ವದಂತಿಗಳಿಗೆ ಕಿವಿಕೊಡದೆ ಲಸಿಕೆ ಹಾಕಿಸಿಕೊಳ್ಳಿ

529

Get real time updates directly on you device, subscribe now.

ಕುಣಿಗಲ್‌: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಸಿಕೆ ಪಡೆಯುವುದು ಮುಖ್ಯವಾಗಿದೆ, ಲಸಿಕೆ ಪಡೆಯುವ ನಿಟ್ಟಿನಲ್ಲಿ ವದಂತಿಗಳಿಗೆ ಕಿವಿಕೊಡದೆ ಲಸಿಕೆ ಪಡೆದು ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಹೃದ್ರೋಗ ತಜ್ಞ ಡಾ.ನಟರಾಜ್ ಶೆಟ್ಟಿ ತಿಳಿಸಿದರು.
ಬುಧವಾರ ತಾಲೂಕಿನಲ್ಲಿ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕುಣಿಗಲ್‌ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಶೀಲ್ಡ್ ವಿತರಿಸಿ ಮಾತನಾಡಿ, ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಲಸಿಕೆ ಪಡೆಯುವುದು ಉತ್ತಮ ಎಂದು ವೈದ್ಯಕೀಯ ವರದಿಗಳು ದೃಢಿಕರಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆ ಹಾಕಿಸಿಕೊಳ್ಳುವ ಜೊತೆಯಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರ ರೂಪಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೋಂಕು ಮುಕ್ತ ತಾಲೂಕನ್ನಾಗಿ ಮಾಡಲು ಎಲ್ಲರೂ ಶ್ರಮಿಸಬೇಕೆಂದರು.
ಉದ್ಯಮಿ, ಬಿಜೆಪಿ ಮುಖಂಡ ರಾಜೇಶ್ ಗೌಡ ಮಾತನಾಡಿ, ಕೇಂದ್ರ, ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ನಿಯಂತ್ರಣ ನಿಟ್ಟಿನಲ್ಲಿ 18 ಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಉಚಿತ ಲಸಿಕೆ ನೀಡಲು ಬೃಹತ್‌ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸುತ್ತಿದೆ, ಮುಂದಿನ ದಿನಗಳಲ್ಲಿ ಲಸಿಕೆ ವ್ಯಾಪಕವಾಗಿ ಲಭ್ಯವಾಗಲಿದ್ದು, ಅರ್ಹ ವಯೋಮಾನದವರು ಲಸಿಕೆ ಪಡೆದು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಜೊತೆಯಲ್ಲಿ ದೇಶವು ಕೊರೊನಾ ಸೋಂಕು ಮುಕ್ತವನ್ನಾಗಿಸಲು ಸಹಕಾರ ನೀಡಬೇಕೆಂದರು.
ಡಿವೈಎಸ್ಪಿ ರಮೇಶ್‌, ಸಿಪಿಐಗಳಾದ ರಾಜು, ಗುರುಪ್ರಸಾದ್‌, ಬಿಜೆಪಿ ಮುಖಂಡರಾದ ಕೆ.ಎಂ.ತಿಮ್ಮಪ್ಪ,ನಟರಾಜ್‌, ಮಾದಪ್ಪ, ಸತೀಶ್‌, ಪ್ರಾಣೇಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!