ವಾಹನ ಸಂಚಾರ ಆರಂಭ- ಅಂಗಡಿ ಮುಂಗಟ್ಟು ಓಪನ್

ಅನ್ ಲಾಕ್ ನಿಂದ ಸಾರ್ವಜನಿಕರಿಗೆ ಆನಂದ

601

Get real time updates directly on you device, subscribe now.

ಮಧುಗಿರಿ: ಕೊರೊನಾ ಹಿನ್ನೆಲೆಯಲ್ಲಿ ಕಳೆದ 53 ದಿನಗಳಿಂದ ಬಿಕೋ ಎನ್ನುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್‌ ನಿಲ್ದಾಣ ಅನ್ ಲಾಕ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಾಗೂ ಬಸ್ ಗಳ ಸಂಚಾರ ಪಟ್ಟಣದಲ್ಲಿ ಸಾಮಾನ್ಯವಾಗಿತ್ತು.
ಆಟೋರಿಕ್ಷಾ, ಖಾಸಗಿ ಕಾರುಗಳ ನಿಲ್ದಾಣ ಅಂಗಡಿ ಮುಂಗಟ್ಟು ಬಳಿಯಲ್ಲಿ ಮತ್ತು ವಾಹನ ಸವಾರ ಓಡಾಟಗಳ ನಡುವೆ ಜನರ ಸಂಚಾರ ಕಂಡು ಬಂದಿತು.
ಖಾಸಗಿ ಬಸ್‌ ನಿಲ್ದಾಣದಲ್ಲಿ ಯಾವುದೇ ಬಸ್‌ ಸಂಚಾರ ಕಂಡು ಬರಲಿಲ್ಲ, ಆದರೆ ಪಾವಗಡದಿಂದ ತುಮಕೂರಿಗೆ ಖಾಸಗಿ ಬಸ್‌ ಎಂಎಜಿ ಮಾತ್ರ ಸಂಚರಿಸಿ ಪ್ರಯಾಣಿಕರಿಗೆ ಪ್ರಯಾಣದ ಸೇವೆ ಒದಗಿಸಿದೆ.
ಇಂಧನ ದರ ಏರಿಕೆಯ ನಡುವೆ ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿನ ಟಿಕೆಟ್‌ ದರಗಳಲ್ಲಿ ಯಾವುದೇ ಏರಿಕೆ ಬಿಸಿ ಕಂಡು ಬಾರದೆ ಸುಗಮ ಸಂಚಾರ ನಡೆಸಿದ್ದು ಕಂಡು ಬಂದಿತು.
ತುಮಕೂರು 24, ಬೆಂಗಳೂರು 14, ಶಿರಾ 9 ಬಸ್‌ ಹಾಗೂ ಮಧುಗಿರಿ ಗ್ರಾಮಾಂತರ ಸೇವೆಯಲ್ಲಿ ಐ.ಡಿ.ಹಳ್ಳಿಗೆ 4 ಟ್ರಿಪ್‌ ಸೇವೆಯನ್ನು ಕೆ ಎಸ್ ಆರ್ ಟಿ ಸಿ ಬಸ್‌ ಸಂಜೆ 4 ರ ವೇಳೆಗೆ ಒದಗಿಸಿವೆ.
ಟೀ ಅಂಗಡಿ ಮಾಲೀಕ ಮಹಮದ್‌ ಅಹಮದ್‌ ಮಾತನಾಡಿ ಇಷ್ಟೂ ದಿನಗಳಿಂದ ವ್ಯಾಪಾರವೇ ಇರಲಿಲ್ಲ, ಆದರೆ ಬಸ್ ಗಳ ಹಾರನ್‌ ಶಬ್ದ ಹಾಗೂ ಜನರನ್ನು ಕಂಡು ಮನಸ್ಸಿಗೆ ಖುಷಿಯಾಯಿತು ಎಂದರು.
ಆಟೋ ಚಾಲಕ ಪ್ರಕಾಶ್‌ ಭಟ್‌ ಮಾತನಾಡಿ ಲಾಕ್‌ ತೆರವಾಗಿರುವುದು ಖುಷಿ ತಂದಿದೆ, ಇನ್ನೂ ಮುಂದಿನ ದಿನಗಳಲ್ಲಿ ಪಟ್ಟಣ ಸಹಜ ಸ್ಥಿತಿಗೆ ಬರುವಂತಾದರೆ ಜೀವನೋಪಾಯಕ್ಕೆ ತೊಂದರೆ ಇಲ್ಲ ಎಂದರು.
ಲಾಕ್ ಡೌನ್‌ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ವ್ಯಾಪಾರ ಮಾತ್ರ ನಡೆದಿತ್ತು. ಸೋಮವಾರದಿಂದ ಎಲ್ಲಾ ರೀತಿಯ ಅಂಗಡಿ ಮುಂಗಟ್ಟು ಓಪನ್‌ ಆಗಿ ವ್ಯಾಪಾರ ನಡೆದು ಊರಿಗೆ ಜೀವ ಕಳೆ ಬಂದಂತಾಯಿತು. ಗ್ರಾಮಾಂತರ ಪ್ರದೇಶದ ಜನರನ್ನು ಕೇವಲ ಮೊಬೈಲ್‌ ಮೂಲಕ ಸಂಪರ್ಕ ಸಾಧಿಸುತ್ತಿದ್ದವರಿಗೆ ಮುಖತಃ ಭೇಟಿಯಿಂದಾಗಿ ಸಂತೋಷ ವ್ಯಕ್ತಪಡಿಸಿದ್ದು ಕಂಡು ಬಂತು.

Get real time updates directly on you device, subscribe now.

Comments are closed.

error: Content is protected !!