ಗೀವ್‌ ಬ್ಯಾಕ್‌ ಕಾರ್ಯ ಶ್ಲಾಘನೀಯ: ಜ್ಯೋತಿಗಣೇಶ್

80

Get real time updates directly on you device, subscribe now.

ತುಮಕೂರು: ಕೊರೊನಾ ಕಷ್ಟದ ಸಮಯದಲ್ಲಿ ಜನರಿಗೆ ಗೀವ್‌ ಬ್ಯಾಕ್‌ ಎನ್ನುವ ಸದ್ದುದ್ದೇಶದಿಂದ ರೋಟರಿ, ರೆಡ್ ಕ್ರಾಸ್‌ ಸಹಯೋಗದೊಂದಿಗೆ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಜ್ಯೋತಿಗಣೇಶ್‌ ಹೇಳಿದರು.
ನಗರದ 34ನೇ ವಾರ್ಡ್ ನಲ್ಲಿ ಪಡಿತರ ಕಿಟ್‌ ವಿತರಿಸಿ ಮಾತನಾಡಿದ ಅವರು, ಎಸ್ ಎಸ್ ಆರ್ ಟಿ ಎಫ್‌ ಅಡಿಯಲ್ಲಿ ಶಿವಪ್ರಸಾದ್‌ ಮಂಜುನಾಥ್‌ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಈ ಸೇವೆಯನ್ನು ರಕ್ಷಿತ್‌ ನೇತೃತ್ವದಲ್ಲಿ ತುಮಕೂರಿನಲ್ಲಿ ಪ್ರಾರಂಭಿಸಲಾಗಿದೆ. ಸ್ವಯಂ ಸೇವಕರನ್ನು ಒಳಗೊಂಡ ತಂಡ ಕೊರೊನಾ ಸೋಂಕಿತರಿಗೆ ಅಗತ್ಯ ಸೇವೆಯನ್ನು ಮನೆ ಮನೆಗೆ ತಲುಪಿಸುವ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳು, ಉದ್ಯಮಿಗಳನ್ನು ಒಳಗೊಂಡ ಈ ತಂಡ ಉತ್ತಮ ಸೇವೆ ಕೊಡುತ್ತಿದ್ದು, ಸಮಾಜದಿಂದ ಪಡೆದಿರುವುದನ್ನು ಸಮಾಜಕ್ಕೆ ವಾಪಾಸ್‌ ನೀಡುವ ಇವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದ್ದು, ಜಿಲ್ಲಾಡಳಿತದ ಕಾರ್ಯದೊಂದಿಗೆ ಈ ತಂಡವನ್ನು ಬಳಸಿಕೊಳ್ಳುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆ ಮತ್ತು ಲಾಕ್ ಡೌನ್ ನಿಂದ ಹಸಿವಿನಿಂದ ಬಳಲುತ್ತಿರುವರಿಗೆ ಆಹಾರ ಸೇರಿದಂತೆ ಹಲವು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ವಯಂ ಸೇವಕರ ಅಗತ್ಯವಿದ್ದು, ಮನೆಯಲ್ಲಿ ಕುಳಿತುಕೊಳ್ಳುವ ಬದಲಾಗಿ ಈ ತಂಡದೊಂದಿಗೆ ಸೇರಿ ಸಮಾಜ ಸೇವೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಗೀವ್ ಬ್ಯಾಕ್ ನ ರಕ್ಷಿತ್‌ ಮಾತನಾಡಿ, ಕೊವಿಡ್ ನಿಂದ ಐಸೋಲೇಷನ್‌ ಮತ್ತು ಕ್ವಾರಂಟೈನ್‌ ಆಗಿರುವವರಿಗೆ ಕಳೆದ 34 ದಿನಗಳಿಂದ ಊಟದ ವ್ಯವಸ್ಥೆ ಮಾಡಿದ್ದು, ಇದುವರೆಗೆ 20 ಸಾವಿರಕ್ಕೂ ಹೆಚ್ಚು ಮಂದಿಗೆ ಸಹಾಯ ಮಾಡಿದ್ದು, ಇಂದಿನಿಂದ ಪಡಿತರ ವಿತರಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಚಂದ್ರಕಲಾ ಪುಟ್ಟರಾಜು, ಜೈನ್‌ ಪಬ್ಲಿಕ್‌ ಶಾಲೆಯ ಚೇತನ್‌, ರೆಡ್ ಕ್ರಾಸ್ ನ ಬಿ.ಆರ್‌.ಉಮೇಶ್‌, ಮಹೇಶಣ್ಣ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!