ಬೈಕ್ ಗೆ ಲಾರಿ ಡಿಕ್ಕಿ- ಇಬ್ಬರ ದುರ್ಮರಣ

546

Get real time updates directly on you device, subscribe now.

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿಯ ಸಾಗರನಹಳ್ಳಿ ಗೇಟ್‌ ಬಳಿ ಬೈಕ್‌ ಮತ್ತು ಲಾರಿ ನಡುವೆ ಭೀಕರವಾಗಿ ಅಪಘಾತ ನಡೆದಿದ್ದು ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ, ಇನ್ನೊಬ್ಬ ಮಹಿಳೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
ಮೃತರನ್ನು ಪ್ರಿಯಾ (23) ದಾವಣಗೆರೆ, ರಾಮಚಂದ್ರ (25) ಎಂದು ಗುರುತಿಸಲಾಗಿದೆ, ಈ ಇಬ್ಬರು ಕಡೂರು ಕಡೆಯಿಂದ ತುಮಕೂರು ಕಡೆ ತೆರಳುತ್ತಿದ್ದರು ಮಾರ್ಗ ಮಧ್ಯದಲ್ಲಿ ಕ್ಯಾಂಟರ್‌ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಘಟನಾ ಸ್ಥಳಕ್ಕೆ ಗುಬ್ಬಿ ಪಿ ಎಸ್ ಐ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತರ ಶವವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಇಡಲಾಗಿದೆ.

Get real time updates directly on you device, subscribe now.

Comments are closed.

error: Content is protected !!