ಶಿರಾ ತಾಲ್ಲೂಕಿನಲ್ಲಿ ಅಬ್ಬರಿಸಿದ ಮಳೆ- ಕೆರೆ ಕಟ್ಟೆ ಭರ್ತಿ

ಮಲ್ಲಶೆಟ್ಟಿಹಳ್ಳಿ ಬ್ಯಾರೇಜ್ ವೀಕ್ಷಿಸಿದ ರಾಜೇಶ್ ಗೌಡ

555

Get real time updates directly on you device, subscribe now.

ಶಿರಾ: ಶಿರಾ ತಾಲ್ಲೂಕಿನಾದ್ಯಂತ ಭರ್ಜರಿ ಮಳೆಯಾಗಿದ್ದು, ಹಲವಾರು ಕೆರೆ ಕಟ್ಟೆಗಳಿಗೆ, ಪಿಕಪ್ ಹಾಗೂ ಬ್ಯಾರೇಜ್ ಗಳಿಗೆ ನೀರು ಬಂದಿದ್ದು, ಕೆಲವು ಪಿಕಪ್ ಗಳು ತುಂಬಿ ಹರಿದಿವೆ, ಉತ್ತಮ ಮಳೆಗೆ ರೈತರ ಮೊಗದಲ್ಲಿ ಸಂತಸ ತಂದಿದೆ.
ಶಿರಾ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಬ್ಯಾರೇಜ್ ತುಂಬಿ ಹರಿದು ಕಳ್ಳಂಬೆಳ್ಳ ಕೆರೆಗೆ ನೀರು ಹರಿದು ಬರುತ್ತಿದೆ, ಕಳ್ಳಂಬೆಳ್ಳ ಹೋಬಳಿಯ ಕಳ್ಳಂಬೆಳ್ಳ, ಅಮಲಗೊಂದಿ, ಚಿಕ್ಕನಹಳ್ಳಿ, ಯಲದಬಾಗಿ, ಕಂಚಿಗಾನಹಳ್ಳಿ, ಕಾರ್ಪೇ ಹಳ್ಳಿ, ದೊಡ್ಡ ಅಗ್ರಹಾರ, ತಾಳಗುಂದ, ತರೂರು, ಬುಕ್ಕಾಪಟ್ಟಣ ಹೋಬಳಿಯ, ಬುಕ್ಕಾಪಟ್ಟಣ, ರಾಮಲಿಂಗಾಪುರ, ಗೋಪಾಲದೇವರಹಳ್ಳಿ, ಹುಯಿಲ್ ದೊರೆ, ಹೊನ್ನೇನಹಳ್ಳಿ, ಮಣ್ಣಮ್ಮನ ದೇವಸ್ಥಾನ, ಕಸಬಾ ಹೋಬಳಿಯ ಕೊಟ್ಟ, ಮದಲೂರು, ಹೊನ್ನಗೊಂಡನಹಳ್ಳಿ, ಗಜಮಾರನಹಳ್ಳಿ, ಮಾನಂಗಿ, ಭೂವನಹಳ್ಳಿ, ಗೌಡಗೆರೆ ಹೋಬಳಿಯ ಕೆಲ ಭಾಗಗಳಲ್ಲಿ, ಹುಲಿಕುಂಟೆ ಹೋಬಳಿಯ ಬರಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ 35 ಮಿ.ಮೀ, ಬುಕ್ಕಾಪಟ್ಟಪಟ್ಟಣ ಹೋಬಳಿಯಲ್ಲಿ 38, ಗೌಡಗೆರೆ ಹೋಬಳಿ 18, ಹುಲಿಕುಂಟೆ ಹೋಬಳಿ 28 ಮತ್ತು ಕಳ್ಳಂಬೆಳ್ಳ ಹೋಬಳಿಯಲ್ಲಿ 30 ಮಿ.ಮೀ. ಮಳೆಯಾಗಿದೆ.

ಶಾಸಕರ ಭೇಟಿ: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಮಲ್ಲಶೆಟ್ಟಿಹಳ್ಳಿಯ ಬ್ಯಾರೇಜ್ ಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಭೇಟಿ ನೀಡಿ ವೀಕ್ಷಿಸಿದರು. ನಂತರ ಮಾತನಾಡಿ ಈ ಬಾರಿ ಮುಂಗಾರು ಉತ್ತಮವಾಗಿ ಬರುವ ಮುನ್ಸೂಚನೆ ನೀಡಿದ್ದು, ರೈತರ ಮೊಗದಲ್ಲಿ ಸಂತೋಷ ಮೂಡಿದೆ. ಕೋವಿಡ್ ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾಗಿದ್ದ ರೈತರಿಗೆ ಉತ್ತಮ ಮಳೆ ಬಂದು ಉತ್ತಮ ಇಳುವರಿ ಬರಲಿ ಎಂಬುದೇ ನಮ್ಮ ಆಶಯ ಎಂದು ಅವರು ಮಲ್ಲಶೆಟಿಹಳ್ಳಿ ಪಿಕಪ್ ನಿಂದ ನೀರು ಹರಿಯುವಾಗ ಜನರಿಗೆ ಓಡಾಡಲು ರಸ್ತೆ ಇಲ್ಲ ಎಂಬ ಮನವಿಗೆ ಸ್ಪಂದಿಸಿ ಈ ಬಗ್ಗೆ ಕ್ರಮ ಕೈಗೊಂಡು ಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

Get real time updates directly on you device, subscribe now.

Comments are closed.

error: Content is protected !!