ಅತ್ಯಾಚಾರಿ ಆರೋಪಿ ಅರೆಸ್ಟ್

264

Get real time updates directly on you device, subscribe now.

ಮಧುಗಿರಿ: ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿಗೆ ಸೇರಿದ ಕಂತಾನಹಳ್ಳಿ ಗ್ರಾಮದ ಬಳಿಯ 16 ವರ್ಷದ ಅಪ್ರಾಪ್ತ ಯುವತಿ ಮೇಲೆ ದೊಡ್ಡದಾಳವಟ್ಟದ ಉಗ್ರಪ್ಪ (22) ಎಂಬಾತ ಅತ್ಯಾಚಾರ ಎಸಗಿದ್ದು, ಈತನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಯುವತಿ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಸ್ವತಃ ದೂರು ದಾಖಲಿಸಿರುವ ಪ್ರಕಾರ ಆರೋಪಿಯು ಯುವತಿಯೊಂದಿಗೆ ತಮಾಷೆ ಮಾಡುವ ಸೋಗಿನಲ್ಲಿ ಕೆನ್ನೆ, ತಲೆ ಸವರಿದ್ದಾನೆ. ಆಗ ಯುವತಿ ಆರೋಪಿಯ ಕೆನ್ನೆಗೆ ಹೊಡೆದಿದ್ದಾಳೆ, ಈ ಕಾರಣಕ್ಕೆ ಆರೋಪಿ ಯುವತಿಯನ್ನು ಬಲವಂತವಾಗಿ ಆಂಧ್ರದ ಅನಂತಪುರಂ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿ, ಹದಿನೈದು ದಿನಗಳ ಕಾಲ ಮನೆಯಲ್ಲಿಯೇ ಕೂಡಿ ಹಾಕಿಕೊಂಡು ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಮಡಕಶಿರಾ ಪಟ್ಟಣಕ್ಕೆ ಕರೆತಂದು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾನೆ.
ಹೀಗೆಂದು ಜೂನ್ 08 ರಂದು ಯುವತಿ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದರಿ ದೂರಿನನ್ವಯ ಸಿಪಿಐ ಎಂ.ಎಸ್.ಸರ್ದಾರ್, ಠಾಣಾಧಿಕಾರಿ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಉಗ್ರಪ್ಪನನ್ನು ಜೂನ್ 9 ರಂದು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಆರೋಪಿಗೆ ಹದಿನೈದು ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

Get real time updates directly on you device, subscribe now.

Comments are closed.

error: Content is protected !!