ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಇಳಿಕೆ

571 ಮಂದಿಗೆ ಸೋಂಕು: 5 ಸಾವು

3,947

Get real time updates directly on you device, subscribe now.

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ. ಗುರುವಾರದಂದು 571 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,10,489 ಕ್ಕೆ ಏರಿಕೆ ಕಂಡಿದೆ. 9,979 ಸಕ್ರಿಯ ಪ್ರಕರಣಗಳ ಪೈಕಿ 569 ಮಂದಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 964 ಮಂದಿ ಕೋವಿಡ್ ಗೆ ಜೀವ ತೆತ್ತಿದ್ದಾರೆ. ತುಮಕೂರು ಹೊರತುಪಡಿಸಿ ಪಾವಗಡ, ಮಧುಗಿರಿಯಲ್ಲಿ ಹೆಚ್ಚು ಮಂದಿ ಬಲಿಯಾಗಿರುವುದು ಕಂಡುಬಂದಿದೆ.
ತುಮಕೂರು ತಾಲ್ಲೂಕಿನಲ್ಲಿ 75, ಚಿನಾಹಳ್ಳಿ 75, ಗುಬ್ಬಿ 62, ಕೊರಟಗೆರೆ 17, ಕುಣಿಗಲ್ 25, ಮಧುಗಿರಿ 49, ಪಾವಗಡ 100, ಶಿರಾ 48, ತಿಪಟೂರು 64, ತುರುವೇಕೆರೆಯಲ್ಲಿ 56 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ 5 ಬಲಿ
ತುಮಕೂರು: ತಾಲೂಕಿನ ಮಹಿಳೆ (70), ಮಹಿಳೆ (67)
ಕೊರಟಗೆರೆ: ತಾಲೂಕಿನ ಮಹಿಳೆ (55)
ಕುಣಿಗಲ್: ತಾಲೂಕಿನ ವ್ಯಕ್ತಿ (45)
ತಿಪಟೂರು: ತಾಲೂಕಿನ ವ್ಯಕ್ತಿ (43)
ಒಟ್ಟು 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!