ಭಾಗ್ಯಲಕ್ಷ್ಮಿ ಬಾಂಡ್‌ ನೀಡಲು ಮೀನಾಮೇಷ- ಮುಖಂಡರ ಆಕ್ರೋಶ

309

Get real time updates directly on you device, subscribe now.

ಕುಣಿಗಲ್‌: ಫೋಟೋ ಶೂಟ್ ರಾಜಕಾರಣಕ್ಕೆ ಭಾಗ್ಯಲಕ್ಷ್ಮಿ ಬಾಂಡ್‌ ಬಂದು ಹಲವು ತಿಂಗಳಾಗಿದ್ದರೂ ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿರುವ ಮಹಿಳಾ ಕಲ್ಯಾಣ ಇಲಾಖಾಧಿಕಾರಿಗಳನ್ನು ಜೆಡಿಎಸ್‌ ಮುಖಂಡ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ಸೋಮವಾರ ನಡೆಯಿತು.
ತಾಲೂಕಿನಲ್ಲಿ ಅರ್ಹ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್‌ ಬಂದಿದೆ, ಜನವರಿಯಿಂದಲೂ ಸುಮಾರು 590 ಬಾಂಡ್‌ ಬಂದಿದ್ದರೂ ಅಧಿಕಾರಿಗಳು ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿರುವ ಮಾಹಿತಿ ಪಡೆದ ಜೆಡಿಎಸ್‌ ಮುಖಂಡ ಜಗದೀಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಲ್‌.ಹರೀಶ್‌ ಇತರರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖಂಡ ಜಗದೀಶ್‌ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳು ಜನತೆಯ ಮನೆ ಬಾಗಿಲಿಗೆ ನೀಡಬೇಕು. ತಾಲೂಕಿನಲ್ಲಿನ ಅಧಿಕಾರಸ್ಥ ರಾಜಕಾರಣಿಗಳು ಫೋಟೋ ಶೂಟ್‌ ರಾಜಕಾರಣದ ತೆವಲಿಗೆ 590 ಬಾಂಡ್ ಗಳು ಬಂದಿದ್ದರೂ ವಿತರಣೆ ಮಾಡದೆ ಹಾಗೆ ಇಟ್ಟುಕೊಂಡಿರುವುದು ಕಾನೂನು ಬಾಹಿರವಾಗಿದೆ. ತಾಲೂಕಿನಲ್ಲಿ ಪಡಿತರ ಆಹಾರ ಧಾನ್ಯ ವಿತರಣೆಗೂ ಫೋಟೋ ಶೂಟ್‌ ಮಾಡಿಸಿಕೊಳ್ಳುವವರೆಗೂ ವಿತರಣೆ ಮಾಡುವುದು ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದೆ. ಬಾಂಡ್‌ ವಿತರಣೆ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಾನಾಡಿದ್ದು ಅವರು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಧಿಕಾರಿಗಳು ಕೂಡಲೆ ಬಾಂಡ್‌ ವಿತರಣೆ ಮಾಡಬೇಕು, ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಚೇರಿಯಲ್ಲಿದ್ದ ಸೂಪರ್ ವೈಸರ್‌ ಗಂಗ ರೇವಮ್ಮ ಮಾತನಾಡಿ, ಕೊವಿಡ್‌ ಕಾರಣದಿಂದ ವಿಳಂಬವಾಗಿದೆ, ಹಂತ ಹಂತವಾಗಿ ಬಾಂಡ್ ಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ಹೋಗಿ ವಿತರಣೆ ಮಾಡಲಾಗುವುದು ಎಂದರು.

Get real time updates directly on you device, subscribe now.

Comments are closed.

error: Content is protected !!