ಜೂಜುಕೋರರ ಬಂಧನ

242

Get real time updates directly on you device, subscribe now.

ವೈ.ಎನ್‌.ಹೊಸಕೋಟೆ: ಗ್ರಾಮದ ನೂತನ ಪಿಎಸ್ ಐ ಎಸ್‌.ಸಿ.ಭಾರತಿ ಮತ್ತು ತಂಡ ಹೋಬಳಿ ಕೇಂದ್ರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜೂಜು ಮತ್ತು ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಹಣ, ಬೈಕ್‌ ಮತ್ತು ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ.
ಪೋತಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3,020 ಹಣ, ಐದು ಮೊಬೈಲ್‌ ಫೋನ್‌ ಮತ್ತು ಒಂದು ಬೈಕನ್ನು ಜಪ್ತಿ ಮಾಡಿದ್ದಾರೆ.
ಸಿದ್ದಾಪುರ ಗ್ರಾಮದ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿ 5 ಜನರನ್ನು ಬಂಧಿಸಿ, ಆರೋಪಿಗಳಿಂದ 1600 ರೂ. ಮತ್ತು 3 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವೈ.ಎನ್‌.ಹೊಸಕೋಟೆಯ ಹಳೆಯ ಅಂಚೆ ಕಚೇರಿಯ ರಸ್ತೆಯಲ್ಲಿ ಮಟಕಾ ಬರೆಯುತ್ತಿದ್ದ ಇಬ್ಬರನ್ನು ಬಂಧಿಸಿ ಆರೋಪಿಗಳಿಂದ 1580 ರೂ. ಜಪ್ತಿ ಮಾಡಲಾಗಿದೆ. ಈ ಸಂಬಂಧ ಒಟ್ಟು 12 ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!