ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಣೆ

329

Get real time updates directly on you device, subscribe now.

ತುಮಕೂರು: ನಗರದ ಬ್ರಾಹ್ಮಣ ಸೇವಾ ಸಂಘದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ವೈ.ಎನ್‌.ಶರ್ಮ ಅವರು 300ಕ್ಕೂ ಅಧಿಕ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಿದರು.
ಕೊರೊನಾ ಲಾಕ್ ಡೌನ್‌ ನಿಂದಾಗಿ ಬ್ರಾಹ್ಮಣ ಸಮುದಾಯದ ಅರ್ಚಕರು, ಪುರೋಹಿತರು, ಅಡುಗೆ ಕೆಲಸಗಾರರು, ವಿವಿಧ ವೃತ್ತಿಗಳಲ್ಲಿ ತೊಡಗಿರುವ ನಗರದ ಹಾಗೂ ಜಿಲ್ಲೆಯ ವಿವಿಧ ತಾಲ್ಲುಕುಗಳ ಅಶಕ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನೊಳಗೊಂಡ ಆಹಾರದ ಕಿಟ್‌ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಉಪಾಧ್ಯಕ್ಷ ವೈ.ಎನ್‌.ಶರ್ಮ ಮಾತನಾಡಿ, ಕೊರೊನಾ ಸೋಂಕಿನಿಂದ ಇಂದು ಇಡೀ ಪ್ರಪಂಚ ಅತ್ಯಂತ ಹೀನ ಪರಿಸ್ಥಿತಿಗೆ ತಲುಪಿದ್ದು, ಇಂತಹ ಪರಿಸ್ಥಿತಿ ಬರಬಾರದಿತ್ತು, ಈ ಸಂದರ್ಭದಲ್ಲಿ ನಾವು ನಮ್ಮವರು ಎಂಬ ಭಾವನೆಯನ್ನು ಎಲ್ಲರೂ ಬೆಳೆಸಿಕೊಂಡು ಸಮುದಾಯದಲ್ಲಿನ ಅಶಕ್ತರಿಗೆ ಸಹಕಾರ ನೀಡುವ ಕೆಲಸ ಮಾಡಬೇಕು ಎಂದರು.
ತಾವು ಈಗಾಗಲೇ ತಮ್ಮ ಸ್ನೇಹಿತರೊಂದಿಗೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಆಹಾರ ಪದಾರ್ಥಗಳನ್ನು ನೀಡುವ ಕೆಲಸ ಮಾಡಿದ್ದು, ಈಗ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಭಾದ ಸಹಕಾರದಲ್ಲಿ ಅಶಕ್ತ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.
ಸಮಾಜದಲ್ಲಿ ಇಂದು ಪ್ರತಿಯೊಬ್ಬರು ತಾವು ಗಳಿಸಿದರಲ್ಲಿ ತೊಂದರೆಗೊಳಗಾದವರ ಬಗ್ಗೆ ಗಮನಹರಿಸಿ ಅವರನ್ನು ಕಾಪಾಡುವ ಕೆಲಸ ಮಾಡಬೇಕು. ಮನುಷ್ಯ ಎಷ್ಟೇ ದುಡಿದರೂ ಕೊನೆಯಲ್ಲಿ ತಾನು ಏನನ್ನೂ ಒಯ್ಯಲಾರ, ಹಾಗಾಗಿ ಸಮಾಜ ಸೇವೆಯಲ್ಲಿ ಪ್ರತಿಯೊಬ್ಬರೂ ತೊಡಗಬೇಕು. ತಾವು ನೀಡುತ್ತಿರುವ ಅಲ್ಪ ಪ್ರಮಾಣದ ಸಹಾಯವಾಗಿದ್ದು ಸಮುದಾಯದ ತಮ್ಮ ಸಹೋದರ, ಸಹೋದರಿಗೆ ಸಹಾಯ ಮಾಡುತ್ತಿರುವುದಾಗಿ ತಿಳಿಸಿದರು.
ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಹೆಚ್‌.ಎನ್‌.ಚಂದ್ರಶೇಖರ್‌ ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ವತಿಯಿಂದ ಅಶಕ್ತ ಬ್ರಾಹ್ಮಣ ಕುಟುಂಬಗಳಿಗೆ ಆಹಾರದ ಕಿಟ್‌ ವಿತರಿಸಿದ್ದು ದಾನಿಗಳು ಉದಾರ ಮನೋಭಾವ ಉಳ್ಳವರೂ ಆದ ವೈ.ಎನ್‌.ಶರ್ಮರವರು ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸಮುದಾಯದಲ್ಲಿ ಲಾಕ್ ಡೌನ್‌ನಿಂದ ತೊಂದರೆಗೊಳಗಾದ 300ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್‌ ಒದಗಿಸಿದ್ದಾರೆ. ಅದನ್ನು ಸಂಘದ ಮೂಲಕ ಆದ್ಯತೆಯ ಮೇರೆಗೆ ಅವಶ್ಯಕತೆಯಿರುವ ಕುಟುಂಬಗಳಿಗೆ ತಲುಪಿಸುವ ಕೆಲಸ ಮಾಡುವುದಾಗಿ ತಿಳಿಸಿ ಉದಾರ ಮನಸ್ಸಿನಿಂದ ಆಹಾರ ಪದಾರ್ಥಗಳ ಕಿಟ್‌ ಒದಗಿಸಿದ ವೈ.ಎನ್‌.ಶರ್ಮ ಅವರಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸಿ.ಎನ್‌.ರಮೇಶ್‌, ಸುರೇಶ್‌ ಹೊಳ್ಳ, ಫಣೀಶ್‌, ರಾಘವೇಂದ್ರ, ಡಾ.ಹರೀಶ್‌ ಹಿರಣ್ಣಯ್ಯ, ಸುಭಾಷಿಣಿ ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!