ಲಸಿಕೆ ಮಾರಾಟ: ಇಬ್ಬರ ಸೆರೆ

182

Get real time updates directly on you device, subscribe now.

ತಿಪಟೂರು: ಸರ್ಕಾರ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿರುವ ಸಂದರ್ಭದಲ್ಲಿ ಜನರಿಗೆ ಲಸಿಕೆ ನೀಡುವ ಬದಲು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದವರನ್ನು ತಿಪಟೂರು ಪೊಲೀಸ್ ಉಪಾಧೀಕ್ಷಕ ಚಂದನ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕು ಹೊನ್ನವಳ್ಳಿ ಹೋಬಳಿ ಬೈರಾಪುರ ಗ್ರಾಮದ ಮಲ್ಲೇಶ್ ಬಿನ್ ನಂಜಪ್ಪ ಎಂಬುವವರು ಅದೇ ಗ್ರಾಮದ ವಾಸವಿರುವ ಹಾಲಿ ಚಿ.ನಾ.ಹಳ್ಳಿ ತಾಲ್ಲೂಕು ಹಂದನಕೆರೆ ಹೋಬಳಿ, ಮತ್ತಿಘಟ್ಟ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕಿ ಕೆಲಸ ನಿರ್ವಹಿಸುವ ದಿವ್ಯ ಕೋಂ ಕಿರಣ್ ಕುಮಾರ್ ಎಂಬುವರ ಜೊತೆ ಸೇರಿಕೊಂಡು ಇದೇ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲು ತಂದಿದ್ದ ಕೋವಿಶೀಲ್ಡ್ ಇಂಜೆಕ್ಷನ್ ಕಳವು ಮಾಡಿಕೊಂಡು ಬಂದು ಮಲ್ಲೇಶ್ ಜೊತೆ ಸೇರಿಕೊಂಡು ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮಶೇಖರ್, ಚಿದಾನಂದ ಹಾಗೂ ಇತರ ಜನರಿಗೆ ಕಾನೂನು ಬಾಹಿರವಾಗಿ ನೀಡಿದ್ದರು.
ಇದೀಗ ಇವರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!