ತಿಪಟೂರು: ಮಾಜಿ ಶಾಸಕ ಕೆ.ಷಡಕ್ಷರಿ ಅವರ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ಸೋಮವಾರ ನಡೆದಿದೆ.
ಸೋಮವಾರ ಮಧ್ಯಾಹ್ನದಿಂದ ಆರಂಭವಾಗಿರುವ ಈ ನಕಲಿ ಖಾತೆಯು ಮಾಜಿ ಶಾಸಕರ ನಿಜವಾದ ಖಾತೆಯಾಗಿಲ್ಲ. ತಿಪಟೂರಿನ ಹಲವು ಜನರಿಗೆ ಹಣದ ಬೇಡಿಕೆಯನ್ನು ನಕಲಿ ಖಾತೆಯ ಮೂಲಕ ಇಡಲಾಗಿತ್ತು, ಇದರ ಬಗ್ಗೆ ಈಚನೂರು ಗ್ರಾಮದ ಭರತ್ ಭೂಷಣ್ ಅವರು ಅದೇ ಸಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಯ ಬಗ್ಗೆ ಇತರರಿಗೆ ಮಾಹಿತಿ ರವಾನೆ ಮಾಡಿ ಯಾರು ಹಣ ಹಾಕದಂತೆ ಮನವಿ ಮಾಡಿದ್ದಾರೆ.
ಇದೇ ರೀತಿ ಹಲವರು ಜನರಿಗೆ ಸಾಮಾಜಿಕ ಜಾಲತಾಣದ ಮೇಸೆಂಜರ್ ನಲ್ಲಿ ಹಣ ಕೇಳುತ್ತಿರುವುದು ಕಂಡು ಬರುತ್ತಿದೆ, ಹಲವು ಜನರಿಗೆ 11,000 ಹಣದ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಇಂತಹ ನಕಲಿ ಖಾತೆಗಳು ಬರುತ್ತಿರುವ ಹಿನ್ನಲೆಯಲ್ಲಿ ಎಚ್ಚೆತ್ತ ಹಲವು ಜನರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜಿಲ್ಲೆಯಲ್ಲಿ ಮಾಜಿ ಸಚಿವ ಜಯಚಂದ್ರ ಅವರ ಹೆಸರಿನಲ್ಲಿ ಕೂಡ ಇದೇ ರೀತಿ ನಕಲಿ ಖಾತೆ ಇತ್ತೀಚೆಗೆ ಸೃಷ್ಟಿಯಾಗಿತ್ತು, ಇದರ ಬಗ್ಗೆ ಮಾಜಿ ಶಾಸಕ ಕೆ.ಷಡಕ್ಷರಿ ಅವರಿಗೆ ಮಾಹಿತಿ ಕೇಳಿದಾಗ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
ಮಾಜಿ ಶಾಸಕರ ಹೆಸರಲ್ಲಿ ಫೇಕ್ ಅಕೌಂಟ್- ಹಣಕ್ಕೆ ಡಿಮಾಂಡ್
Get real time updates directly on you device, subscribe now.
Next Post
Comments are closed.