3ನೇ ಅಲೆ ತಡೆಗೆ ಸರಕಾರ ವಿಫಲ ಪರಮೇಶ್ವರ ಆರೋಪ

ಕೊರೊನಾ ಹೆಚ್ಚಳಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ: ಪರಮೇಶ್ವರ್

295

Get real time updates directly on you device, subscribe now.

ಕೊರಟಗೆರೆ: ಮುಖ್ಯಮಂತ್ರಿ ಬದಲಾವಣೆ ಬಿಜೆಪಿಯ ಆಂತರಿಕ ವಿಚಾರ, ಕೊರೊನಾ ನಿರ್ವಹಣೆಯ ತುರ್ತು ಪರಿಸ್ಥಿತಿಯ ನಡುವೆ ಬಿಜೆಪಿ ನಾಯಕರ ಸಿಎಂ ಬದಲಾವಣೆಯ ಹೇಳಿಕೆ ಸರಿಯಲ್ಲ, ಬಿಜೆಪಿ ಹೈಕಮಾಂಡ್‌ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ನಮ್ಮ ರಾಜ್ಯದ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ತಿಳಿಸಿದರು.
ಕೊರಟಗೆರೆ ಪಟ್ಟಣದ ತಾಪಂ ಆವರಣದಲ್ಲಿ ಪಡಿತರ ವಿತರಕರ ಸಂಘದಿಂದ ಬುಧವಾರ ಏರ್ಪಡಿಸಲಾಗಿದ್ದ ಬಡ ಜನತೆಗೆ ಆಹಾರ ಕಿಟ್‌ ವಿತರಣಾ ಕಾರ್ಯಕ್ರಮದ ವೇಳೆ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಮಾತನಾಡಿ, ತಜ್ಞರ ಸಲಹೆ ತಿರಸ್ಕಾರ ಮಾಡಿದ ಸರಕಾರದ ನಿರ್ಲಕ್ಷಕ್ಕೆ ಕೊರೊನಾ ಹರಡುವಿಕೆ ಹೆಚ್ಚಾಗಲು ಕಾರಣವಾಗಿದೆ. ಸರಕಾರದ ಮುಖ್ಯಮಂತ್ರಿ ಮತ್ತು ಸಚಿವರ ನಡುವೆ ಸಮನ್ವಯ ಕೊರತೆ ಇದೆ, ಸ್ವಯಂ ಇಚ್ಚಾಶಕ್ತಿ ಆದೇಶಗಳೇ ಮುಖ್ಯಮಂತ್ರಿಗೆ ಸಂಕಷ್ಟ ತಂದಿವೆ. ಸಿಎಂ ಬದಲಾವಣೆಯ ಬಿಜೆಪಿ ನಾಯಕರ ಹೇಳಿಕೆಯಿಂದ ಯಡಿಯೂರಪ್ಪ ದೂರದೃಷ್ಟಿ ಕುರ್ಚಿಯ ಕಡೆ ತಿರುಗಿದೆ ಎಂದು ಆರೋಪ ಮಾಡಿದರು.
ಕರ್ನಾಟಕ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, ಬಡಜನರ ನೇರ ಸಂಪರ್ಕ ಇರುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕೊರೊನಾ ವಾರಿಯರ್ಸ್‌, ಮೃತಪಟ್ಟ ಮಾಲೀಕರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಬೇಕಿದೆ. ಆಹಾರ ಸಚಿವ ಉಮೇಶ್‌ ಕತ್ತಿಯ ಮನೆಯಿಂದ ಬಡ ಜನತೆಗೆ ಪಡಿತರ ನೀಡುತ್ತಿಲ್ಲ. ಜನರ ತೆರಿಗೆಯಿಂದ ನೀಡುತ್ತಿದ್ದಾರೆ. ಸರಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ತಕ್ಕ ಪ್ರತಿಫಲ ಅನುಭವಿಸಬೇಕಿದೆ ಎಂದು ಎಚ್ಚರಿಕೆ ನೀಡಿದರು.
ಕೊರಟಗೆರೆ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ ಮಾತನಾಡಿ ಪ್ರತಿನಿತ್ಯ ಪಡಿತರ ವಿತರಣೆ ಮಾಡುವಾಗ ಹೆಬ್ಬೆಟ್ಟು ಪಡೆಯಬೇಕಾದ ಅನಿವಾರ್ಯತೆ ಇದೆ. ಸರಕಾರಕ್ಕೆ ಮೊಬೈಲ್‌ ಓಟಿಪಿಗೆ ಮನವಿ ಮಾಡಿದರೂ ನಿರ್ಲಕ್ಷ ವಹಿಸಿದೆ. ಕೊರೊನಾ ಹರಡಲು ಸರಕಾರಕ್ಕೆ ನೇರಕಾರಣವಾಗಿದೆ, ರಾಜ್ಯ ಸರಕಾರ ನ್ಯಾಯಬೆಲೆ ಅಂಗಡಿ ಮಾಲೀಕರ ನೆರವಿಗೆ ಧಾವಿಸಬೇಕಿದೆ ಎಂದು ಆಗ್ರಹ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯದರ್ಶಿ ದಿನೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆಶಂಕರ್‌, ಅಶ್ವತ್ಥನಾರಾಯಣ್‌, ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಕಾರ್ಯದರ್ಶಿ ನಾಗೇಶ್‌, ರಮೇಶ್‌, ಯುವ ಅಧ್ಯಕ್ಷ ವಿನಯ್‌, ತುಮುಲ್‌ ನಿರ್ದೆಶಕರಾದ ಈಶ್ವರಯ್ಯ, ಚಂದ್ರಶೇಖರ್‌, ಪಪಂ ಸದಸ್ಯರಾದ ಓಬಳರಾಜು, ನಾಗರಾಜು, ನಂದೀಶ್‌ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!