ಕೋವಿಡ್ ವೇಳೆ ಮದ್ಯಪಾನ ಮಿತಿ ಮೀರುದ್ರೆ ದುಷ್ಪರಿಣಾಮ ಖಚಿತ

1,084

Get real time updates directly on you device, subscribe now.

ಇಂದಿನ ನಾಗಲೋಟದ ವಿಲಾಸಿ ಜೀವನ ಕ್ರಮದಲ್ಲಿ ಮದ್ಯಪಾನ ಎನ್ನುವುದು ಸಾಮಾಜಿಕೀಕರಣ ಹೆಸರಿನಲ್ಲಿ ಸರ್ವೆ ಸಾಮಾನ್ಯ ಎಂಬಂತಾಗಿದೆ. ನಮ್ಮ ದೇಹದ ಮೇಲೆ ಮದ್ಯಪಾನದ ಪ್ರಭಾವವು ನಾವು ಮೊದಲ ಸಿಪ್ ತೆಗೆದುಕೊಳ್ಳುವ ಕ್ಷಣದಿಂದ ಪ್ರಾರಂಭವಾಗುತ್ತದೆ. ಅಪರೂಪಕ್ಕೆ ಎಂಬಂತೆ ಎಂದೋ ಒಮ್ಮೊಮ್ಮೆ ಊಟದ ಜೊತೆಗೆ ಸಾಂದರ್ಭಿಕವಾಗಿ ಸೇವಿಸುವ ವೈನ್ ಕಳವಳಕ್ಕೆ ಕಾರಣವಾಗದಿದ್ದರೂ, ಬಿಯರ್, ರಮ್ಮು, ವಿಸ್ಕಿ ಮುಂತಾದ ಸ್ಪಿರಿಟ್ಗಳನ್ನು ಕುಡಿಯುವುದರಿಂದ ಉಂಟಾಗುವ ಸಂಚಿತ ಪರಿಣಾಮಗಳು ಆತಂಕಕಾರಿ ನಷ್ಟಗಳನ್ನುಂಟು ಮಾಡುತ್ತವೆ. ಮಿತಿಯಿಲ್ಲದ ಸೇವನೆ ದೇಹದ ಮೇಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.

ಮದ್ಯಪಾನ ಬಳಕೆ – ಅಸ್ವಸ್ಥತೆ ಮತ್ತು ಕೋವಿಡ್-19: ಮದ್ಯಪಾನದ (alcohol) ಬಳಕೆಯ ಅಸ್ವಸ್ಥತೆಗಳನ್ನು ಎರಡು ವಿಭಾಗವಾಗಿ ಹೇಳಲಾಗಿದೆ. ಮಿತ ಮತ್ತು ಅತಿಯಾದ ಮದ್ಯಪಾನ ಬಳಕೆ. ಜಾಗತಿಕವಾಗಿ ನೋಡಿದಾಗ ಅತೀ ಮದ್ಯಪಾನ ಮಾನಸಿಕ ಅಸ್ವಸ್ಥತೆಯ ಪ್ರಥಮ ಸಂಕೇತವೆಂದು ಪರಿಗಣಿಸಲ್ಪಟ್ಟಿದೆ.
ಕೋವಿಡ್ ಸಮಯದಲ್ಲಿ ಮದ್ಯಪಾನ ಬಳಕೆ ಅಸ್ವಸ್ಥತೆಯಿರುವ ಜನರು ತಮ್ಮ ಆರೋಗ್ಯದ ಮೇಲೆ ಆಲ್ಕೊಹಾಲಿಕ್ ಪ್ರಭಾವ ಬೀರುವುದಲ್ಲದೆ ಅನೇಕರಿಗೆ ಒಂಟಿತನ ಅಥವಾ ಏಕಾನತೆಯ ಮನಸ್ಥಿತಿಯನ್ನು ಅನುಭವಿಸುವ ಸಾಧ್ಯತೆ ಹೆಚಾಗಿರುತ್ತದೆ. ಕೋವಿಡ್ ವಿರುದ್ದ ಹೊರಾಡಲು ಸಂಯಮ ಬೇಕು. ಆದರೆ ಮದ್ಯಪಾನ ವ್ಯಸನ ಹೆಚ್ಚಿಸುವ ಸಾದ್ಯತೆ ಹೆಚ್ಚಿರುತ್ತದೆ. ಕೊರೊನಾದಿಂದ ಚೇತರಿಕೆ ಕಂಡೂ ಮತ್ತೆ ಸೋಂಕಿಗೆ ತುತ್ತಾದವರು ಬಹುತೇಕ ಮದ್ಯವ್ಯಸಿನಗಳೇ ಆಗಿದ್ದಾರೆ. ಲಾಕ್ ಡೌನ್ ವೇಳೆ ಮದ್ಯಪಾನ ಬಳಸುವ ಜನರಲ್ಲಿ ಸಾಮಾನ್ಯವಾಗಿ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಇದು ಹೆಚ್ಚು ಕುಡಿಯುವುದನ್ನು ಪ್ರೋತ್ಸಾಹಿಸುವುದರಿಂದ ವಿನಾಶದ ಸುಳಿಗೆ ಸಿಲುಕಿದಂತಾಗುತ್ತದೆ.

ದೇಹದ ಮೇಲಾಗುವ ಪರಿಣಾಮಗಳು
ಅಂತಃಸ್ರಾವಕ ಗ್ರಂಥಿ (Endocrine glands) : ಹೆಚ್ಚು ಮದ್ಯಪಾನ ಕುಡಿಯುವುದರಿಂದ ಮೇದೋಜ್ಜೀರಕ ಗ್ರಂಥಿಯಿಂದ (pancreas) ಉತ್ಪತ್ತಿಯಾಗುವ ಜೀರ್ಣಕಾರಿ ಕಿಣ್ವಗಳ(digestive enzymes)ಅಸಹಜ ಸಕ್ರಿಯ ಗೊಳಿಸುವಿಕೆಗೆ ಕಾರಣವಾಗಬಹುದು. ಈಕಿಣ್ವಗಳ (enzymes) ರಚನೆಯು ಪ್ಯಾಂಕ್ರಿಯಾಟೈಟಿಸ್ (Pancreatitis:ಮೇದೋಜ್ಜೀರಕ ಗ್ರಂಥಿಯ ಉರಿಯೂತ)ಎಂದು ಕರೆಯಲ್ಪಡುವ ಉರಿಯೂತಕ್ಕೆ ಕಾರಣವಾಗಬಹುದು. ಮೇದೋಜ್ಜೀರಕ ಗ್ರಂಥಿಯ ಉರಿಯೂತವು ದೀರ್ಘಕಾಲದ ಸ್ಥಿತಿಯಾಗಬಹುದು ಮತ್ತು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು.

ಸಕ್ಕರೆ ಮಟ್ಟದಲ್ಲಿ ವ್ಯತ್ಯಯ (Sugar level variation): ಮೇದೋಜ್ಜೀರಕ ಗ್ರಂಥಿಯು ದೇಹದ ಇನ್ಸುಲಿನ್ (Insulin) ಬಳಕೆ ಮತ್ತು ಗ್ಲೂಕೋಸ್ಗೆ ಪ್ರತಿಕ್ರಿಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮೇದೋಜ್ಜೀರಕ ಗ್ರಂಥಿ ಮತ್ತು ಯಕೃತ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ವ್ಯತ್ಯವಾಗಿ ಹೈಪೊಗ್ಲಿಸಿಮಿಯಾ ಅನುಭವಿಸುವ ಅಪಾಯವನ್ನುಎದುರಿಸಬೇಕಾಗುತ್ತದೆ.
ಹಾನಿಗೊಳಗಾದ ಮೇದೋಜ್ಜೀರಕ ಗ್ರಂಥಿಯು ಸಕ್ಕರೆಯನ್ನು ಬಳಸಿಕೊಳ್ಳಲು ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸುವುದನ್ನು ತಡೆಯಬಹುದು. ಇದು ರಕ್ತದಲ್ಲಿನ ಅತಿಯಾದ ಸಕ್ಕರೆಗೆ (hyperglycemia)ಕಾರಣವಾಗಬಹುದು. ದೇಹವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಸಮತೋಲನ ಗೊಳಿಸಲು ಸಾಧ್ಯವಾಗದಿದ್ದರೆ, ಮಧು ಮೇಹಕ್ಕೆ ಸಂಬಂಧಿಸಿದ ಹೆಚ್ಚಿನ ತೊಂದರೆಗಳು ಮತ್ತು ಅಡ್ಡಪರಿಣಾಮಗಳನ್ನು ಅನುಭವಿಸಬಹುದು. ಮಧುಮೇಹ ಇರುವವರು ಅತಿಯಾದ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವಿಸುವುದನ್ನು ತಪ್ಪಿಸುವುದು ಬಹಳ ಮುಖ್ಯ.

ಕೇಂದ್ರ ನರಮಂಡಲ(Central Nervous system or CNS): ಆಲ್ಕೋಹಾಲ್ ನಿಂದ ನರಮಂಡಲಗೆ ಹಾನಿ ಮಾಡುತ್ತದೆ. ಮಂದವಾದ ಮಾತು (ಪದಗಳ ಕಳಪೆ ಉಚ್ಚಾರಣೆ, ಗೊಣಗಾಟ, ಅಥವಾ ಮಾತನಾಡುವಾಗ ವೇಗ ಅಥವಾ ಲಯದಲ್ಲಿನ ಬದಲಾವಣೆ) ಹೆಚ್ಚು ಕುಡಿಯುವುದನ್ನು ಸೂಚಿಸುವ ಮೊದಲ ಚಿಹ್ನೆಗಳಲ್ಲಿ ಒಂದಾಗಿದೆ. ಆಲ್ಕೊಹಾಲ್ ಒಮ್ಮೆ ಮೆದುಳು ಮತ್ತು ದೇಹದ ನಡುವಿನ ಸಂವಹನವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಮನ್ವಯ ಕಷ್ಟಕರವಾಗಿಸುತ್ತೆ. ಮದ್ಯ ಸೇವೆನ ನಂತರ ಎಂದಿಗೂ ವಾಹನಚಲಾಯಿಸಬಾರದು. ಕಾಲು, ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನಿಸುವಿಕೆ ಸಂವೇದನೆಗಳು ಕಂಡು ಬರುತ್ತದೆ. ಯೋಚಿಸುವ, ನಿರ್ಧರಿಸುವ ಸಾಮರ್ಥ್ಯ ಕುಗ್ಗಿಸುತ್ತದೆ. ಮುಂದುವರೆಸು ಮೆದುಳಿನ ಮುಂಭಾಗದ ಭಾಗ ಹಾನಿಯಾಗಲು ಆರಂಭಿಸುತ್ತೆ.
ಮೆದುಳಿನ ಈ ಪ್ರದೇಶವು ಇತರ ಪ್ರಮುಖ ಪಾತ್ರಗಳಿಗೆ ಹೆಚ್ಚುವರಿಯಾಗಿ ಭಾವನಾತ್ಮಕ ನಿಯಂತ್ರಣ, ಅಲ್ಪಾವಧಿಯ ನೆನಪು, ಕ್ರಮಬದ್ದ ನಿರ್ಧಾರ ವಿಫಲವಾಗುವುದಕ್ಕೆ ಕಾರಣವಾಗಿದೆ. ದೀರ್ಘಕಾಲೀನ ನೆನಪು ನಷ್ಟವೂ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅವಲಂಬನೆ (Dependensy): ಅತಿಯಾಗಿ ಮದ್ಯ ಸೇವಿಸಿದ ಮೇಲೆ ದೈಹಿಕ (physical) ಮತ್ತು ಭಾವನಾತ್ಮಕ ಅವಲಂಬನೆಯನ್ನು ಬೆಳೆಸಿಕೊಳ್ಳಬಹುದು. ಮಧ್ಯಪಾನ ತ್ಯಜಿಸಲು ಬಯಸುವ ಅನೇಕರು ಮೊದಮೊದಲು ವಾಪಸಾತಿ ಕ್ಷಣಗಳುಹೆಚ್ಚಾಗಿಕಾಡುತ್ತವೆ. ಈ ಸಮಯದಲ್ಲಿ ಕಾಣಿಸಿಕೊಳ್ಳುವ ಕೆಲಮನೋದೈಹಿಕ ಲಕ್ಷಣಗಳೆಂದರೆ..ಆತಂಕ, ಹೆದರಿಕೆ, ವಾಕರಿಕೆ, ನಡುಕ, ಅತಿಯಾದ ರಕ್ತದೊತ್ತಡ, ಅನಿಯಮಿತ ಹೃದಯಬಡಿತ, ಹೆಚ್ಚು ಬೆವರುವುದು ಮತ್ತು ಕೆಲವು ತೀವ್ರತರವಾದ ಪ್ರಕರಣಗಳಲ್ಲಿ ರೋಗ ಗ್ರಸ್ತವಾಗುವಿಕೆ, ಅರೆ ಹುಚ್ಚು, ಮಾನಸಿಕ ಅಸ್ವಸ್ಥತೆಯಂತ ಹಾನಿಗಳು ಸಂಭವಿಸಬಹುದು.

ಜೀರ್ಣಾಂಗ (Digestive system) ವ್ಯವಸ್ಥೆ ಮೇಲೆ ಡ್ಡಪರಿಣಾಮ: ಮದ್ಯ ಸೇವೆನೆಯಿಂದ ಜೀರ್ಣಾಂಗವ್ಯೂಹದ ಅಂಗಾಂಶಗಳಿಗೆ ಹಾನಿಯಾಗುತ್ತದೆ. ಕರುಳು ಆಹಾರವನ್ನು, ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಹೀರಿಕೊಳ್ಳುವ ಶಕ್ತಿ ಕಳೆದು ಹೋಗುತ್ತದೆ, ಆದ್ದರಿಂದ ಅಪೌಷ್ಟಿಕತೆ (Malnutrition) ಸಂಭವಿಸುತ್ತದೆ.
ಹೊಟ್ಟೆ ಉಬ್ಬುವುದು, ಹಸಿವಾಗದಿರುವುದು, ಅತಿಸಾರ ಮತ್ತು ಮಲಬದ್ಧತೆಯು ಸಂಭವಿಸುವ ಸಾಧ್ಯತೆಗಳಿವೆ. ಮತ್ತೆ ಹುಣ್ಣು ಅಥವಾ ಮೂಲವ್ಯಾಧಿ ಸಾಮಾನ್ಯವಾಗಿರುತ್ತದೆ. ಅವು ಅಪಾಯಕಾರಿ ಆಂತರಿಕ ರಕ್ತಸ್ರಾವಕ್ಕೆ(internal bleeding) ಕಾರಣವಾಗಬಹುದು. ಸೂಕ್ತ ಸಮಯದಲ್ಲಿ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆನೀಡದಿದ್ದರೆ ಆಂತರಿಕ ಹುಣ್ಣುಗಳು ಮಾರಣಾಂತಿಕವಾಗಬಹುದು.

ಕ್ಯಾನ್ಸರ್: ಗಂಟಲು, ಅನ್ನನಾಳ, ದೊಡ್ಡಕರುಳು ಅಥವಾ ಪಿತ್ತಜನಕಾಂಗದ ಕ್ಯಾನ್ಸರ್ ಗೆ ಅಪಾಯ ಉಂಟು ಮಾಡುತ್ತದೆ. ಅನೇಕ ಅಧ್ಯಯನಗಳ ಪ್ರಕಾರ ಭಾರೀ ಆಲ್ಕೊಹಾಲ್ ಬಳಕೆ ಮೇದೋಜ್ಜೀರಕಗ್ರಂಥಿಯ ಕ್ಯಾನ್ಸರ್ ಗೆ ಕಾರಣವಾಗಿದೆ. ನಿಯಮಿತವಾಗಿ ಮದ್ಯಪಾನದ ಒಟ್ಟಿಗೆ ತಂಬಾಕು ಬಳಸುವ ಜನರಿಗೆ ಹೆಚ್ಚಿನ ಅಪಾಯವಿದೆ.

ಹೃದಯ: ದೀರ್ಘಕಾಲದವರೆಗೆ ಮದ್ಯಪಾನ ಮಾಡುವ ಜನರಿಗೆ ಹೃದಯಸಂಬಂಧಿತ ಸಮಸ್ಯೆಗಳ ಅಪಾಯ ಹೆಚ್ಚು. ಪುರುಷರಿಗಿಂತ ಮಹಿಳೆಯರಿಗೆ ಹೃದ್ರೋಗ ಬರುವಸಾಧ್ಯತೆ ಹೆಚ್ಚು.

ರಕ್ತ ಪರಿಚಲನಾ ವ್ಯವಸ್ಥೆಯ ತೊಡಕುಗಳು (Complications of circulatory system): ತೀವ್ರರಕ್ತದೊತ್ತಡ, ಅನಿಯಮಿತ ಹೃದಯಬಡಿತ, ರಕ್ತವನ್ನುಪಂಪ್ ಮಾಡಲು ತೊಡಕುಗಳು, ಸ್ಟ್ರೋಕ್, ಹೃದಯಾಘಾತ, ಹೃದಯರೋಗಕ್ಕೆ ಕಾರಣವಾಗುತ್ತೆ.

ಅಸಮರ್ಪಕ ಕಾಯಿಲೆ, ರಕ್ತಹೀನತೆ: ಆಹಾರದಿಂದ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುವ ತೊಂದರೆ ರಕ್ತಹೀನತೆಗೆ ಕಾರಣವಾಗಬಹುದು. ಕಡಿಮೆ ಕೆಂಪುರಕ್ತ ಕಣಗಳ ಸಂಖ್ಯೆಯನ್ನು ಹೊಂದಿರುವಸ್ಥಿತಿ ಇದು. ರಕ್ತ ಹೀನತೆಯ ದೊಡ್ಡ ಲಕ್ಷಣವೆಂದರೆ ಆಯಾಸ.

ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಮೇಲಾಗುವ ಅಡ್ಡಪರಿಣಾಮಗಳು (Sexual & Reproductive health): ಧೀರ್ಘ ಕಾಲದ ತೀವ್ರ ಮದ್ಯ ವ್ಯಸನಿ ಪುರುಷರು ನಿಮಿರುವಿಕೆಯ ಸಮಸ್ಯೆಯನ್ನು(erectile dysfunction) ಅನುಭವಿಸುವ ಸಾಧ್ಯತೆ ಹೆಚ್ಚು. ಅತಿಯಾದ ಮದ್ಯಪಾನವು ಲೈಂಗಿಕ ಹಾರ್ಮೋನ್ ಉತ್ಪಾದನೆಗೆ ಕಡಿವಾಣ ಹಾಕಿ ಪುರುಷರ ಕಾಮಾಸಕ್ತಿಯನ್ನು (ಲೈಂಗಿಕಬಯಕೆ) ಕಡಿಮೆ ಮಾಡುತ್ತದೆ. ಹೆಚ್ಚು ಕುಡಿಯುವ ಮಹಿಳೆಯರಲ್ಲಿ ಅಂಡಾನುವಿನ ಉತ್ಪತ್ತಿಯು ಕಡಿಮೆಯಾಗುತ್ತದೆ ಮತ್ತು ಮುಟ್ಟಿನ ನಿಲುಗಡೆ ಸಾಧ್ಯತೆ ಹೆಚ್ಚು. ಅದು ಬಂಜೆತನಕ್ಕೆ ಕಾರಣವಾಗುವ ಸಾಧ್ಯತೆಗಳನ್ನು ವೃದ್ದಿಸುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಹೆಚ್ಚು ಕುಡಿಯುವ ಮಹಿಳೆಯರಿಗೆ ಅಕಾಲಿಕ ಹೆರಿಗೆ, ಗರ್ಭಪಾತ ಅಥವಾ ಹೆರಿಗೆ ಸಮಯದಲ್ಲಿ ಸುಸೂತ್ರ ಹೆರಿಗೆಗೆ ಅನೇಕ ತೊಂದರೆ ಉಂಟು ಮಾಡುತ್ತದೆ. ಗರ್ಭಿಣಿಯಾಗಿದ್ದಾಗ ಮದ್ಯಪಾನ ಮಾಡುವ ಮಹಿಳೆಯರು ತಮ್ಗೆ ಹುಟ್ಟಲಿರುವ ಮಗುವನ್ನು ಅಪಾಯಕ್ಕೆ ದೂಡುತ್ತಾರೆ. ಭ್ರೂಣದ ಮೇಲೆ ಆಲ್ಕೋಹಾಲ್ ಸಿಂಡ್ರೋಮ್ ಅಸ್ವಸ್ಥತೆಗಳು (FASD: Fetal alcohol syndrome disorders) ಮತ್ತದರ ಅಡ್ಡಪರಿಣಾಮಗಳು ಗಂಭೀರವಾಗಿರುತ್ತದೆ.

ಸಾಮಾನ್ಯವಾಗಿ ಕಾಣಿಸುವ ಇತರೆ ಅಡ್ಡಪರಿಣಾಮಗಳು
• ಶೀಘ್ರ ಕಲಿಕೆಯ ವಿಷಯದಲ್ಲಿ (learning difficulties)
• ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು (long- termhealth issues)
• ಭಾವನಾತ್ಮಕ ಸಮಸ್ಯೆಗಳು (emotional problems)
• ದೈಹಿಕ ಅಭಿವೃದ್ಧಿ ವೈಪರೀತ್ಯಗಳು (physcicaldevelopment abnormalities)

ಅಸ್ಥಿಪಂಜರದ ಮತ್ತು ಸ್ನಾಯು ವ್ಯವಸ್ಥೆಗಳು: ದೀರ್ಘಕಾಲೀನ ಆಲ್ಕೊಹಾಲ್ ಬಳಕೆಯಿಂದ ಮೂಳೆಗಳು ಶಕ್ತಿ ಕಳೆದುಕೊಂಡು ದುರ್ಬಲವಾಗುತ್ತದೆ. ಮೂಳೆಗಳ ಒಟ್ಟಳತೆ ಮತ್ತು ಆಕಾರದಲ್ಲಿ ವ್ಯತ್ಯಯವಾಗಿ ಮೂಳೆ ಮುರಿತದಂತ ಸಮಸ್ಯೆಗಳು ಉಲ್ಬಣಿಸುತ್ತದೆ. ಮೂಳೆ ಮುರಿತವಾದರೆ ಮರು ಕೂಡಿಕುವಿಕೆ ಅಥವಾ ರೋಗಗಳಿಂದ ಗುಣಮುಖರಾಗಲು ಬಹಳ ಸಮಯ ಬೇಕಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಸ್ನಾಯುಗಳ ದೌರ್ಬಲ್ಯ, ಸೆಳೆತ ಮತ್ತು ಅಂತಿಮವಾಗಿ ಕ್ಷೀಣತೆ ಉಂಟಾಗುತ್ತದೆ.
ರೋಗ ನಿರೋಧಕ ವ್ಯವಸ್ಥೆಯ (Immunity System) ಮೇಲಾಗುವ ಪರಿಣಾಮ :
ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯಲ್ಲಿ ಏರುಪೆರಾಗುತ್ತದೆ. ಆಕ್ರಮಣಕಾರಿ ಸೂಕ್ಷ್ಮಜೀವಿಗಳು ಮತ್ತು ವೈರಾಣುಗಳ ವಿರುದ್ದ ಹೋರಾಡುವ ಸಹಜ ಶಕ್ತಿಯನ್ನು ಕುಂದಿಸುತ್ತದೆ. ಉದಾಹರಣೆಗೆ COVID-19 ಅನ್ನು ಉತ್ಪಾದಿಸುವ SARS-CoV-2 ಎಂಬ ಹೊಸ ಕೊರೊನಾ ವೈರಸ್ ವಿರುದ್ಧ ಹೋರಾಡಲು ನಮ್ಮ ರೋಗನಿರೋಧಕ ವ್ಯವಸ್ಥೆಯು ವಿಫಲವಾಗುತ್ತದೆ. ದೀರ್ಘಕಾಲದವರೆಗೆ ಹೆಚ್ಚು ಕುಡಿಯುವ ಜನರು ಸಾಮಾನ್ಯ ಜನರಿಗಿಂತ ನ್ಯುಮೋನಿಯಾ ಅಥವಾ ಕ್ಷಯರೋಗಕ್ಕೆ ತುತ್ತಾಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ಮದ್ಯಪಾನದಿಂದ ಬಾಯಿ, ಸ್ತನ ಮತ್ತು ಕೊಲೊನ್ ಸೇರಿದಂತೆ ಹಲವಾರು ರೀತಿಯ ಕ್ಯಾನ್ಸರ್ ಅಪಾಯಗಳು ಹೆಚ್ಚಾಗುತ್ತವೆ.
ಮದ್ಯಪಾನದ/ಆಲ್ಕೊಹಾಲ್-ಸಂಬಂಧಿತ ಜಠರಗರುಳಿನ ಕಾಯಿಲೆಗಳು (Gastrointestinal diseases or Digestive diseases ಜೀರ್ಣಕಾರಿಕಾಯಿಲೆಗಳು) ಮತ್ತು ಯಕೃತ್ತಿನ(Liver)ಕಾಯಿಲೆಗಳು
2020 ರಲ್ಲಿCOVID-19 ಸಾಂಕ್ರಾಮಿಕ ಸಮಯದಲ್ಲಿ ಆಲ್ಕೊ ಹಾಲ್-ಸಂಬಂಧಿತ ಜಠರಗರುಳಿನ ಕಾಯಿಲೆಗಳು (Gastrointestinal diseases or Digestive diseases ಜೀರ್ಣಕಾರಿ ಕಾಯಿಲೆಗಳು) ಮತ್ತು ಯಕೃತ್ತಿನ(Liver)ಕಾಯಿಲೆಗಳಿಗೆ ತುತ್ತಾಗುವ ಒಳರೋಗಿಗಳ ಸಂಖ್ಯೆ ಅಧಿಕವಾಗಿದೆ. ಆಲ್ಕೊಹಾಲ್-ಸಂಬಂಧಿತ ಜಠರಗರುಳಿನ ಕಾಯಿಲೆಗಳು (ಜೀರ್ಣಕಾರಿಕಾಯಿಲೆಗಳು) ಮತ್ತು ಯಕೃತ್ತಿನ ಕಾಯಿಲೆಗಳಿಗೆ ಎಂಡೋಸ್ಕೋಪಿಕ್ ಅಗತ್ಯವಿರುವ ಒಳರೋಗಿಗಳ ಪ್ರಮಾಣವು ಹೆಚ್ಚಾಗಿದೆ. COVID-19 ಸಮಯದಲ್ಲಿ ಮದ್ಯಪಾನ-ಸಂಬಂಧಿತ ಯಕೃತ್ತಿನ ಕಾಯಿಲೆ ಮತ್ತು ಮೇದೋಜ್ಜೀರಕ ಗ್ರಂಥಿಯ ಆಸ್ಪತ್ರೆಯಲ್ಲಿ ದಾಖಲಾತಿ ಹೆಚ್ಚಾಗಿದೆ. ಇದು ಆಲ್ಕೊಹಾಲ್ (ಮದ್ಯಪಾನದ) ಸೇವನೆಯ ಹೆಚ್ಚಳ ಮತ್ತು ಮೊದಲೇ ಅಸ್ತಿತ್ವದಲ್ಲಿರುವ ಯಕೃತ್ತಿನ ಗಾಯದ ಉಲ್ಬಣದಿಂದಾಗಿ ಉಂಟಾಗಿದೆ ಎಂದು ತಜ್ಞರ ವರದಿಯಲ್ಲಿ ಉಲ್ಲೇಖವಾಗಿದೆ. ಹೆಚ್ಚಿದ ಮದ್ಯಪಾನದಿಂದ ದೀರ್ಘಕಾಲೀನ ಪರಿಣಾಮವಾಗಿ ಆಲ್ಕೊಹಾಲ್-ಸಂಬಂಧಿತ ಯಕೃತ್ತಿನ ಸಿರೋಸಿಸ್(Cirrhosis) ಜೀವಕೋಶಗಳ ಅವನತಿ, ಉರಿಯೂತ ಮತ್ತು ಅಂಗಾಂಶದ ನಾರಿನ ದಪ್ಪವಾಗುವುದರಿಂದ ಗುರುತಿಸಲ್ಪಟ್ಟ ಯಕೃತ್ತಿನ ದೀರ್ಘ ಕಾಲದ ಕಾಯಿಲೆ) ಮತ್ತು ಯಕೃತ್ತಿನ ಕ್ಯಾನ್ಸರ್ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಪುರುಷರು, ಅವಿವಾಹಿತರು ಮತ್ತು ಯುವಕರು ಮದ್ಯಪಾನದ ಚಟಕ್ಕೆ ಹೆಚ್ಚು-ಹೆಚ್ಚು ಬಲಿಯಾಗುತ್ತಿದ್ದಾರೆ.

ಸಾಂಕ್ರಾಮಿಕ ಸಮಯದಲ್ಲಿ ಮದ್ಯವ್ಯಸನ ಅತಿಯಾಗಲು ಕಾರಣಗಳು :
1) ಲಾಕ್ಡೌನ್ ಸಮಯದಲ್ಲಿ ಅನೇಕ ಜನರು ಸಾಮಾಜಿಕ ಪ್ರತ್ಯೇಕತೆ (socialisolation), ನಿರುದ್ಯೋಗ, ಆರ್ಥಿಕ ಅಭದ್ರತೆಯಿಂದಾಗುವ ಆತಂಕ (anxiety)ಮತ್ತು ಖಿನ್ನತೆಯ ಗಳಿಂದ (depression)
ಅನೇಕ ಜನರು ನಕಾರಾತ್ಮಕ ಪರಿಣಾಮಗಳನ್ನು ಅನುಭವಿಸಿದರು.
2) ಸಾಂಕ್ರಾಮಿಕ ಹೆಚ್ಚುತ್ತಿರುವ ಸಮಯದಲ್ಲಿ ಅವಶ್ಯವಿರುವ ಆರೋಗ್ಯ ಸಂಬಂಧಿಯ ಮತ್ತು ಆರೋಗ್ಯ ಪ್ರವೇಶದ ಆರೈಕೆ ಅವಶ್ಯಕತೆಗಳ ಕೊರತೆ.
3) ನಕಾರಾತ್ಮಕ ಭಾವನೆಗಳು, ಖಿನ್ನತೆ ಮತ್ತು ಆತಂಕದ ಲಕ್ಷಣಗಳೊಂದಿಗೆ ಒತ್ತಡವನ್ನು ನಿಭಾಯಿಸಲು ಆಶಕ್ತರಾಗಿ ಮದ್ಯಪಾನದ ದಾಸರಾಗುವುದು.
4) COVID-19 ನಿಂದ ಉಂಟಾಗುವ ಲಾಕ್ಡೌನ್ ಮತ್ತು ದೈಹಿಕ ದೂರವು ಪ್ರತ್ಯೇಕತೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ಆಲ್ಕೊಹಾಲ್ ಸೇವನೆಯ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಚೇತರಿಸಿ ಕೊಂಡವರಲ್ಲಿ ಮರುಕಳಿಸುವಿಕೆಗೆ ಕಾರಣವಾಗುತ್ತದೆ.
5) ಲಾಕ್ಡೌನ್ ನಿರ್ಬಂಧಗಳಿಂದ ಒತ್ತಡವನ್ನು ನಿಭಾಯಿಸಲು ಆಲ್ಕೋಹಾಲ್ ಬಳಸುವ ಜನರಲ್ಲಿ ಸಾಮಾನ್ಯವಾಗಿ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಇದು ಹೆಚ್ಚು ಕುಡಿಯುವುದನ್ನು ಪ್ರೋತ್ಸಾಹಿಸುತ್ತದೆ ಮತ್ತು ಆದ್ದರಿಂದ ಜನರನ್ನು ಸ್ವಯಂ-ವಿನಾಶದ ಮಾನಸಿಕ ಮನಸ್ಥಿತಿಗೆ ತಲುಪುತ್ತಾರೆ.
ಆಸ್ಪತ್ರೆಯ ಸಾಮರ್ಥ್ಯದ ಮೇಲಿನ ನಿರ್ಬಂಧಗಳನ್ನು ಅನುಸರಿಸಿ ಲಾಕ್ಡೌನ್ ಸಮಯದಲ್ಲಿ ಎಲ್ಲಾ ಜಠರಗರುಳಿನ ಕಾಯಿಲೆಗಳ (ಜೀರ್ಣಕಾರಿ ಕಾಯಿಲೆಗಳು) ರೋಗ ನೋಂದಣಿ ಸಂಖ್ಯೆ 27% ರಷ್ಟು ಕಡಿಮೆಯಾಗಿದೆ, ಆಲ್ಕೋಹಾಲ್-ಸಂಬಂಧಿತ ಜಠರಗರುಳಿನ ಕಾಯಿಲೆಗಳು (ಜೀರ್ಣಕಾರಿ ಕಾಯಿಲೆಗಳು) ಮತ್ತು ಯಕೃತ್ತಿನ ಕಾಯಿಲೆಗಳ ಪ್ರಮಾಣವು 59.6% ರಷ್ಟು ಹೆಚ್ಚಾಗಿದೆ (ಪಿ = 0.03).
ಆಲ್ಕೊಹಾಲ್ ಸಂಬಂಧಿತ ಜಠರಗರುಳಿನ ಕಾಯಿಲೆಗಳು (ಜೀರ್ಣಕಾರಿ ಕಾಯಿಲೆಗಳು) ಮತ್ತು ಯಕೃತ್ತಿನ ಕಾಯಿಲೆಗಳಂತಹ ಅನ್ನನಾಳದ ಉರಿಯೂತ(Esophagitis), ಆಲ್ಕೊಹಾಲ್ ಯುಕ್ತ ಜಠರದುರಿತ(gastritis), ಆಲ್ಕೊಹಾಲ್ ಯುಕ್ತ ಪ್ಯಾಂಕ್ರಿಯಾಟೈಟಿಸ್(pancreatitis), ಆಲ್ಕೊಹಾಲ್ ಯುಕ್ತ ಯಕೃತ್ತಿನ ಸಿರೋಸಿಸ್, ಆಲ್ಕೊಹಾಲ್ ಯುಕ್ತ ಯಕೃತ್ತಿನ ಹೆಪಟೈಟಿಸ್ 53% ಹೆಚ್ಚಾಗಿದೆ. 75% ರಿಂದ 80% ರಷ್ಟು ಹೆಚ್ಚಿನ ಅಲ್ಪಾವಧಿಯ ಮರಣವು ಕಂಡುಬಂದಿದೆ.
ಲಾಕ್ಡೌನ್ ಸಮಯದಲ್ಲಿ ಸೋಂಕಿತರ ಸರಾಸರಿ ವಯಸ್ಸು 56 ವರ್ಷವಾಗಿದ್ದು ಅದರಲ್ಲಿ ಶೇ. 70% ರಷ್ಟು ಪುರುಷರಿದ್ದರು. ಆದರೆ ಲಾಕ್ ಡೌನ್ ತೆರೆದ ನಂತರ ಸೋಂಕಿತರ ಸರಾಸರಿ ವಯಸ್ಸು 51 ರಿಂದ 56 ರ ವಯಸ್ಸಿನವರಾಗಿದ್ದರು. ಆಲ್ಕೊಹಾಲ್-ಸಂಬಂಧಿತ ಯಕೃತ್ತಿನ ಕಾಯಿಲೆಯ ಅಗಾಧ ಉಲ್ಬಣವಿದೆ – ವಿಶೇಷವಾಗಿ ಕಿರಿಯ ಮತ್ತು ಸ್ತ್ರೀ ರೋಗಿಗಳಲ್ಲಿ. ಯಕೃತ್ತಿನ ಕಸಿ(liver transplant) ಕಾರ್ಯಕ್ರಮವು ತೀವ್ರವಾದ ಆಲ್ಕೊಹಾಲ್-ಸಂಬಂಧಿತ ಹೆಪಟೈಟಿಸ್ ಮತ್ತು ತೀವ್ರವಾದ ಯಕೃತ್ತಿನ ವೈಫಲ್ಯಕ್ಕೆ ತುರ್ತು ಕಸಿ ಅಗತ್ಯವಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. COVID-19 ಸಾಂಕ್ರಾಮಿಕವು ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮದ್ಯಪಾನ ಸಂಬಂಧಿತ ಜೀರ್ಣಕಾರಿ ಕಾಯಿಲೆಗಳು ಮತ್ತು ಯಕೃತ್ತಿನ ಮೇಲಾಗುವ ಪರಿಣಾಮಗಳು
• ಹಸಿವಾಗದಿರುವುದು
• ವಾಕರಿಕೆ ಮತ್ತು ವಾಂತಿ.
• ಹೃದಯ ಉರಿತ
• ತೆಘು(ಬರ್ಪಿಂಗ್)
• ಹೊಟ್ಟೆ ಉಬ್ಬರ
• ಕೆಲವೊಮ್ಮೆ ಹಸಿವು ಹೆಚ್ಚಾಗುತ್ತದೆ
• ರಕ್ತ ವಾಂತಿ

ಹಸಿವು ಕಡಿಮೆಯಾಗುತ್ತದೆ (decreased appetite)
• ಹೊಟ್ಟೆಯಸುಡುವಿಕೆಮತ್ತುನೋವು.
• ಅತಿಸಾರ( diarrhoea)
• ಮಲಬದ್ಧತೆ(constipation)
•ಬೆನ್ನು ನೋವು
•ಮಲದಲ್ಲಿ ರಕ್ತಸ್ರಾವ
• ಅಲ್ಪ ಜ್ವರ
• ಆಯಾಸ ಮತ್ತು ದೌರ್ಬಲ್ಯ.
• ಕಾಮಾಲೆ(jaundice)
• ತುರಿಕೆ(itching)
ತುಂಬಿದ ಹೊಟ್ಟೆ(distension of abdomen)

• ಮಾನಸಿಕ ಗೊಂದಲ ಅಥವಾ ಮರೆವು.
ಮೇಲ್ಕಂಡ ಕೆಲವು ಲಕ್ಷಣಗಳು ರೋಗದ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ಹಂತದಲ್ಲಿ, ಜನರು ಲಕ್ಷಣರಹಿತರಾಗಿರಬಹುದು. ಜನರು ರೋಗಲಕ್ಷಣಗಳನ್ನು ಗುರುತಿಸುವುದು ಕೆಲವು ಬಾರಿ ವಿಳಂಬವಾಗುತ್ತದೆ. ಸಾಂಕ್ರಾಮಿಕ ಸಮಯದಲ್ಲಿ ಆಲ್ಕೊಹಾಲ್ ಸೇವನೆಯ ಬಗ್ಗೆ ಈ ಎಲ್ಲಾ ಅಂಶಗಳನ್ನು ಮದ್ಯಪಾನಿಗಳು ನೆನಪಿನಲ್ಲಿಟ್ಟುಕೊಳ್ಳುವುದು ಸೂಕ್ತ.

ಮದ್ಯ ಸೇವನೆಯಿಂದ ಯಕೃತ್ತಿನ ಮೇಲಾಗುವ ಪರಿಣಾಮಗಳಿಂದ ಕೆಳಕಂಡ ಸಂಧರ್ಭಗಳಲ್ಲಿ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ.
• 1) ಕೊಬ್ಬಿನ ಯಕೃತ್ತು (ಸ್ಟೀಟೋಸಿಸ್ Fatty liver): ಯಕೃತ್ತಿನಲ್ಲಿ ಕೊಬ್ಬು ಹೆಚ್ಚಾಗುವುದರಿಂದ ಯಕೃತ್ತು ಸರಿಯಾಗಿ ಕೆಲಸ ಮಾಡುವುದನ್ನು ತಡೆಯುತ್ತದೆ.
• 2) ಯಕೃತ್ತಿನಉರಿಯೂತ (ಹೆಪಟೈಟಿಸ್ hepatitis): ಯಕೃತ್ತಿನಲ್ಲಿ ಕೊಬ್ಬು ಹೆಚ್ಚಾಗುವುದರಿಂದ, ಕೊಬ್ಬಿನ ಶೇಖರಣೆ ಯಕೃತ್ತಿನ ಸೌಮ್ಯ ಅಥವಾ ಮಧ್ಯಮ ಉರಿಯೂತವನ್ನು ಅಭಿವೃದ್ಧಿ ಪಡಿಸುತ್ತದೆ.
• 3) ತೀವ್ರವಾದ ಮದ್ಯಪಾನದ ಹೆಪಟೈಟಿಸ್ ( acutealcoholic hepatitis): ಯಕೃತ್ತಿನ ಹೆಚ್ಚು ಗಂಭೀರ ಮತ್ತು ಮಾರಣಾಂತಿಕ ಉರಿಯೂತ ಸಂಭವಿಸುತ್ತದೆ.
• 4) ಯಕೃತ್ತಿನಗಾಯದ ಗುರುತುIscaring of liver)(ಸಿರೋಸಿಸ್): ಆಲ್ಕೊಹಾಲ್ ರಾಸಾಯನಿಕಗಳನ್ನು (chemicals) ಒಡೆಯುತ್ತದೆ ಮತ್ತು ಗಾಯದ ಅಂಗಾಂಶವನ್ನು ತೆಗೆದು ಹಾಕುತ್ತದೆ. ಆದ್ದರಿಂದ ಯಕೃತ್ತಿನಲ್ಲಿ ಗಾಯದ ಅಂಗಾಂಶವು ನಿರ್ಮಿಸುತ್ತದೆ. ಸ್ಕಾರ್ಅಂಗಾಂಶವು ಸಾಮಾನ್ಯ ಆರೋಗ್ಯಕರ ಕೋಶಗಳನ್ನು ಬದಲಾಯಿಸುತ್ತದೆ ಮತ್ತು ಇದರ ಪರಿಣಾಮ ಯಕೃತ್ತು ಸರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲದೆ ವಿಫಲವಾಗಿ ಸಾವಿಗೆ ಕಾರಣವಾಗುತ್ತದೆ.
• 5) ಯಕೃತ್ತಿನ ವೈಫಲ್ಯ ಮತ್ತು ಸಾವು:Liver failureand death
ಆಲ್ಕೊಹಾಲ್ ಸಂಬಂಧಿತ ಯಕೃತ್ತಿನ ಕಾಯಿಲೆ ಜೀವಕ್ಕೆ ಅಪಾಯಕಾರಿ. ಜೀವಾಣು(toxin) ಮತ್ತು ತ್ಯಾಜ್ಯವನ್ನು (wastebuild-up) ಹೆಚ್ಚಿಸಲು ಕಾರಣವಾಗುತ್ತದೆ. ಆಲ್ಕೊಹಾಲಿಕ್ ಯಕೃತ್ತಿನ ಕಾಯಿಲೆ ಮಹಿಳೆಯರಿಗೆ ಹೆಚ್ಚಿನ ಅಪಾಯ ತಂದೊಡ್ಡುತ್ತದೆ. ಮಹಿಳೆಯರ ದೇಹವು ಹೆಚ್ಚು ಆಲ್ಕೊಹಾಲ್ ಅನ್ನು ಹೀರಿ ಕೊಳ್ಳುವ ಸಾಧ್ಯತೆಯಿದೆ ಮತ್ತು ಅದನ್ನು ಶುದ್ದಿಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಮಹಿಳೆಯರು ಪುರುಷರಿಗಿಂತ ಬೇಗನೆ ಯಕೃತ್ತಿನ ಹಾನಿಗೆ ಒಳಗಾಗುತ್ತಾರೆ.

ಮೇದೋಜ್ಜೀರಕ ಗ್ರಂಥಿಯ ಉರಿಯೂತ (pancreatitis): ಹೆಚ್ಚು ಆಲ್ಕೊಹಾಲ್ ಕುಡಿಯುವುದರಿಂದ ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಜೀರ್ಣಕಾರಿ ಕಿಣ್ವಗಳ (enzymes) ಅಸಹಜ ಸಕ್ರಿಯಗೊಳಿಸುವಿಕೆಗೆ ಕಾರಣವಾಗಬಹುದು. ಈ ಹೆಚ್ಚಿದ ಕಿಣ್ವಗಳು ಕಾರಣವಾಗಬಹುದು ಉರಿಯೂತಕ್ಕೆ ಕಾರಣವಾಗಬಹುದು.

ಆಲ್ಕೋಹಾಲ್ (ಮದ್ಯಪಾನ) ಕುಡಿಯುವುದರಿಂದ ಕೊರೊನಾ ವೈರಸ್ ನಿಂದ ನಿಮ್ಮನ್ನು ರಕ್ಷಿಸಬಹುದೇ?
ಮದ್ಯಪಾನ ಕೋವಿಡ್ 19 ರಿಂದ ನಿಮ್ಮನ್ನು ರಕ್ಷಿಸುವುದಿಲ್ಲ. ಆಲ್ಕೋಹಾಲ್ ಅಥವಾ ಬಿಯರ್ ಉತ್ಪನ್ನಗಳನ್ನು ಸೇವಿಸುವುದರಿಂದ COVID 19 ಅನ್ನು ತಡೆಯಲು ಸಹಾಯ ಮಾಡುತ್ತದೆ ಎಂಬ ತಪ್ಪು ಅಭಿಪ್ರಾಯ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ (whatsapp and othersocial media) ಹರಿದಾಡುತ್ತಿದೆ.
ಮದ್ಯಪಾನ(ಆಲ್ಕೊಹಾಲ್) ಸೇವನೆ ಮತ್ತು ಆರೋಗ್ಯದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಾಮಾನ್ಯ ಸಂಗತಿಗಳು :
ಮದ್ಯಪಾನ ನಿಮ್ಮ ದೇಹದ ಪ್ರತಿಯೊಂದು ಅಂಗಗಳ ಮೇಲೆ ಅಲ್ಪಾವಧಿಯ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಒಟ್ಟಾರೆಯಾಗಿ, “ಸುರಕ್ಷಿತ ಮಿತಿ” ಇಲ್ಲ (thereis no SAFE LIMIT) ಎಂದು ಪುರಾವೆಗಳು (evidence) ಸೂಚಿಸುತ್ತವೆ.ವಾಸ್ತವವಾಗಿ, ಸೇವಿಸುವ ಪ್ರತಿ ಹನಿಯೂ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆಲ್ಕೊಹಾಲ್ ಬಳಕೆ, ವಿಶೇಷವಾಗಿ ಅತೀ ಬಳಕೆ, ರೋಗನಿರೋಧಕ ವ್ಯವಸ್ಥೆಯನ್ನು(immunesystem) ದುರ್ಬಲಗೊಳಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳನ್ನು(infectious diseases) ನಿಭಾಯಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಮಿತ ಪ್ರಮಾಣದ ಆಲ್ಕೊಹಾಲ್ ಸೇವನೆ ಕೂಡ ಕೆಲವು ರೀತಿಯ ಕ್ಯಾನ್ಸರ್ ಗೆ ಕಾರಣವಾಗುವುದಲ್ಲದೆ ಆಲೋಚನೆಗಳು (thoughts), ಸರಿ ತೀರ್ಪು (judgement), ಸೂಕ್ತ ನಿರ್ಧಾರ ತೆಗೆದುಕೊಳ್ಳುವಿಕೆ (decision-making) ಮತ್ತು ನಡವಳಿಕೆಯನ್ನು (behaviour) ಬದಲಾಯಿಸುತ್ತದೆ.
ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಮಿತ ಪ್ರಮಾಣದ ಮದ್ಯ ಸೆವನೆಯೂ ಹುಟ್ಟಲಿರುವ ಮಗುವಿಗೆ ಅಪಾಯ ತಂದೊಡ್ಡುವ ಸಂದರ್ಭಗಳ ಸಾಧ್ಯತೆಯಿರುತ್ತದೆ.
ಆತ್ಮೀಯ ಸಂಗಾತಿ ಹಿಂಸೆ(intimate partnerviolence), ಲೈಂಗಿಕ ಹಿಂಸೆ (sexualviolence), ಯುವ ಹಿಂಸೆ (youthviolence), ಹಿರಿಯರ ನಿಂದನೆ (elderabuse) ಮತ್ತು ಮಕ್ಕಳ ಮೇಲಿನ ದೌರ್ಜನ್ಯದಂತಹ ಪರಸ್ಪರ ಹಿಂಸಾಚಾರದ interpersonal) ಅಪಾಯ, ಆವರ್ತನ ಮತ್ತು ತೀವ್ರತೆಯನ್ನು ಆಲ್ಕೊಹಾಲ್ ಹೆಚ್ಚಿಸುತ್ತದೆ.
ಕೋವಿಡ್-19 ನ ತೀವ್ರ ತರವಾದ ತೊಡಕುಗಳಲ್ಲಿ ಒಂದಾದ ತೀವ್ರವಾದ ಉಸಿರಾಟದ ತೊಂದರೆ ಸಿಂಡ್ರೋಮನ (ARDS;acute respiratory distress syndrome) ಅಪಾಯವನ್ನು ಮದ್ಯಪಾನ ಹೆಚ್ಚು ಮಾಡುತ್ತದೆ.

ಮದ್ಯಪಾನ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು:
– ರೋಗನಿರೋಧಕ ಶಕ್ತಿ(immune system) ಮತ್ತು ಆರೋಗ್ಯವನ್ನು (health) ಗಮನದಲ್ಲಿಟ್ಟುಕೊಂಡು ಮದ್ಯ ಸೇವನೆಗೆ ವಿದಾಯ ಹೇಳುವುದು.
– ನೀವು ಮತ್ತು ನಿಮ್ಮ ಕುಟುಂಬ ಮತ್ತು ಸಮುದಾಯದ ಒಳಿತಿಗಾಗಿ ಸೂಕ್ತ ಮತ್ತು ಶೀಘ್ರ ಮದ್ಯ ವಿಮೋಚನಾ ನಿರ್ಧಾರ. ಅಕಸ್ಮಾತ್ ನೀವು ಮದ್ಯವ್ಯಸನಿಗಳೇ ಆಗಿದ್ದಲ್ಲಿ ದಿನದಿಂದ ದಿನಕ್ಕೆ ಸೇವಾ ಪ್ರಮಾಣವನ್ನು ಕನಿಷ್ಟಗೊಳಿಸುವುದು.
– ನೀವು ಆಲ್ಕೊಹಾಲ್ ಸೇವಿಸುವಾಗ ಮಕ್ಕಳು ಮತ್ತು ಯುವಕರು ನೋಡದಂತೆ ಎಚ್ಚರವಹಿಸಿ- ಆದರ್ಶಪ್ರಾಯರಾಗಿರಿ.
– ಯುವಕರು ಮತ್ತು ಮಕ್ಕಳೊಂದಿಗೆ ಸಾಕಷ್ಟು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮದ್ಯಪಾನದ ಅಡ್ಡಪರಿಣಾಮಗಳನ್ನು ವಿವರಿಸಿ ಮತ್ತು ಸಾಂಕ್ರಾಮಿಕ ಹರಡುವುದನ್ನು ತಡೆಯಿರಿ.
– ಮಕ್ಕಳು ಟಿವಿ ಮತ್ತಿತರ ಜಾಲತಾಣಗಳಲ್ಲಿ ಸಕ್ರಿಯರಾಗಿರುವುದರ ಮೇಲೆ ನಿಗಾವಹಿಸಿ. ಕೆಲವು ಜಾಹಿರಾತುಗಳು ಮದ್ಯಪಾನ ಮತ್ತಿತರ ಮಾದಕ ಸೇವನೆಯತ್ತ ಸೆಳೆಯುವ ಸಾದ್ಯತೆಗಳಿರುತ್ತದೆ.
– ಔಷಧಿಗಳೊಂದಿಗೆ ಗಿಡಮೂಲಿಕೆಗಳು ಆಲ್ಕೋಹಾಲ್ (ಮದ್ಯಪಾನ) ಅನ್ನು ಎಂದಿಗೂ ಬೆರೆಸಬೇಡಿ, ಏಕೆಂದರೆ ಇದು ಕಡಿಮೆ ಪರಿಣಾಮಕಾರಿಯಾಗಬಹುದು, ಅಥವಾ ಇದು ವಿಷಕಾರಿ ಮತ್ತು ಅಪಾಯಕಾರಿಯಾಗಬಹುದು.
ಕೇಂದ್ರ ನರಮಂಡಲದ (CNS)ಮೇಲೆ ಪರಿಣಾಮ ಬೀರಬಹುದು
(ಉದಾ., ನೋವು ನಿವಾರಕಗಳು (pain killers), ಮಲಗುವ ಮಾತ್ರೆಗಳು (sleeping tablets), ಖಿನ್ನತೆ -ಶಮನಕಾರಿಗಳು/ anti-depressants, ಇತ್ಯಾದಿ) ನೀವು ಈರೀತಿಯಯಾವುದೇ ಔಷಧಿಗಳನ್ನು ಸೇವಿಸಿದ ಮೇಲೆ ಮದ್ಯಪಾನ ಸೇವಿಸಬೇಡಿ, ಏಕೆಂದರೆ ಆಲ್ಕೋಹಾಲ್ ನಿಮ್ಮ ಯಕೃತ್ತಿನ ಕಾರ್ಯಕ್ಕೆ ಅಡಚಣೆ ಉಂಟುಮಾಡಿ ಯಕೃತ್ತಿನ ವೈಫಲ್ಯ ಅಥವಾ ಇತರ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಂತಿಮವಾಗಿ, ಕೋವಿಡ್-19 ಸೊಂಕಿತರಾಗಿದ್ದರೆ ಅಥವಾ ಯಾವುದೇ ಚಿಕಿತ್ಸೆ ಪಡೆಯುತ್ತಿದ್ದಾರೆ ಮದ್ಯಪಾನದಿಂದ ದೂರ ಇರುವುದು ಕ್ಷೇಮ.

ಅಂತಿಮವಾಗಿ, ನೆನಪಿಡುವ ಪ್ರಮುಖಅಂಶ: ಯಾವುದೇ ಸಂದರ್ಭಗಳಲ್ಲಿ ನೀವು ಕೋವಿಡ್ -19 ಸೋಂಕನ್ನು ತಡೆಗಟ್ಟುವ ಅಥವಾ ಚಿಕಿತ್ಸೆ ನೀಡುವ ಸಾಧನವಾಗಿ ಯಾವುದೇ ರೀತಿಯ ಆಲ್ಕೊಹಾಲಿಕ(ಮದ್ಯಪಾನ)ಉತ್ಪನ್ನಗಳನ್ನು ಕುಡಿಯಬಾರದು.
– ಡಾ.ಪ್ರಶಾಂತ್ ಬಿ. ನಿರ್ವಾಣಿರಾವ್
ಚೈತನ್ಯ ಗ್ಯಾಸ್ಟ್ರೊ ಕರುಳಿನ ಕೇರ್ & ಎಂಡೋಸ್ಕೋಪಿ ಸೆಂಟರ್,
2 ನೇ ಕ್ರಾಸ್, ಮಲಬಾರ್ ಚಿನ್ನದ ಅಂಗಡಿ ಪಕ್ಕದಲ ರಸ್ತೆ
ವಿವೇಕಾನಂದ ನಗರ (ಸಿಎಸ್ಐ ಲೇಔಟ್),ತುಮಕೂರು-572102.
ದೂ.: +91 9686669520, 0816-4014213.
email:chaitanyaagastroendoscopy@gmail.com

Get real time updates directly on you device, subscribe now.

Comments are closed.

error: Content is protected !!