ಆಹಾರ ಕಿಟ್‌ ವಿತರಿಸಿ ಕಾರದ ಶ್ರೀಗಳ ಜನ್ಮದಿನ ಆಚರಣೆ

567

Get real time updates directly on you device, subscribe now.

ತುಮಕೂರು: ತಾಲ್ಲೂಕಿನ ಬೆಳ್ಳಾವಿ ಕಾರದ ಮಠದಲ್ಲಿ ಕಾರದ ವೀರಬಸವ ಸ್ವಾಮಿಗಳ 38ನೇ ಜನ್ಮ ದಿನವನ್ನು ಕೋವಿಡ್ ಹಿನ್ನಲೆಯಲ್ಲಿ ಪುರೋಹಿತರಿಗೆ, ಬಡವರಿಗೆ ಆಹಾರ ಪದಾರ್ಥಗಳ ಕಿಟ್‌, ಹಣ್ಣಿನ ಗಿಡಗಳನ್ನು ದಾನ ಮಾಡುವ ಮೂಲಕ ಹಾಗೂ ರಕ್ತದಾನ ನೀಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾರದ ವೀರಬಸವ ಸ್ವಾಮೀಜಿ, ಇಂದು ಭಕ್ತಾಧಿಗಳೆಲ್ಲರೂ ಸೇರಿ ದಿನಸಿ ಪದಾರ್ಥಗಳ ಕಿಟ್‌ ವಿತರಣೆ, ಹಣ್ಣಿನ ಸಸಿಗಳ ವಿತರಣೆ ಮತ್ತು ರಕ್ತದಾನ ಶಿಬಿರದಂತಹ ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ, ಇಂದು ಜಗತ್ತಿನಲ್ಲಿ ಹರಡಿರುವ ಸಾಂಕ್ರಾಮಿಕ ರೋಗದಿಂದ ನನ್ನ ಜನ್ಮದಿನ ಆಚರಿಸುವುದು ಬೇಡ ಎಂದು ಭಕ್ತಾದಿಗಳಿಗೆ ತಿಳಿಸಿದ್ದೆ, ಆದರೆ ಭಕ್ತಾದಿಗಳು ಸರಳವಾಗಿ ಆಚರಿಸುತ್ತಿದ್ದಾರೆ ಎಂದರು.
ಕೋವಿಡ್‌-19 ಜಗತ್ತಿಗೆ ಆವರಿಸಿರುವ ಹಿನ್ನಲೆಯಲ್ಲಿ ನಮ್ಮ ಮೇಲೆ ನಮಗೆ ಸಂಶಯ ಮೂಡುವಂತಾಗಿದೆ. ಕೊರೊನಾ ರೋಗ ಮನುಷ್ಯನಿಗೆ ಸಂಬಂಧಗಳನ್ನು ಮರೆ ಮಾಚುವ ಕೆಲಸ ಮಾಡುತ್ತಿದೆ. ಕೊರೊನಾ ಸೋಂಕಿತರನ್ನು ನಾವು ನೋಡುವ ರೀತಿ ಬದಲಾಗಿದೆ, ಆ ಬದಲಾವಣೆ ಬಿಟ್ಟು, ಸೋಂಕಿತರಿಗೆ ಆತ್ಮಸ್ಥೈರ್ಯ, ಧೈರ್ಯ ತುಂಬುವ ಕೆಲಸ ಮಾಡಿದಾಗ ಮಾತ್ರ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಇಂದು ಮನುಷ್ಯನಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವಂತಹ ಜಗತ್ತಿನ 6 ವೈದ್ಯರನ್ನು ನೆನಪಿಸಿಕೊಳ್ಳಬೇಕಾಗಿದೆ, ಆ ಆರು ವೈದ್ಯರು ದುಡ್ಡು ಕೊಟ್ಟರೆ ಸಿಗುವಂತಹ ವೈದ್ಯರಲ್ಲ, ಇದು ಕೊಳ್ಳಬೇಕಾದರೆ ನಮ್ಮಲ್ಲೇ ಉತ್ಪತ್ತಿಯಾಗುವಂತಹ ನಮ್ಮಲ್ಲೇ ಇರುವಂತಹ ಆರು ಜನರಿದ್ದಾರೆ. ಮೊದಲನೆಯದು ಬೆಳಗಿನ ಜಾವ ಸೂರ್ಯನ ಕಿರಣ ನೋಡುವಂತಹದ್ದು, ನಂತರ ವಿಶ್ರಾಂತಿ ತೆಗೆದುಕೊಳ್ಳುವಂತಹದ್ದು, ಮಿತ ಆಹಾರ ಸೇವನೆ, ನಂತರ ಆತ್ಮಸ್ಥೈರ್ಯ ಅತಿ ಅವಶ್ಯಕವಾಗಿ ಬೇಕಾಗಿದೆ ಎಂದರು.
ಆತ್ಮಸ್ಥೈರ್ಯ ನಮ್ಮ ಜೀವನದ ಜೀವರಕ್ಷಕ ಎಂಬ ಭಾವನೆ ಆ ಉದ್ಧೇಶದಿಂದ ಆತ್ಮಸ್ಥೈರ್ಯವನ್ನು ಭಕ್ತಾದಿಗಳು ಎಂದೂ ಕಳೆದುಕೊಳ್ಳಬಾರದು, ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಯಾರೂ ಹೆದರಬಾರದು, ಕೊರೊನಗೆ ಹೆದರುವುದರಿಂದ ನಮ್ಮ ಆತ್ಮಸ್ಥೈರ್ಯ ಕುಂದಿ ಮರಣ ಸಂಭವಿಸುತ್ತವೆ. ಆದ್ದರಿಂದ ಭಕ್ತಾದಿಗಳು ಒಳ್ಳೆಯ ಸ್ನೇಹಿತರನ್ನು ಗಳಿಸಿ, ಒಳ್ಳೆಯವರ ಜೊತೆಗೆ ಬಾಳಿ, ಒಳ್ಳೆಯವರ ಜೊತೆ ಉತ್ತಮ ನಡೆ ನುಡಿ ಕಲಿತರೆ ಪರಿಸರ ಎಲ್ಲವನ್ನೂ ಸಂರಕ್ಷಣೆ ಮಾಡಬಹುದು ಎಂದು ಸಲಹೆ ನೀಡಿದರು.
ಭಕ್ತಾದಿಗಳೆಲ್ಲರೂ ಸೇರಿ ಕೊರೊನಾ ಸಂಕಷ್ಟದಲ್ಲಿರುವವರಿಗೆ ನೆರವಿಗೆ ನಿಲ್ಲಬೇಕೆಂದು ತೀರ್ಮಾನಿಸಿ ಶ್ರೀಮಠದ ವತಿಯಿಂದ ದಿನಸಿ ಪದಾರ್ಥಗಳ ಕಿಟ್‌, ಹಣ್ಣಿನ ಗಿಡಗಳ ವಿತರಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ತುಮಕೂರಿನ ಯುವಕ ಮಿತ್ರರು, ಬಸವಸೇನೆ, ವಿನಾಯಕ ಸೇವಾ ಸಮಿತಿ, ಮಠದ ಎಲ್ಲಾ ಸದಸ್ಯರು ಸೇರಿ ಸರಳವಾಗಿ ಜನ್ಮದಿನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಸಂಚಾರಿ ವಿಜಯ್‌ ನಿಧನಕ್ಕೆ ಸಂತಾಪ
ಬಸವಣ್ಣನವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾಯಕ ನಟ ಸಂಚಾರಿ ವಿಜಯ್‌ ಅವರ ನಿಧನಕ್ಕೆ ಕಾರದ ವೀರ ಬಸವ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಸಂಚಾರಿ ವಿಜಯ್‌ ಅವರ ನಿಧನದಿಂದ ಚಿತ್ರ ಜಗತ್ತಿಗೆ ತುಂಬಲಾರದ ನಷ್ಟವುಂಟಾಗಿದ್ದು, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಅಧ್ಯಕ್ಷ ಎಂ.ಎಸ್‌.ಉಮೇಶ್‌, ಬಿಜೆಪಿ ಮುಖಂಡ ಗುಬ್ಬಿ ಕ್ಷೇತ್ರದ ದಿಲೀಪ್‌, ಮಲ್ಲಸಂದ್ರ ಶಿವಣ್ಣ, ಟಿ.ಆರ್‌.ಸದಾಶಿವಯ್ಯ, ಹೆಚ್‌.ಎನ್‌.ಚಂದ್ರಶೇಖರ್‌, ಹರೀಶ್‌, ಮಹೇಶ್‌, ಸತೀಶ್‌, ಪ್ರಕಾಶ್‌, ಬೆಳ್ಳಾವಿ ಪೊಲೀಸ್‌ ಠಾಣೆಯ ಎಸ್‌ಐ ಚಂದ್ರಕಲಾ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!