ತುಮಕೂರು: ತಿಪಟೂರಿನಲ್ಲಿ ಕೊಳಚೆ ನೀರು ಹೇಮಾವತಿ ನಾಲೆಗೆ ಸೇರುತ್ತಿದೆ ಎಂದು ವರದಿಯಾಗಿದೆ, ಆದರೆ ಅದು ಯುಜಿಡಿ ನೀರಲ್ಲ, ಮಳೆ ನೀರು ಹೇಮಾವತಿ ನಾಲೆ ಸೇರಿದೆ ಎಂಬ ಮಾಹಿತಿಯನ್ನು ತಿಪಟೂರು ನಗರ ಸಭೆ ಆಯುಕ್ತರು ಖಚಿತಪಡಿಸಿದ್ದಾರೆ. ಹಾಗಾಗಿ ನಾಗರಿಕರು ಆತಂಕ ಪಡುವ ಅಗತ್ಯವಿಲ್ಲ, ಇದಲ್ಲದೆ ಬುಗುಡನಹಳ್ಳಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರೀಕ್ಷೆ ಮಾಡಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೂ ಸೂಚನೆ ನೀಡಿದ್ದೇನೆ, ಸ್ಥಳ ಪರಿಶೀಲನೆಗೂ ನಿರ್ದೇಶಿಸಿದ್ದೇನೆ, ಯುಜಿಡಿ ಮೂಲಕ ಹೇಮಾವತಿ ನಾಲೆಗೆ ಸೇರುತ್ತಿದ್ದ ಮಳೆ ನೀರು ಹೇಮಾವತಿ ನಾಲೆಗೆ ಸೇರದಂತೆ ವ್ಯವಸ್ಥೆ ಮಾಡಲು ಅಲ್ಲಿನ ನಗರ ಸಭೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ, ನಾನೂ ಸಹ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ, ಜಿಲ್ಲೆಗೆ ಈಗ ಕಾವೇರಿ ನೀರಾವರಿ ನಿಗಮದಿಂದ ಹರಿಯುತ್ತಿರುವುದು ಹೊಸ ನೀರಾಗಿರುವುದರಿಂದ ಮಣ್ಣು ಮಿಶ್ರಿತವಾಗಿ ಕಂಡುಬರುತ್ತಿದೆ. ನೀರಿನ ಶುದ್ಧೆಕರಣವನ್ನು ಸಮರ್ಪಕವಾಗಿ ಆಗುವಂತೆ ಕ್ರಮ ವಹಿಸಲು ಸಂಬಂಧಿಸಿದ ಇಂಜಿನಿಯರ್ ಗಳಿಗೆ ಸೂಚಿಸಿದ್ದೇನೆ, ಜಿಲ್ಲೆಯ ಕುಡಿಯುವ ನೀರಿನ ಬೇಡಿಕೆಗೆ ಅನುಗುಣವಾಗಿ ನಿಗಮದಿಂದ ನೀರು ಹರಿಸಲಾಗಿದೆ, ಯಾವುದೇ ಕುಡಿಯುವ ನೀರಿನ ಸಮಸ್ಯೆಯಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
Comments are closed.