ತುಮಕೂರು: ಅತಿಥಿಗೃಹ ಬಿಟ್ಟುಕೊಡುವ ಬಗ್ಗೆ ಜಮೀರ್ ಅಹಮದ್ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅಂತಹವರ ಬಗ್ಗೆ ಸರಿಯಾಗಿ ಮಾತನಾಡಲಿ ಎಂದರು.
ತುಮಕೂರು ಗ್ರಾಮಾಂತರ ಜನರ ಕಷ್ಟದಲ್ಲಿ ಜೊತೆಯಾಗಿರುವ ಶಾಸಕ ಡಿ.ಸಿ.ಗೌರಿಶಂಕರ್ ಅವರಂತೆ ಉಳಿದ ಜನಪ್ರತಿನಿಧಿಗಳು ಕಾರ್ಯನಿರ್ವಹಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಹದಿನೈದು ವರ್ಷದಿಂದ ಮೇಖ್ರಿ ಸರ್ಕಲ್ ನ ಅತಿಥಿಗೃಹವನ್ನು ಕುಮಾರಸ್ವಾಮಿ ಅವರೇ ಬಳಸುತ್ತಿದ್ದರು, ಅದು ಎಲ್ಲರಿಗೂ ಗೊತ್ತಿರುವ ವಿಚಾರ, ಕಳೆದ ಏಳೆಂಟು ವರ್ಷಗಳಿಂದ ಕುಮಾರ ಸ್ವಾಮಿ ಅಲ್ಲಿಗೆ ಹೋಗಿಲ್ಲ, ನನ್ನ ಜೊತೆಗೆ ಕೆಲಸ ಮಾಡುವ ಕೆಲ ಹುಡುಗರು ಅಲ್ಲಿದ್ದರು, ಜೊತೆಗೆ ನನ್ನ ಶೂಟಿಂಗ್ ಉಪಕರಣಗಳು ಇದ್ದವು ಎಂದರು.
ಕಳೆದ ಎರಡು ಮೂರು ದಿನದ ಹಿಂದೆ ಮನೆ ಖಾಲಿ ಮಾಡುವಂತೆ ತಿಳಿಸಿದ್ದರು, ಆದರೆ ಹುಡುಗರೆಲ್ಲ ಕೊರೊನಾ ಕಾರಣದಿಂದ ಮನೆಗೆ ಹೋಗಿದ್ದರಿಂದ ಖಾಲಿ ಮಾಡಲು ಆಗಿರಲಿಲ್ಲ, ಅವರೇ ಹೋಗಿ ಮನೆ ಕೀ ಹೊಡೆದದಿದ್ದಾರೆ, ಅದನ್ನು ನಮ್ಮ ಹುಡುಗರು ಪ್ರಶ್ನಿಸಿದ್ದಕ್ಕೆ ವಾಗ್ವಾದವಾಗಿದೆ ಅಷ್ಟೇ, ಹಲ್ಲೆ ಆಗಿಲ್ಲ, ಗೊಂದಲ ಸೃಷ್ಟಿಸಲು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಜಮೀರ್ ಮರ್ಯಾದೆ ಕೊಟ್ಟು ಮಾತನಾಡಲಿ: ನಿಖಿಲ್
Get real time updates directly on you device, subscribe now.
Next Post
Comments are closed.