ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹರಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರಳೂರು ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ ಸಿಬ್ಬಂದಿ, ಪಂಚಾಯಿತಿ ಸಿಬ್ಬಂದಿ ಹಾಗೂ ಕೊರೊನಾ ಬಾಧಿತರಿಗೆ ದಿನಸಿ ಕಿಟ್ ಮತ್ತು ತರಕಾರಿ ವಿತರಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಸುರೇಶ್‌ಗೌಡ ಅವರ ಮಾರ್ಗದರ್ಶನದಲ್ಲಿ ಹರಳೂರು ಗ್ರಾಪಂ ಅಧ್ಯಕ್ಷ ಎಚ್.ಕೆ.ಶಿವಪ್ರಸಾದ್ ನೇತೃತ್ವದಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ 140 ಕೊರೊನಾ ವಾರಿಯರ್ಸ್ ಗಳಿಗೆ ದಿನಸಿ ಹಾಗೂ ತರಕಾರಿ ಒಳಗೊಂಡ ಕಿಟ್ ಗಳನ್ನು ವಿತರಿಸಿ ಅವರಿಗೆ ಶಾಲು ಹೊದಿಸಿ ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಸುರೇಶ್‌ಗೌಡ, ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ನಾಗರತ್ನ ಶಾಂತರಾಜ್, ಜಯಮ್ಮ, ಕೆ.ಬಿ.ರವಿಕುಮಾರ್, ಕೃಷ್ಣಯ್ಯ, ರಾಧಮ್ಮ, ಎಸ್. ರಾಜಣ್ಣ, ಎಪಿಎಂಸಿ ಮಾಜಿ ಸದಸ್ಯರಾದ ಎಚ್.ಕೆ.ಕುಮಾರಯ್ಯ, ಎನ್.ಎಸ್.ಹೊನ್ನೇಶ್ ಕುಮಾರ್, ಮುಖಂಡ ಸಿದ್ದೇಗೌಡ ಮತ್ತಿತರರು ಪಾಲ್ಗೊಂಡಿದ್ದರು.
ಕೊರೊನಾ ವಾರಿಯರ್ಸ್ ಗಳಿಗೆ ದಿನಸಿ ಕಿಟ್ ವಿತರಣೆ
Get real time updates directly on you device, subscribe now.
Comments are closed.