ಹೊರ ರಾಜ್ಯದ ಕಾರ್ಮಿಕರನ್ನು ಗುರುತಿಸಿರುವುದು ಶ್ಲಾಘನೀಯ: ಮಾಧುಸ್ವಾಮಿ

ಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಣೆ

149

Get real time updates directly on you device, subscribe now.

ತುಮಕೂರು: ಕೊರೊನಾ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿರುವ ಹೊರ ರಾಜ್ಯದ ಸುಮಾರು 250 ಮಂದಿ ಕೂಲಿ ಕಾರ್ಮಿಕರಿಗೆ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಅಂಡ್‌ ಕಲ್ಚರಲ್‌ ಅಸೋಸಿಯೇಷನ್‌ ವತಿಯಿಂದ ನೀಡಲಾದ ಆಹಾರ ಪದಾರ್ಥದ ಕಿಟ್ ಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ವಿತರಿಸಿದರು.
ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಈ ಕೂಲಿ ಕಾರ್ಮಿಕರು ಹೊರ ರಾಜ್ಯದವರಾಗಿರುವುದರಿಂದ ಈವರೆಗೆ ಯಾವುದೇ ಸಂಘ ಸಂಸ್ಥೆಗಳವರು ಇವರನ್ನು ಗುರುತಿಸಿ ನೆರವಿಗೆ ಧಾವಿಸಿರಲಿಲ್ಲ. ಆದರೆ ಸ್ವಾಮಿ ವಿವೇಕಾನಂದ ಸ್ಪೋರ್ಟ್ಸ್ ಅಂಡ್‌ ಕಲ್ಚರಲ್‌ ಅಸೋಸಿಯೇಷನ್‌ ಸಂಸ್ಥೆ ಹೊರ ರಾಜ್ಯದಿಂದ ಬಂದು ಹಲವು ದಿನಗಳಿಂದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಈ ಕೂಲಿ ಕಾರ್ಮಿಕರ ಸಂಕಷ್ಟವನ್ನು ಅರಿತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಅಗತ್ಯ ಇರುವ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಿತು.
ಕೂಲಿ ಕಾರ್ಮಿಕರಿಗೆ ಆಹಾರ ಕಿಟ್‌ ವಿತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಹೊರ ರಾಜ್ಯದ ಕೂಲಿ ಕಾರ್ಮಿಕರನ್ನು ಗುರುತಿಸಿ ಅವರಿಗೆ ಆಹಾರ ಧಾನ್ಯದ ಕಿಟ್‌ ವಿತರಿಸುತ್ತಿರುವ ಈ ಸಂಸ್ಥೆಯ ಯುವಕರ ಕಾರ್ಯ ಶ್ಲಾಘನಾರ್ಹ ಎಂದರು.
ವಿವೇಕಾನಂದ ಸ್ಪೋರ್ಟ್‌ ಅಂಡ್‌ ಕಲ್ಚರಲ್‌ ಅಸೋಸಿಯೇಷನ್ ನ ಅನಿಲ್‌ ಮಾತನಾಡಿ, ಮೇ 8 ರಿಂದ ನಮ್ಮ ಅಸೋಸಿಯೇಷನ್ ನ ತಂಡ ಸ್ವಯಂ ಪ್ರೇರಿತರಾಗಿ ಕಾರ್ಫೋರೇಷನ್‌ ಜತೆ ಕೆಲಸ ಮಾಡುತ್ತಿದೆ ಎಂದರು.
ನಗರದ 21, 22 ಮತ್ತು 23ನೇ ವಾರ್ಡ್ ಗಳಿಗೆ ನಮ್ಮ ತಂಡ ಮನೆ ಮನೆಗೆ ಹೋಗಿ ಕೋವಿಡ್‌ ದೃಢಪಟ್ಟು ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರಿಗೆ ಅಗತ್ಯ ಇರುವ ಕಿಟ್‌ ವಿತರಿಸಲಾಗುತ್ತಿದೆ. ಜತೆಗೆ ಆಕ್ಸಿ ಮೀಟರ್ ನಲ್ಲಿ ಸೋಂಕಿತರ ಪಲ್ಸ್ ಚೆಕ್‌ ಮಾಡಿ, ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ, ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ಕೆಲಸ ಮಾಡುತ್ತಿರುವ ಸುಮಾರು 250 ಮಂದಿ ಹೊರ ರಾಜ್ಯದ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್‌, ಸಂಘದ ಗೌರವಾಧ್ಯಕ್ಷ ಎನ್‌.ಎಸ್‌.ಜಯಕುಮಾರ್‌, ಬಿಜೆಪಿ ಮುಖಂಡ ಟಿ.ಆರ್‌. ಸದಾಶಿವಯ್ಯ, ಅಸೋಸಿಯೇಷನ್‌ ಸದಸ್ಯರಾದ ಶ್ರೀನಿವಾಸ್‌, ನಿಖಿಲ್ ಗೌಡ, ನಂದೀಶ್‌, ಕಿರಣ್‌, ಪ್ರವೀಣ್‌, ಕಾರ್ತಿಕ್‌ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!