ಮತ್ತೆ 182 ಮಂದಿ ಸೋಂಕು: 3 ಸಾವು

ಸಂಜೆ ವೇಳೆ ಹೊರಬಂದರೆ ದಂಡ ಖಚಿತ

1,410

Get real time updates directly on you device, subscribe now.

ತುಮಕೂರು: ಅನ್ ಲಾಕ್ ಮುಂದುವರೆದ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಏರಿಳಿತ ಕಂಡು ಬರುತ್ತಿದೆ. ಸೋಮವಾರ ಮತ್ತೆ 182 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 1,13,867 ಕ್ಕೆ ಏರಿಕೆ ಕಂಡಿದೆ. 3,375 ಸಕ್ರಿಯ ಪ್ರಕರಣಗಳ ಪೈಕಿ 345 ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಅನ್ ಲಾಕ್ ನಲ್ಲಿ ಮತ್ತೆ ಸೋಂಕಿತರ ಪ್ರಕರಣ ಹೆಚ್ಚು ಕಂಡು ಬಂದಲ್ಲಿ ಲಾಕ್ ಡೌನ್ ನಿಯಮ ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ. 3 ನೇ ಅಲೆ ಭೀತಿ ಇದ್ದು ಸಾರ್ವಜನಿಕರು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅಲ್ಲದೆ ಸಂಜೆ 5 ಗಂಟೆಯ ನಂತರ ಅನಗತ್ಯವಾಗಿ ರೋಡಿಗಿಳಿಯುವ ಬೈಕ್ ಸವಾರರಿಗೆ ಪೊಲೀಸರು ದಂಡ ವಿಧಿಸುವ ಕೆಲಸ ಮುಂದುವರೆಸಿದ್ದಾರೆ.

ಜಿಲ್ಲೆಯಲ್ಲಿ ಹೊಸದಾಗಿ ಸೋಂಕಿತರು: ತುಮಕೂರು 31, ಚಿನಾಹಳ್ಳಿ 21, ಗುಬ್ಬಿ 6, ಕೊರಟಗೆರೆ 7, ಕುಣಿಗಲ್ 5, ಮಧುಗಿರಿ 3, ಪಾವಗಡ 9, ತಿಪಟೂರು 19, ತುರುವೇಕೆರೆಯಲ್ಲಿ 12, ಇತರೆ 69 ಮಂದಿಗೆ ಕೊರೊನಾ ಸೋಂಕು ತಗುಲಿದೆ.


ಕೋವಿಡ್ ಗೆ ಬಲಿ: 3
ತುಮಕೂರು: ತಾಲೂಕಿನ ಮಹಿಳೆ (60)
ಕುಣಿಗಲ್: ತಾಲೂಕಿನ ವ್ಯಕ್ತಿ (60)
ಪಾವಗಡ: ತಾಲೂಕಿನ ಮಹಿಳೆ (74)
ಒಟ್ಟು 3 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!