ಕ್ರೀಡಾಪಟು ಸುನೀಲ್‌ ಜವಳಿ ನಿಧನಕ್ಕೆ ಬೊಮ್ಮಾಯಿ ಸಂತಾಪ

209

Get real time updates directly on you device, subscribe now.

ತುಮಕೂರು: ಮುಂಜಾನೆ ನಿಧನರಾಗಿರುವ ಉದ್ಯಮಿ ಹಾಗೂ ಕ್ರೀಡಾಪಟು ಆಗಿದ್ದ ಸುನೀಲ್‌ ಜವಳಿ (62) ಅವರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಡೆದರು.
ಮೂಲತಃ ಹುಬ್ಬಳ್ಳಿಯವರಾದ ಉದ್ಯಮಿ ಸುನೀಲ್‌ ಜವಳಿ ಅವರು ಮದುವೆಯಾದ ನಂತರ ತುಮಕೂರಿನ ಶಿರಾ ಗೇಟ್ ನಲ್ಲಿಯೇ ವಾಸವಿದ್ದರು. ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತ ಸ್ನೇಹಿತರಾಗಿದ್ದ ಇವರು ತುಮಕೂರು ಲಯನ್ಸ್ ಕ್ಲಬ್‌ ಸದಸ್ಯರಾಗಿದ್ದರು, ಇವರ ತಂದೆ ಸಂಸದರಾಗಿದ್ದರು ಎನ್ನಲಾಗಿದೆ.
ತಮ್ಮ ಆಪ್ತ ಸ್ನೇಹಿತ ಸುನಿಲ್‌ ಜವಳಿ ಅವರ ನಿಧನದ ಸುದ್ದಿ ತಿಳಿದ ಗೃಹ ಸಚಿವ ಬಸವರಾಜು ಬೊಮ್ಮಾಯಿ ಅವರು ಬೆಳಗ್ಗೆ ನಗರಕ್ಕೆ ಆಗಮಿಸಿ ಮೃತರ ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಚವಿಸಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ನಂತರ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸುನೀಲ್‌ ಜವಳಿ ಅವರು ಉದ್ಯಮಿ ಹಾಗೂ ಉತ್ತಮ ಕ್ರೀಡಾಪಟುವೂ ಹೌದು, ಸುನೀಲ್‌ ಜವಳಿ ಮತ್ತು ನಾನು ಇಬ್ಬರು ಒಟ್ಟಿಗೆ ಬೆಳೆದವರು, ಒಟ್ಟಿಗೆ ಓದಿದವರು, ಅಂದಿನಿಂದಲೂ ನಮ್ಮ ಬಾಂಧವ್ಯ ಉತ್ತವಾಗಿತ್ತು. ಅವರ ನಿಧನದಿಂದ ತುಂಬಾ ದುಃಖವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಸುರೇಶ್ ಗೌಡ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್ ಕುಮಾರ್‌ ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!