ಕುಣಿಗಲ್: ನಾಡಿನ ಹಿರಿಯ ಸಾಹಿತಿ, ದಲಿತ ಕವಿ ಡಾ.ಸಿದ್ದಲಿಂಗಯ್ಯನವರಿಗೆ ಪಟ್ಟಣ ವಿವಿಧ ಸಂಘಟನೆಗಳು ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಕಸಾಪ ಮಾಜಿ ಅಧ್ಯಕ್ಷ ದಿನೇಶ್‌ಕುಮಾರ್, ಸಿದ್ದಲಿಂಗಯ್ಯನವರು ಕವಿತೆಗಳ ಮೂಲಕ ಶೋಷಿತರ ಹೋರಾಟಕ್ಕೆ ಪ್ರೇರಣೆ ನೀಡಿದ್ದರು. ಸಮಾಜದ ವ್ಯವಸ್ಥೆಯಲ್ಲಿನ ತಾರತಮ್ಯ, ಅಸಮಾನತೆಯನ್ನು ಕವಿತೆಗಳ ಮೂಲಕ ಸಾಮಾನ್ಯ ಜನಕ್ಕೂ ಮನ ಮುಟ್ಟುವಂತೆ ಬರೆಯುತ್ತಿದ್ದ ಅವರ ಶೈಲಿ ಸಮಾಜದಲ್ಲಿ ಹಲವು ವ್ಯವಸ್ಥೆಗಳ ಸುಧಾರಣೆಗೂ ಕಾರಣವಾಯಿತು. ಅವರು ಜನರ, ನೊಂದವರ ಪರವಾದ ಕವಿಯಾಗಿದ್ದರು ಎಂದರು.
ಜ್ಞಾನಭಾರತಿ ಪ.ಪೂ.ಕಾಲೇಜಿನ ಪ್ರಾಚಾರ್ಯ ಡಾ.ರಮೇಶ್, ಸಿದ್ದಲಿಂಗಯ್ಯನವರ ಗ್ರಾಮಾಂತರ ಪ್ರದೇಶದ ಜನರ ಬೈಗುಳ ಇರಬಹುದು, ಆಡು ಭಾಷೆಯನ್ನು ಕವಿತೆಗಳ ರೂಪಕ್ಕೆ ಇಳಿಸಿ ಶೋಷಣೆ, ಅಸಮಾನತೆಯ ಬಗ್ಗೆ ಜಾಗೃತಿ ಮೂಡಿಸಿದ ಮಹಾನ್ ಚೇತನವಾಗಿದ್ದರು. ಗ್ರಾಮಾಂತರ ಪ್ರದೇಶದ ಚಟುವಟಿಕೆಗಳನ್ನು ಆಧರಿಸಿ ಹಲವು ಕವಿತೆ, ಪುಸ್ತಕ ರಚಿಸಿದ ಅವರು ಸದಾ ಸಾಮಾನ್ಯಜನರಲ್ಲಿ ಸಾಮಾನ್ಯವಾಗಿ ಜನಪರ, ಶೋಷಿತರ ಪರವಾಗಿದ್ದರು ಎಂದರು.
ಸಭೆಯಲ್ಲಿ ಶಿವಶಂಕರ್, ವೈ.ಜಿ.ವೆಂಕಟೇಶಯ್ಯ, ನಾಗಣ್ಣ, ಶಂಕರ್, ಮೂರ್ತಿ, ನಗುತರಂಗನಾಥ್, ಅಂದಾನಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್‌ಗೌಡ, ಪುರಸಭೆ ಸದಸ್ಯ ರಂಗಸ್ವಾಮಿ, ಬಿಜೆಪಿ ಮುಖಂಡ ರಾಜೇಶ್‌ಗೌಡ, ಟಿ.ಕೆ.ರಾಜು, ಸತೀಶ್ ಇತರರು ಇದ್ದರು.
ಡಾ.ಸಿದ್ದಲಿಂಗಯ್ಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಕೆ
Get real time updates directly on you device, subscribe now.
Prev Post
Next Post
Comments are closed.