ಕೋವಿಡ್ ಕೇರ್ ಸೆಂಟರ್ ನ ಶೌಚಾಲಯ ಸ್ವಚ್ಛಗೊಳಿಸಿದ ನಗರಸಭೆ ಪೌರಾಯುಕ್ತ!

587

Get real time updates directly on you device, subscribe now.

ತಿಪಟೂರು: ಇಲ್ಲಿನ ನಗರಸಭೆ ಆಯುಕ್ತರ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇನೆಂದರೆ, ಅವರ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂಬುದೇ ಚರ್ಚೆ.. ಹೌದು, ನಗರಸಭೆ ಪೌರಾಯುಕ್ತ ಉಮಾಕಾಂತ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
58ನೇ ವರ್ಷದ ಹುಟ್ಟುಹಬ್ಬಕ್ಕೆ ಅವರು ಸಜ್ಜಾಗಿದ್ದು ಹೀಗೆ.. ಪಿಪಿಇ ಕಿಟ್ ಧರಿಸಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ತಾಲ್ಲೂಕು ಆಡಳಿತ ಹುಬ್ಬೇರಿಸುವಂತೆ ಮಾಡಿದ್ದಾರೆ.
ಎಲ್ಲಾ ಅಧಿಕಾರಿಗಳು ಇಷ್ಟು ಸೌಜನ್ಯವಾಗಿ, ಅಂತರ ಕಾಪಾಡಿಕೊಳ್ಳದೆ, ತಮ್ಮ ಇರುವಿಕೆಯನ್ನು ತೋರಿಸಿಬಿಟ್ಟರೆ ದೇಶ ರಾಮರಾಜ್ಯವಾಗುವುದರಲ್ಲಿ ಸಂಶಯವಿಲ್ಲ!. ಅವರ ಈ ಕಾರ್ಯವನ್ನು ಎಲ್ಲರೂ ಅನುಸರಿಸಿದರೆ ಸಾಕು ಎನ್ನುತ್ತಾರೆ ಇಲ್ಲಿ ಸಾರ್ವಜನಿಕರು.
ಇಷ್ಟೇ ಅಲ್ಲದೆ, ಅವರು ಸೋಂಕಿತರಿಗೆ ಪ್ರತಿದಿನ ಯೋಗಾಭ್ಯಾಸ ಹೇಳಿಕೊಡುವ ಕಾರ್ಯವನ್ನು ಸಾಕಷ್ಟು ದಿನದಿಂದ ಮಾಡುತ್ತಾ ಬಂದಿದ್ದಾರೆ. ಆತ್ಮಸ್ಥೈರ್ಯ, ಸಾಮಾಜಿಕ ಅಂತರ, ಮಾಸ್ಕ್ ಇವೇ ಕೋವಿಡ್ ಸದೆಬಡೆಯಲು ರಾಮಬಾಣ ಎಂದು ಖಡಕ್ ಆಗಿ ಸೋಂಕಿತರಿಗೆ ತಿಳುವಳಿಕೆ ನೀಡಿದ್ದಾರೆ.
ಇವರಿಗೆ ತಾಲ್ಲೂಕು ತಹಶೀಲ್ದಾರ್ ಚಂದ್ರಶೇಖರ್, ಗ್ರೇಡ್-2 ತಹಶೀಲ್ದಾರ್ ಜಗನ್ನಾಥ್, ತಾಲೂಕು ವೈದ್ಯಾಧಿಕಾರಿ ರವಿಕುಮಾರ್, ಸಮಾಜ ಕಲ್ಯಾಣಾಧಿಕಾರಿ ದಿನೇಶ್ ಸಾಥ್ ನೀಡಿದರು.

Get real time updates directly on you device, subscribe now.

Comments are closed.

error: Content is protected !!