಿ ವಿವಾಹವಾಗಿ ದಾಂಪತ್ಯ ಜೀವನ ನಡೆಸುತ್ತಿರುವ ಕುರಿತು ಮಕ್ಕಳ ಸಹಾಯವಾಣಿಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಅನಿತಾ ಮತ್ತು ಪಿಎಸೈ ನಾಗರಾಜು ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
16 ವರ್ಷದ ಅಪ್ರಾಪ್ತ ಬಾಲಕಿಯನ್ನು ವಿವಾಹವಾದ ರವಿಕುಮಾರ್ (28) ಎಂಬಾತನನ್ನು ಬಂಧಿಸಿದ್ದು, ಮದುವೆಗೆ ಸಹಕರಿಸಿದ ಕೊಡಿಗೇನಹಳ್ಳಿ ಹೋಬಳಿ ಬೊಮ್ಮೇನಹಳ್ಳಿಯ ವಡ್ಡರಹಟ್ಟಿ ಗ್ರಾಮದ ನಾಗಮಣಿ ಮತ್ತು ವೆಂಕಟರಮಣಪ್ಪ ಮೇಲೆ ಪ್ರಕರಣ ದಾಖಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಮತ್ತು ಕೊಡಿಗೇನಹಳ್ಳಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪ್ರಾಪ್ತೆ ವಿವಾಹ- ವರ ಅಂದರ್
Get real time updates directly on you device, subscribe now.
Next Post
Comments are closed.