ಕುಣಿಗಲ್‌ ಪುರಸಭೆ ಆಡಳಿತ ವಿಫಲ: ಕೃಷ್ಣ

522

Get real time updates directly on you device, subscribe now.

ಕುಣಿಗಲ್‌: ಪುರಸಭೆಯಲ್ಲಿ ಜನತೆಗೆ ಉತ್ತಮ ಆಡಳಿತ ನೀಡುವಲ್ಲಿ ಕಾಂಗ್ರೆಸ್‌ ನೇತೃತ್ವದ ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಪುರಸಭೆ ವಿರೋಧ ಪಕ್ಷದ ಮುಖ್ಯಸ್ಥ, ಬಿಜೆಪಿ ಸದಸ್ಯ ಕೃಷ್ಣ ಆರೋಪಿಸಿದರು.
ಶುಕ್ರವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಇದ್ದರೂ ಕಾಂಗ್ರೆಸ್ ನ ಪವರ್ ಫುಲ್‌ ಹೈಕಮಾಂಡ್‌ ಆದ ಸದಾಶಿವ ನಗರದ ಬಂಗಲೆಯಲ್ಲಿ ಕಾಂಗ್ರೆಸ್‌ ಸದಸ್ಯರಿಗೆ ದುಡ್ಡುಕೊಟ್ಟು, ಪುರಸಭೆ ಅಧಿಕಾರ ಗಿಟ್ಟಿಸಿಕೊಂಡಿದ್ದು, ಇದೀಗ ದುಡ್ಡು ಹಂಚಿಕೆ ಸಮಯದಲ್ಲಿ ಅಧ್ಯಕ್ಷರಿಗೂ, ಉಪಾಧ್ಯಕ್ಷರಿಗೂ ವೈಮನಸ್ಯ ಉಂಟಾಗಿ ಪುರಸಭೆಯಲ್ಲೆ ಕಿತ್ತಾಡಿಕೊಂಡು ಹಣಕೊಡಿಸುವಂತೆ ಅಧ್ಯಕ್ಷರು ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ನೋಡಿದರೆ ದುಡ್ಡಿನ ಸಂಸ್ಕೃತಿಯಿಂದ ಬಂದಿರುವ ಕಾಂಗ್ರೆಸ್‌ ಸದಸ್ಯರು ಜನಪರ ಸೇವೆ ಮಾಡದೆ ದುಡ್ಡು ಹಾಕಿ ದುಡ್ಡು ಮಾಡಲು ಬಂದಿದ್ದಾರೆಯೆ ಎಂಬ ಅನುಮಾನ ಮೂಡುತ್ತದೆ ಎಂದರು.
ಪುರಸಭೆ ಕಾಂಗ್ರೆಸ್‌ ಆಡಳಿತವು ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಕುಮ್ಮಕ್ಕು ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ ಗ್ರಾಮ ಪಂಚಾಯಿತಿ ಜಾಗಗಳನ್ನು ಪುರಸಭೆಗೆ ಸೇರಿಸಿಕೊಳ್ಳಲು, ಆ ಜಾಗಕ್ಕೂ ಪುರಸಭೆಯಲ್ಲಿ ಖಾತೆ ಮಾಡುವ ವ್ಯವಹಾರ ನಡೆಸುತ್ತಾ ಜನಪರ ಸೇವೆಗಳಾದ ಶುದ್ಧ ಕುಡಿಯುವ ನೀರು, ಕಸ ವಿಲೆವಾರಿ, ಬೀದಿದೀಪ ವ್ಯವಸ್ಥೆ ಸರಿಪಡಿಸುವಲ್ಲಿ ಪೂರ್ಣ ವಿಫಲವಾಗಿದ್ದಾರೆ, ವಿರೋಧ ಪಕ್ಷವಾಗಿ ಬಿಜೆಪಿ ಕಾಂಗ್ರೆಸ್ ನ ದುರಾಡಳಿತವನ್ನು ಜನತೆ ಮುಂದಿಟ್ಟು ಇವರ ಅಕ್ರಮಗಳಿಗೆ ಕಡಿವಾಣ ಹಾಕುವುದರ ಜೊತೆಗೆ ಸರ್ಕಾರದ ಮಟ್ಟದಲ್ಲೂ ಪತ್ರ ವ್ಯವಹಾರ ಮಾಡಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಹೋರಾಟ ನಡೆಸುತ್ತದೆ ಎಂದರು.
ಸದಸ್ಯ ಆನಂದಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಪೌರ ಕಾರ್ಮಿಕರಿಗೆ ಎಲ್ಲೆಡೆ ನಿವೇಶನ ನೀಡಿ, ಮನೆ ಕಟ್ಟಿಕೊಟ್ಟು ಉದ್ಘಾಟನೆ ಮಾಡಿದ್ದರೂ ಇಲ್ಲಿ ಏನೊಂದು ಮಾಡಿಲ್ಲ ಎಂದರು.
ಸದಸ್ಯ ನಾಗಣ್ಣ ಮಾತನಾಡಿ, ಗ್ರಾಮ ಠಾಣಾ ಪ್ರದೇಶದ ಖಾತೆ ಕೊಡಿಸುವಲ್ಲಿ ವಿಫಲವಾಗಿದ್ದಾರೆ, ಖಾತೆದಾರರು ದಿನಾಲೂ ಪುರಸಭೆಗೆ ಎಡ ತಾಕಿದ್ದಾರೆ, ಭ್ರಷ್ಟಾಚಾರದ ಕೂಪವಾಗಿದೆ ಎಂದು ಆರೋಪಿಸಿದರು.
ಸದಸ್ಯರಾದ ಗೋಪಿ, ಗೌರಮ್ಮ, ಪ್ರಮುಖರಾದ ಸುರೇಶ್‌, ದೇವರಾಜ, ಕಣ್ಣಪ್ಪ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!