ಸರ್ಕಾರ ಕಲಾವಿದರ ನೆರವಿಗೆ ಧಾವಿಸಲಿ: ಸ್ವಾಮೀಜಿ

341

Get real time updates directly on you device, subscribe now.

ಮಧುಗಿರಿ: ಸಂಸ್ಕೃತಿ, ಪರಂಪರೆ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಕಲಾವಿದರನ್ನು ಸರಕಾರ ಗುರುತಿಸದೆ ಇರುವುದು ವಿಷಾದನೀಯ ಎಂದು ಪಾವಗಡದ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಜಪಾನಂದಜೀ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ತಾಲೂಕಿನ ಬಡ ಕಲಾವಿದರಿಗೆ, ಜಾನಪದ ರಂಗ ಕರ್ಮಿಗಳಿಗೆ ಆಹಾರ ಕಿಟ್‌ ವಿತರಿಸಿ ಮಾತನಾಡಿ, ಹಳ್ಳಿ ಹಳ್ಳಿಗಳಲ್ಲಿ ವಚನಗಳು ಗೀಗಿ ಪದ, ರಂಗ ಗೀತೆಗಳನ್ನು ಹಾಡುವ ಮೂಲಕ ನಮ್ಮ ಪರಂಪರೆ ಸಂಸ್ಕೃತಿ ಉಳಿಸುತ್ತಿರುವ ನಿಮ್ಮನ್ನು ಸರಕಾರ ಇದುವರೆಗೂ ಗುರುತಿಸಿಲ್ಲ, ನಿಮ್ಮ ಕಷ್ಟ ನಷ್ಟಗಳಿಗೆ ಸರಕಾರ ಸ್ಪಂದಿಸಬೇಕು ಎಂದ ಅವರು ಇದು ಆರಂಭ ಮಾತ್ರ, ಈ ದಿನ ಕಲಾವಿದರನ್ನು ಗೌರವಿಸಲಾಗುತ್ತಿದೆ, ನಾಟಕಗಳು ನಮ್ಮ ಜೀವನದಲ್ಲಿ ಆದರ್ಶ ಕಲಿಸಿವೆ, ನಾಟಕ ಪರಂಪರೆಯಿಂದಲೆ ನಮ್ಮ ದೇಶದಲ್ಲಿ ಸತ್ಯ, ಪ್ರಾಮಾಣಿಕತೆ ನ್ಯಾಯ ನೀತಿ ಉಳಿದಿದೆ ಎಂದರು.
ಈ ಕನ್ನಡ ಭವನ ಸರಸ್ವತಿ ಮಂದಿರವಾಗಿದ್ದು ಇದನ್ನು ಪೂರ್ಣಗೊಳಿಸಲು ಶಾಸಕ ಎಂ.ವಿ.ವೀರಭದ್ರಯ್ಯ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ 70 ಮಂದಿ ಕಲಾವಿದರಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಚಿ.ಸೂ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎ.ರಾಮಚಂದ್ರಪ್ಪ, ನರಸೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಜಿ.ಶಾಂತಮ್ಮ, ಕಾರ್ಯಾಧ್ಯಕ್ಷೆ ಕಲ್ಪನಾ ಗೋವಿಂದರಾಜು, ಕಲಾರಂಗದ ಅಧ್ಯಕ್ಷ ಪ.ವಿ.ಸುಬ್ರಮಣ್ಯ, ಕಸಾಪ ಪದಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್‌ ಮೂರ್ತಿ, ಎಂ.ಎನ್‌.ನರಸಿಂಹಮೂರ್ತಿ, ಲಲಿತಾಂಬ, ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ್‌, ಪಾವಗಡ ರಾಮಕೃಷ್ಣ ಸೇವಾಶ್ರಮದ ಸಂಯೋಜಕರಾದ ಶ್ಯಾ.ನ.ಪ್ರಸನ್ನಮೂರ್ತಿ, ಜಯಸಿಂಹ, ವೇಣುಗೋಪಾಲ್‌ ರೆಡ್ಡಿ, ಯೋಗೇಶ್‌, ಟಿ.ಪ್ರಸನ್ನಕುಮಾರ್‌, ರಕ್ತದಾನಿ ಶಿಕ್ಷಕರ ಬಳಗದ ಆರ್‌.ಶಶಿಕುಮಾರ್‌ ಇದ್ದರು.

Get real time updates directly on you device, subscribe now.

Comments are closed.

error: Content is protected !!