ಕೋವಿಡ್‌ ಕಷ್ಟ ಕಾಲದಲ್ಲಿ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಲಿ

ಭಾರತದಲ್ಲಿ ದೊಡ್ಡ ಕ್ಷೀರ ಕ್ರಾಂತಿಯಾಗಿದೆ: ಪರಂ

209

Get real time updates directly on you device, subscribe now.

ಮಧುಗಿರಿ: ಹಾಲು ಉತ್ಪಾದನೆ ಮಾಡಿ ಯೋಗ್ಯ ರೀತಿಯಲ್ಲಿ ಸಂಗ್ರಹಿಸಿ ವಿತರಣೆ ಮಾಡುತ್ತಿರುವ ಅತಿದೊಡ್ಡ ಕ್ಷೀರ ಕ್ರಾಂತಿ ಭಾರತ ಬಿಟ್ಟರೆ ಬೇರಾವ ದೇಶದಲ್ಲೂ ಆಗಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಪಟ್ಟಣದ ನಂದಿನಿ ಹಾಲು ಶಿಥಲೀಕರಣ ಉಪಕೇಂದ್ರದಲ್ಲಿ ರೈತರಿಗೆ ಪರಿಹಾರದ ಚೆಕ್‌ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹೈನುಗಾರಿಕಾ ಕ್ಷೇತ್ರದಲ್ಲಿ ಗುಜರಾತ್‌ ರಾಜ್ಯದಲ್ಲಿ ನಡೆದ ಆಂದೋಲನದಂತೆ ಕರ್ನಾಟಕದಲ್ಲೂ ಕೂಡ ಕ್ರಾಂತಿ ನಡೆದಿದೆ, ರೈತರ ಆಧಾರ ಸ್ತಂಭವಾಗಿದ್ದ ರಾಸು ಸತ್ತರೆ ಪರಿಹಾರ ನೀಡಿ ಹೈನುಗಾರಿಕೆ ಪ್ರೋತ್ಸಾಹಿಸುವ ಮಟ್ಟಕ್ಕೆ ಒಕ್ಕೂಟಗಳು ಬೆಳೆದಿರುವುದು ಮಹತ್ತರ ಬದಲಾವಣೆ ಎಂದರು.
ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಧುಗಿರಿಯಲ್ಲಿ ಈ ಕೇಂದ್ರ ನಿರ್ಮಾಣವಾಗಿದ್ದು ಅಂದು 25 ಸಾವಿರ ಲೀಟರ್‌ ಹಾಲು ಉತ್ಪಾದನೆ ಇದ್ದು, ಈಗ 75 ಸಾವಿರ ಲೀಟರ್‌ಗೆ ಏರಿ ಇಡೀ ಉಪ ವಿಭಾಗದಲ್ಲಿ ರೈತಾಪಿ ಜನರಿಗೆ ಹೈನುಗಾರಿಕೆಯು ಬದುಕು ಕಟ್ಟಿಕೊಳ್ಳಲು ನೆರವಾಗಿರುವುದು ಸಂತಸದ ವಿಚಾರ ಎಂದರು.
ಕೋವಿಡ್‌ ಕಷ್ಟ ಕಾಲದಲ್ಲಿ ಜನಪ್ರತಿನಿಧಿಗಳು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು, ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯ ತಂದೊಡ್ಡಿದ್ದು, ಮೂರನೇ ಅಲೆಯ ಬಗ್ಗೆ ಜಾಗೃತರಾಗಬೇಕು. ರೋಗಲಕ್ಷಣ ಕಂಡುಬಂದರೆ ನಿರ್ಲಕ್ಷ್ಯ ತೋರದೇ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಒಬ್ಬರಿಗೆ ಬಂದರೂ ವೈರಾಣು ಜೊತೆಯಲ್ಲಿರುವ ಎಲ್ಲರಿಗೂ ಸೋಂಕು ತಗಲುತ್ತದೆ, ಕೊರೊನಾ ಬಗ್ಗೆ ಮೈ ಮರೆಯಬಾರದು, ಅಪಪ್ರಚಾರಗಳಿಗೆ ಕಿವಿಗೊಡದೆ ಕಡ್ಡಾಯವಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ತುಮುಲ್‌ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್‌ ಮಾತನಾಡಿ, ಕೋವಿಡ್ ನಿಂದ ಹಾಲು ಉತ್ಪಾದಕರು ಮತ್ತು ಸಿಬ್ಬಂದಿ ಮೃತಪಟ್ಟರೆ ಹಾಲು ಒಕ್ಕೂಟದ ವತಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಹಾಲು ಉತ್ಪಾದಕರು ನಿಮ್ಮನ್ನೇ ನಂಬಿರುವ ಕುಟುಂಬಗಳಿದ್ದು ನಿಮ್ಮೊಂದಿಗೆ ಅವರ ಸುರಕ್ಷತೆಯೂ ಮುಖ್ಯ, ಕಡ್ಡಾಯವಾಗಿ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ತುಮುಲ್‌ ವತಿಯಿಂದ 22 ರೈತರಿಗೆ ರಾಸು ಮರಣ ಪರಿಹಾರದ ಸುಮಾರು 10 ಲಕ್ಷದ 40 ಸಾವಿರ ರೂ. ಮೊತ್ತದ ಚೆಕ್‌ಗಳನ್ನು ಮತ್ತು ದೊಡ್ಡಮಾಲೂರು, ಕಡಗತ್ತೂರು ಮತ್ತು ಬಡಿಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕಟ್ಟಡ ಅನುದಾನದ ಚೆಕ್‌ ವಿತರಿಸಲಾಯಿತು.
ನಂದಿನಿ ಹಾಲು ಹಾಗೂ ಶಿಥಲೀಕರಣ ಉಪ ಕೇಂದ್ರ, ಶಿಥಿಲ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಮತ್ತು ಬಿಎಂಸಿ ಲಾರಿ ಚಾಲಕರಿಗೆ, ಕೃತಕ ಗರ್ಭಧಾರಣ ಕಾರ್ಯಕರ್ತರು ಮಳೆಗಾಲದಲ್ಲೂ ಕಾರ್ಯ ನಿರ್ವಹಿಸಲು ಉಚಿತವಾಗಿ ಜರ್ಕಿನ್‌, ಮಾಸ್ಕ್, ಸ್ಯಾನಿಟೈಸರ್‌, ಗ್ಲೌಸ್‌ ಹಾಗೂ ತರಕಾರಿ ಕಿಟ್ ಗಳನ್ನು ವಿತರಿಸಲಾಯಿತು.
ಇದೆ ಸಂದರ್ಭದಲ್ಲಿ ವೈಯಕ್ತಿಕವಾಗಿ ಮಧುಗಿರಿ ತಾಲ್ಲೂಕಿನ ತಹಶೀಲ್ದಾರ್ ಗೆ ಉಚಿತವಾಗಿ ಕರ್ನಾಟಕದ ಹೆಮ್ಮೆಯ ಹಾಲಿನ ಬ್ರಾಂಡ್‌ ನಂದಿನಿ ಪ್ರತಿರೋಧ ಶಕ್ತಿವರ್ಧಕ 25 ಬಾಕ್ಸ್ ಹಾಲನ್ನು ಉಚಿತವಾಗಿ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ವೈ.ರವಿ, ಟಿ ಹೆಚ್ ಒ ರಮೇಶ್‌ ಬಾಬು, ಧಾರ್ಮಿಕ ಮುಖಂಡ ಎಂ.ಜಿ.ಶ್ರೀನಿವಾಸಮೂರ್ತಿ, ವಿಸ್ತರಣಾಧಿಕಾರಿ ಶಂಕರ್ ನಾಗ್‌, ಗಿರೀಶ್‌, ವೈದ್ಯ ದೀಕ್ಷಿತ್‌, ಸಿಬ್ಬಂದಿ ಧರ್ಮವೀರ್‌, ದರ್ಶನ್‌, ಹನಮಂತಣ್ಣ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!