ವಂಚಕರ ಬಗ್ಗೆ ಎಚ್ಚರ ವಹಿಸಲು ಮನವಿ

207

Get real time updates directly on you device, subscribe now.

ಕುಣಿಗಲ್‌: ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೊರೊನಾ ಹೆಸರಲ್ಲಿ ವಂಚಿಸಿ ಮೋಸ ಮಾಡುವ ಜಾಲವು ತಾಲೂಕಿನ ಅಮೃತೂರು ಹೋಬಳಿ ಸೇರಿದಂತೆ ವಿವಿಧೆಡೆ ವ್ಯವಸ್ಥಿತವಾಗಿ ನಡೆಯುತ್ತಿದ್ದು ಕಟ್ಟಡ ಕಾರ್ಮಿಕರು ಸೇರಿದಂತೆ ಇತರೆ ಯಾವುದೆ ವರ್ಗದ ಕಾರ್ಮಿಕರು ವಂಚಕರ ಜಾಲಕ್ಕೆ ಬಲಿಯಾಗಬಾರದೆಂದು ಕರ್ನಾಟಕ ಕಾರ್ಮಿಕ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಬಿ.ಹೇಮ, ವಿಕಲಾಂಗ ಘಟಕದ ಅಧ್ಯಕ್ಷ ಕೆ.ವಿ.ಚೇತನ್‌ ಮನವಿ ಮಾಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ತಾಲೂಕಿನಲ್ಲಿನ ಕಟ್ಟಡ ಕಾರ್ಮಿಕರಿಗೆ ಮೊಬೈಲ್‌ ಮೂಲಕ ಸಂಪರ್ಕಿಸುವ ವಂಚಕರು ನಿಮ್ಮ ಮನೆಗಳಲ್ಲಿ ಯಾರಾದರೂ ಕೊವಿಡ್‌ ಸೋಂಕಿನಿಂದ ಬಳಲುತ್ತಿದ್ದಲ್ಲಿ, ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಲ್ಲಿ ಅವರು ಸೂಚಿಸುವ ಆಫೀಸ್ ಗೆ ಬಂದು ಸಂಪರ್ಕಿಸಿದಲ್ಲಿ 2 ರಿಂದ 5 ಲಕ್ಷ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ, ಲಕ್ಷ ರೂ. ಗೆ ಇಂತಿಷ್ಟು ಮುಂಗಡ ಹಣ ನೀಡಬೇಕೆಂಬ ಷರತ್ತು ಹಾಕುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಸೇರಿದಂತೆ ಯಾವುದೆ ಕಾರ್ಮಿಕರು ಇಂತಹ ವಂಚಕರ ಮಾತಿಗೆ ಮರುಳಾಗದೆ ಎಚ್ಚರವಹಿಸಬೇಕೆಂದು ಇಂತಹ ಕರೆಗಳು ಬಂದಲ್ಲಿ ಕರೆ ಮಾಡಿದವರ ಬಗ್ಗೆ ಕಾರ್ಮಿಕ ಇಲಾಖಾಧಿಕಾರಿಗಳಿಗೆ, ಹತ್ತಿರದ ಪೊಲೀಸರಿಗೆ ದೂರು ನೀಡಬೇಕೆಂದು ಮನವಿ ಮಾಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!