ತೋಂಟದಾರ್ಯ ಶ್ರೀ ಲಿಂಗೈಕ್ಯ

554

Get real time updates directly on you device, subscribe now.

ಕುಣಿಗಲ್‌: ತಾಲೂಕಿನ ಕಗ್ಗೆರೆ ಗವಿಮಠದ ತೋಂಟದಾರ್ಯ ಶ್ರೀಗಳು (80) ಲಿಂಗೈಕ್ಯರಾಗಿದ್ದಾರೆ. ಅವರಿಗೆ ಹೃದ್ರೋಗ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬೆಳ್ಳೂರಿನ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದ ಕಾರಣ ಗುರುವಾರ ಮುಂಜಾನೆ ಚಿರಶಾಂತಿಗೆ ತೆರಳಿದರು.
ಶ್ರೀಗಳು ಮೂಲತಹ ಕಗ್ಗರೆ ಗ್ರಾಮದ ಸಿದ್ದಲಿಂಗಮ್ಮ, ಚನ್ನವೀರಯ್ಯನವರ ಪುತ್ರರಾಗಿದ್ದು, ಪೂರ್ವಾಶ್ರಮದ ಹೆಸರು ಪರಮೇಶ್‌ ಆಗಿತ್ತು. ಮಾರ್ಕೋನಹಳ್ಳಿ ಜಲಾಶಯ ನಿರ್ಮಾಣದಿಂದಾಗಿ ಎಡೆಯೂರು ಸಮೀಪದಲ್ಲಿದ್ದ ಗವಿಮಠ ಮುಳುಗಡೆಯಾದ ಪರಿಣಾಮ ಕಗ್ಗೆರೆಯಲ್ಲಿ ಗವಿಮಠ ಸ್ಥಾಪನೆಯಾಗಿದ್ದು, 1970 ರಲ್ಲಿ ಕಗ್ಗೆರೆ ಗವಿಮಠದ ಬಸವಲಿಂಗ ಸ್ವಾಮಿಗಳ ನಂತರ ತೋಂಟದಾರ್ಯ ಸ್ವಾಮಿಗಳು ಮೂವತ್ತನೆ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿ ಮಠದ ಅಧಿಕಾರ ವಹಿಸಿಕೊಂಡರು. ಸತತ ಐದು ದಶಕಗಳ ಕಾಲ ಮಠಾಧೀಶರಾಗಿ ಸೇವೆ ಸಲ್ಲಿಸಿ ಸರ್ವರನ್ನು ಸಮಚಿತ್ತದಿಂದ ಕಾಣುತ್ತಿದ್ದ ಶ್ರೀಗಳು ಕಾಯಕ, ದಾಸೋಹಕ್ಕೆ ಹೆಚ್ಚು ಒತ್ತು ನೀಡಿದ್ದರು. ಕಗ್ಗೆರೆ ಮಠದ ಆವರಣದಲ್ಲಿ ಶ್ರೀಗಳ ಸಮಾಧಿ ಕಾರ್ಯ ನೆರವೇರಿತು.
ಮೈಸೂರು ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಶ್ರೀಗಳು, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು, ಎಡೆಯೂರು ಬಾಳೆಹೊನ್ನೂರು ಖಾಸ ಶಾಖ ಮಠದ ರೇಣುಕಾಶಿವಾಚಾರ್ಯ ಶ್ರೀಗಳು ಸೇರಿದಂತೆ ತಾಲೂಕಿನ ವಿವಿಧ ಮಠಾಧೀಶರು, ಶಾಸಕ ಡಾ.ರಂಗನಾಥ್‌, ಮಾಜಿ ಸಚಿವ ಡಿ.ನಾಗರಾಜಯ್ಯ, ಮಾಜಿ ಶಾಸಕ ಬಿ.ಬಿ.ರಾಮಸ್ವಾಮಿಗೌಡ, ಪಿಕಾರ್ಡ್‌ ಬ್ಯಾಂಕ್‌ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್‌ ಸೇರಿದಂತೆ ತಾಲೂಕಿನ ಗಣ್ಯರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

Get real time updates directly on you device, subscribe now.

Comments are closed.

error: Content is protected !!