ಡಾ.ಪರಮೇಶ್ವರರ ಸಿಎಂ ಕನಸು ನನಸಾಗಲಿ: ಹನುಮಂತನಾಥ ಶ್ರೀ

505

Get real time updates directly on you device, subscribe now.

ಕೊರಟಗೆರೆ: 2014ರ ವಿಧಾನಸಭೆ ಚುನಾವಣೆಯಲ್ಲಿ ಡಾ.ಜಿ.ಪರಮೇಶ್ವರ್‌ ಸೋಲಿನಿಂದ ಕಲ್ಪತರು ನಾಡಿನ ಜನತೆಗೆ ತುಂಬಲಾರದ ನಷ್ಟವಾಗಿದೆ. 2023ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದಲೇ ಜಯಗಳಿಸಿ ಕರುನಾಡಿನ ಮುಖ್ಯಮಂತ್ರಿಯ ಕನಸು ನನಸಾಗಲಿ ಎಂದು ಎಲೆರಾಂಪುರ ಶ್ರೀಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಆಶೀರ್ವಾದ ಮಾಡಿದರು.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವ್ಯಾಪ್ತಿಯ ಎಲೆರಾಂಪುರ ಶ್ರೀನರಸಿಂಹಗಿರಿ ಕ್ಷೇತ್ರದಲ್ಲಿ ಭಕ್ತರಿಂದ ಗುರುವಾರ ಏರ್ಪಡಿಸಲಾಗಿದ್ದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿಯ 39ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಡಾ.ಜಿ.ಪರಮೇಶ್ವರ ರಾಜ್ಯದ ಡಿಸಿಎಂ ಆಗಿದ್ದ ವೇಳೆ ಕೊರಟಗೆರೆ ಕ್ಷೇತ್ರದ ಗ್ರಾಮೀಣ ರಸ್ತೆ ಮತ್ತು ಎತ್ತಿನಹೊಳೆ ಯೋಜನೆಗೆ ಬಿಡುಗಡೆ ಆಗಿದ್ದ 250 ಕೋಟಿಗೂ ಅಧಿಕ ಅನುದಾನ ದ್ವೇಷದ ರಾಜಕಾರಣ ಮಾಡಿ ಸರಕಾರ ಹಿಂದಕ್ಕೆ ಪಡೆದಿದೆ, ತುಮಕೂರು ಜಿಲ್ಲೆಯ ಮಾದರಿ ಶಾಸಕರಾಗಿ ಕೊರಟಗೆರೆ ಕ್ಷೇತ್ರದ ಬಡ ಜನರ ಆರೋಗ್ಯ ಸೇವೆ ಮಾಡುತ್ತಿರುವ ಕೆಲಸ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿ ಎಲೆರಾಂಪುರ ಶ್ರೀಮಠದಿಂದ ಪ್ರತಿನಿತ್ಯಧಾರ್ಮಿಕ ಮತ್ತು ಸಾಮಾಜಿಕ ಕೆಲಸ ನಡೆಯುತ್ತಿವೆ, ಮಾನವೀಯ ಮೌಲ್ಯ ಸಾರುತ್ತಿರುವ ಶ್ರೀಕ್ಷೇತ್ರವು ಕೊರಟಗೆರೆಯ ಪುಣ್ಯ ಕ್ಷೇತ್ರ ಆಗಿದೆ, ಬಡ ಜನರಿಗೆ ಸಹಾಯಹಸ್ತ ಮತ್ತು ನಿರಾಶ್ರಿತರಿಗೆ ನೆರವು ನೀಡುತ್ತಿರುವ ಎಲೆರಾಂಪುರ ಶ್ರೀಕ್ಷೇತ್ರದ ಡಾ.ಹನುಮಂತನಾಥ ಸ್ವಾಮೀಜಿ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್‌ ಮಾತನಾಡಿ ಎಲೆರಾಂಪುರ ಶ್ರೀಮಠ ಬಡಮಕ್ಕಳು, ಅನಾಥ ಮಕ್ಕಳ ಪಾಲಿನ ದೇವಾಲಯ ಆಗಿದೆ. ಶ್ರೀಗಳು ಆಶ್ರಯ ಮತ್ತು ಅನ್ನದಾನ ಮಾಡಿ ಧಾರ್ಮಿಕ ಸೇವೆ ಸಾರುತ್ತಿದೆ. ಶ್ರೀಗಳ ಸೇವೆಯ ಜೊತೆ ನಾವೆಲ್ಲರೂ ಸದಾ ಇರುತ್ತೇವೆ. ಶ್ರೀಗಳು ಮಠದ ಜೊತೆ ರೈತನಾಗಿ ಕಾಯಕದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ತಹಶೀಲ್ದಾರ್‌ ಗೋವಿಂದರಾಜು, ಕೋಳಾಲ ಮಹಾಲಕ್ಷ್ಮೀ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಕಾರ್ಯದರ್ಶಿ ದಿನೇಶ್‌, ಶಿವರಾಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅರಕೆರೆ ಶಂಕರ್‌, ಅಶ್ವತ್ಥನಾರಾಯಣ್‌, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ಸದಸ್ಯರವಿಕುಮಾರ್‌, ತೀತಾ ಗ್ರಾಪಂ ಸದಸ್ಯ ರವಿವರ್ಮ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!