ಗುಬ್ಬಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬದಲಾವಣೆ ಮಾಡಲೇಬೇಕು ಎಂದು ಸದಸ್ಯರು ಒಕ್ಕೋರಲಿನಿಂದ ಶಾಸಕ ಎಸ್.ಆರ್.ಶ್ರೀನಿವಾಸ್‌ಗೆ ಮನವಿ ಮಾಡಿದ ಘಟನೆ ನಡೆಯಿತು.
ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕೊರೊನಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಮಾತನಾಡಲು ಮುಂದಾದ ತಕ್ಷಣ ಸದಸ್ಯರು ನಮಗೆ ಯಾವುದೇ ಮಾಹಿತಿಯನ್ನು ಪಂಚಾಯತಿ ನೀಡುತ್ತಿಲ್ಲ, ಸದಸ್ಯರು ಯಾವುದೇ ಲೆಕ್ಕಕ್ಕೆ ಇಲ್ಲ ಎಂದು ತಮ್ಮ ಬೇಸರ ವ್ಯಕ್ತಪಡಿಸಿದ ನಂತರ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್ ಕೂಡಲೇ ಬದಲಾವಣೆ ಮಾಡಲಾಗುತ್ತದೆ, ಈ ಪಂಚಾಯತಿಯನ್ನು ಕೆಂಪು ವಲಯ ಎಂದು ಗುರುತು ಮಾಡಲಾಗಿದ್ದು ಬಹಳ ಎಚ್ಚರಿಕೆಯಿಂದ ಇರಬೇಕಿದೆ, ಮುಂದಿನ ದಿನಗಳಲ್ಲಿ ಮೂರನೇ ಅಲೆ ಮಕ್ಕಳಿಗೆ ಬಡಿಯುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೋಷಕರು ಎಚ್ಚರಿಕೆಯಿಂದ ಇರಲು ಮನವಿ ಮಾಡಿದ ಅವರು ಪಾಸಿಟಿವ್ ಬಂದ ಕೂಡಲೇ ಕೋವಿಡ್ ಕೇರ್ ಸೆಂಟರ್ ಗೆ ಕಡ್ಡಾಯವಾಗಿ ಕಳಿಸಲೇಬೇಕು ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಮಾತನಾಡಿ, ಈ ಭಾಗದ ಕಂಚಿಗಾನಹಳ್ಳಿ, ದೊಡ್ಡಗುಣಿ, ತಗ್ಗಿಹಳ್ಳಿ ಗ್ರಾಮದಲ್ಲಿ ಪ್ರಕರಣಗಳ ಸಂಖ್ಯೆ ಜಾಸ್ತಿ ಇದೆ, ಜನರು ಹೆಚ್ಚು ಹೆಚ್ಚು ಹೊರ ಬರುತ್ತಿದ್ದು, ಈ ಭಾಗದಲ್ಲಿ ಇರುವುದರಿಂದ ಕಂಟ್ರೋಲ್ ಆಗುತ್ತಿಲ್ಲ, ನಿಮ್ಮ ಜೀವನ ನಿಮ್ಮ ಕೈನಲ್ಲಿ ಎನ್ನುವುದನ್ನು ಮರೆಯಬೇಡಿ, ಸರಕಾರ ಮಾಡಿರುವ ಆದೇಶವನ್ನು ಎಲ್ಲರೂ ಪಾಲಿಸಿ ಎಂದು ತಿಳಿಸಿದರು.
ಡಿವೈಎಸ್‌ಪಿ ಕುಮಾರಪ್ಪ ಮಾತನಾಡಿ 45 ವರ್ಷದ ಮೇಲ್ಪಟ್ಟವರು ಲಸಿಕೆ ಪಡೆಯಲೇ ಬೇಕಿದೆ, ಇದರಿಂದ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ, ಲಸಿಕೆ ಹಾಕಿಸಿಕೊಂಡರೆ ಅಪಾಯ ಎನ್ನುವ ಸುಳ್ಳು ಸುದ್ದಿಗಳಿಗೆ ಬೆಲೆ ಕೊಡಬೇಡಿ, ಪ್ರತಿಯೊಬ್ಬರು ಸಹ ಲಸಿಕೆ ಪಡೆಯಿರಿ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ಶಿವನಂದ್, ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ನೋಡಲ್ ಅಧಿಕಾರಿ ಆನಂದ್ ಕುಮಾರ್, ಸಿಪಿಐ ನದಾಫ್, ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.
ಗ್ರಾಪಂ ಪಿಡಿಒ ಬದಲಾವಣೆಗೆ ಶಾಸಕರಿಗೆ ಮನವಿ
Get real time updates directly on you device, subscribe now.
Next Post
Comments are closed.