ಸಿಎಂ ಆಗುವ ಬಯಕೆ ನನಗೂ ಇದೆ: ಪರಂ

600

Get real time updates directly on you device, subscribe now.

ತುಮಕೂರು: ಮುಖ್ಯಮಂತ್ರಿಯಾಗಬೇಕೆಂಬ ಬಯಕೆ ನನ್ನನ್ನೂ ಸೇರಿದಂತೆ ಎಲ್ಲ ಹಿರಿಯ ಮುಖಂಡರ ಅಭಿಮಾನಿಗಳ ಆಶಯವಾಗಿದೆ, ಆದರೆ ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಶಾಸಕ ಜಮೀರ್‌ ಅಹಮದ್‌ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಜಮೀರ್‌ ಅಹಮದ್‌ ಸಿದ್ದರಾಮಯ್ಯ ಅವರ ಜೊತೆ ಯಾವಾಗಲು ಇರುವುದರಿಂದ ಹಾಗೆ ಹೇಳಿದ್ದಾರೆ, ಅವರ ರೀತಿ ನಮ್ಮ ಅಭಿಮಾನಿಗಳು ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ, ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್‌ ಅಹಮದ್‌ ಅವರದ್ದು ವೈಯಕ್ತಿಕ ಹೇಳಿಕೆ ಎಂದು ತಿಳಿಸಿದ್ದಾರೆ. ಹಾಗಾಗಿ ಅದಕ್ಕೆ ಹೆಚ್ಚಿನ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ, ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಅವರೇ ನಮ್ಮ ಹೈಕಮಾಂಡ್‌, ಅವರೇ ಸುಪ್ರಿಂ, ಹಾಗಾಗಿ ಅವರ ಹೇಳಿಕೆಗಳನ್ನು ಯಾರು ತಿರಸ್ಕರಿಸಬಾರದು, ಅವರ ಮಾತಿಗೆ ಗೌರವ ಕೊಡಬೇಕಾಗಿದೆ, ನಮ್ಮಲ್ಲಿ ಯಾವುದೇ ಬಣವಿಲ್ಲ, ಒಂದು ವೇಳೆ ಆ ರೀತಿ ಕಂಡು ಬಂದಿದ್ದರೆ ನಮ್ಮ ಉಸ್ತುವಾರಿ ಆದ ಸರ್ಜೆವಾಲ್‌ ಸರಿಪಡಿಸುತ್ತಾರೆ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೋವಿಡ್ ನಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಸರಕಾರ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವಲ್ಲಿ ಸಂಪೂರ್ಣ ವಿಫಲವಾಗಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷವಾಗಿ ಕಾಂಗ್ರೆಸ್ ಜನರ ಬಳಿ ಹೋಗಿ, ಅವರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದೆ. ಬಡವರಿಗೆ, ಅಗತ್ಯವಿರುವವರಿಗೆ ದಿನಸಿಕಿಟ್‌, ಹೆಲ್ತ್ ಕಿಟ್‌ ನೀಡಿ ಸಹಾಯ ಹಸ್ತ ಚಾಚಿದೆ. ಹಾಗಾಗಿ ಸಹಜವಾಗಿ ಕಾಂಗ್ರೆಸ್‌ ಪಕ್ಷದ ಮೇಲೆ ಜನರ ವಿಶ್ವಾಸವಿದೆ. ಅದನ್ನು ಮತಗಳಾಗಿ ಪರಿವರ್ತಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಆಗಬೇಕು, ಆ ನಂತರ ಮುಖ್ಯಮಂತ್ರಿ ವಿಚಾರ ಎಂದರು.

Get real time updates directly on you device, subscribe now.

Comments are closed.

error: Content is protected !!