ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿನ ಆಲದಮರದ ಪಾರ್ಕ್‌ ಕ್ಲೀನ್

ಆಲದ ಮರದ ಪಾರ್ಕ್ ನಲ್ಲಿ ಹಾಲ್ಕೋಹಾಲ್‌ ಘಾಟು

625

Get real time updates directly on you device, subscribe now.

ತುಮಕೂರು: ತುಮಕೂರು ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿರುವ ಆಲದಮರದ ಪಾರ್ಕ್‌ ನೋಡಲು ಸುಂದರವಾಗಿದೆ, ಕಾಲೇಜು ವಿದ್ಯಾರ್ಥಿಗಳು ಇಲ್ಲಿ ಹಾಯಾಗಿ ಕುಳಿತುಕೊಂಡು ಕಾಲ ಕಳೆಯುತ್ತಿದ್ದರು, ಆದರೆ ಕೊರೊನಾ ಲಾಕ್ ಡೌನಿಂದಾಗಿ ಆಲದಮರದ ಪಾರ್ಕ್‌ ಕುಡುಕರ ತಾಣವಾಗಿದೆ, ಇಲ್ಲಿ ಬಿದ್ದಿರುವ ಬಾಟಲ್ ಗಳೇ ಹಾಲ್ಕೋಹಾಲ್‌ ಘಾಟನ್ನು ಹೊರ ಹಾಕುತ್ತಿವೆ.
ಇದನ್ನು ಗಮನಿಸಿದ 15ನೇ ವಾರ್ಡ್ ನ ಕಾರ್ಪೋರೆಟರ್‌ ಗಿರಿಜಾ ಧನಿಯಕುಮಾರ್‌ ಅವರು ಸೋಮವಾರ ಚಕ್ರವರ್ತಿ ಗೆಳೆಯರ ಬಳಗ ಹಾಗೂ ಅಕೇಷನಲ್‌ ಕ್ರಿಕೆಟ್‌ ಅಸೋಸಿಯೇಷನ್‌ ಸದಸ್ಯರ ಸಹಕಾರದೊಂದಿಗೆ ಶುಚಿಗೊಳಿಸುವ ಕಾರ್ಯ ನಡೆಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 99 ಲಕ್ಷ ರೂ.ಗಳಲ್ಲಿ ಜೂನಿಯರ್‌ ಕಾಲೇಜಿನ ಆಲದಮರದ ಪಾರ್ಕ್ ನ್ನು ಅಭಿವೃದ್ಧಿ ಪಡಿಸುವ ಕಾಮಗಾರಿ ನಡೆದಿದ್ದು, ಕೊನೆಯ ಹಂತದಲ್ಲಿದೆ. ಆದರೆ ಕೆಲವರು ಪಾರ್ಕ್ ನಲ್ಲಿ ಮದ್ಯಪಾನ ಮಾಡಿ, ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದಿರುವುದಲ್ಲದೆ ತಿಂಡಿ ತಿಂದ ಪೊಟ್ಟಣಗಳನ್ನು ಬೇಕಾಬಿಟ್ಟಿ ಬಿಸಾಕಿರುವ ಕಾರಣ ಇಡಿ ಪಾರ್ಕ್‌ ಕೊಳೆತು ನಾರುತ್ತಿತ್ತು, ಚಕ್ರವತಿ ಗೆಳೆಯರ ಬಳಗದ ಪ್ರಕಾಶ್‌, ಅಕೇಷನಲ್‌ ಕ್ರಿಕೆಟ್‌ ಅಸೋಸಿಯೇಷನ್ ನ ಲೋಕೇಶ್‌, ಧನಿಯಕುಮಾರ್‌ ಹಾಗೂ ಅವರ ಟೀಮ್ ನ ಸದಸ್ಯರು, ನಗರ ಪಾಲಿಕೆಯ ಪೌರಕಾರ್ಮಿಕ ಸಿಬ್ಬಂದಿಯೊಂದಿಗೆ ಇಡೀ ಪಾರ್ಕ್ ನ್ನು ಶುಚಿಗೊಳಿಸುವ ಕಾರ್ಯ ಕೈಗೊಳ್ಳಲಾಗಿತ್ತು.
ಕಾರ್ಪೋರೇಟರ್‌ ಗಿರಿಜಾ ಧನಿಯಕುಮಾರ್‌ ಅವರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಸ್ಮಾರ್ಟ್ ಸಿಟಿ ಇಂಜಿನಿಯರ್‌ ಚನ್ನವೀರಸ್ವಾಮಿ, ಆಲದಮರದ ಪಾರ್ಕ್ ಅಭಿವೃದ್ಧಿ ಪಡಿಸುವ ಕಾರ್ಯ ಕೊನೆಯ ಹಂತದಲ್ಲಿದೆ, ಜನರಿಗೆ ವಾಕಿಂಗ್ ಪಾರ್ಕ್, ಲೈಟಿಂಗ್‌ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್‌ ಹೀಗೆ ಹತ್ತು ಹಲವು ವ್ಯವಸ್ಥೆ ಇಲ್ಲಿದೆ, ಇಲ್ಲಿಗೆ ಓರ್ವ ಸೆಕ್ಯೂರಿಟಿ ಗಾರ್ಡ್ ನೇಮಿಸಲು ಹಾಗೂ ಡಸ್ಟಬಿನ್ ಗಳನ್ನು ಇಡಲು ಇಂದೇ ಸ್ಮಾರ್ಟ್ ಸಿಟಿ ಎಂಡಿ ಹಾಗೂ ಮುಖ್ಯ ಇಂಜಿನಿಯರ್ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.
ಈ ವೇಳೆ ಕಾರ್ಪೋರೇಟರ್‌ ಗಿರಿಜಾ ಧನಿಯಕುಮಾರ್‌ ಮಾತನಾಡಿ, ಸಾರ್ವಜನಿಕರ ಉಪಯೋಗಕೋಸ್ಕರ ಈ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ, ಆದರೆ ಕೆಲವರು ಇಲ್ಲಿ ಮದ್ಯಪಾನ, ಧೂಮಪಾನ ಮಾಡಿ ಎಲ್ಲೆಂದರಲ್ಲಿ ಬಾಟಲಿಗಳನ್ನು ಎಸೆದು ಹೋಗಿದ್ದಾರೆ, ಪಾರ್ಕ್ ನ ಸುತ್ತಮುತ್ತ ಐದಾರು ಶಾಲಾ ಕಾಲೇಜುಗಳಿವೆ, ವಿದ್ಯಾರ್ಥಿಗಳು ಈ ಪಾರ್ಕ್ ಗೆ ಓದಲು, ತಿಂಡಿ ತಿನ್ನಲು ಬರುವುದು ಸರ್ವೆ ಸಾಮಾನ್ಯ, ಅವರು ಓದಲು ಅಡ್ಡಿಯಿಲ್ಲ, ಆದರೆ ಕೇಕ್‌ ಕತ್ತರಿಸಿ, ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ, ಅಲ್ಲದೆ ತಿಂಡಿ ತಿಂದ ಮೇಲೆ ಬರುವ ವೆಸ್ಟ್ ಅನ್ನು ಡಸ್ಟ್ ಬಿನ್ ಗಳಲ್ಲಿ ಹಾಕಬೇಕು. ಸಾರ್ವಜನಿಕರಾಗಲಿ, ವಿದ್ಯಾರ್ಥಿಗಳಾಗಲಿ ಪಾರ್ಕ್ ನ ಪರಿಸರಕ್ಕೆ ಹಾನಿ ಮಾಡಿದರೆ ಅಂತಹವರ ವಿರುದ್ಧ ಕಾನೂನು ಕ್ರಮಕ್ಕೆ ದೂರು ನೀಡಲಾಗುವುದು, ಪಾರ್ಕ್‌ ಅಭಿವೃದ್ಧಿ ಪಡಿಸಿರುವುದೇ ಸಾರ್ವಜನಿಕರ ಉಪಯೋಗಕ್ಕೆಂದು, ಆದರೆ ಅದರ ದುರುಪಯೋಗವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸುಮಾರು 99 ಲಕ್ಷ ರೂ. ಗಳಲ್ಲಿ ಪಾರಂಪರಿಕ ಆಲದ ಮರಗಳನ್ನು ಬಳಸಿಕೊಂಡು ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಪೊಲೀಸ್‌ ಇಲಾಖೆ ಇಲ್ಲಿ ಗಸ್ತು ಹೆಚ್ಚಿಸಬೇಕು, ವಿಚ್ಚಿದ್ರಕಾರಿ ಶಕ್ತಿಗಳು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಧನಿಯಕುಮಾರ್‌ ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!