ಹೊಸಕೆರೆ ಹುಚ್ಚಮ್ಮ ದೇವಾಲಯದಲ್ಲಿ ಕೋವಿಡ್ ರೂಲ್ಸ್ ಗೆ ಡೋಂಟ್ ಕೇರ್

ಗಾವು ಸಿಗಿದ ಅಪ್ರಾಪ್ತ ಬಾಲಕ- ವೀಡಿಯೋ ವೈರಲ್

303

Get real time updates directly on you device, subscribe now.

ಕುಣಿಗಲ್: ತಾಲೂಕಿನ ಜಿನ್ನಾಗರ ಸಮೀಪದ ಹೊಸಕೆರೆ ಹುಚ್ಚಮ್ಮ ದೇವಾಲಯದಲ್ಲಿ ಕೋವಿಡ್ ನಿಯಮಾವಳಿಗಳ ಉಲ್ಲಂಘಿಸಿ ದೇವಿಯ ಉತ್ಸವ ಹಮ್ಮಿಕೊಂಡಿದ್ದಲ್ಲದೆ, ಅಪ್ರಾಪ್ತ ಬಾಲಕ ಗಾವು ಸಿಗಿಯುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಗಿದೆ.
ತಾಲೂಕಿನ ಜಿನ್ನಾಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕೋವಿಡ್ ಎರಡನೆ ಅಲೆಯಲ್ಲಿ ಸಾಕಷ್ಟು ಪ್ರಕರಣ ಪತ್ತೆಯಾಗಿದ್ದು, ತಾಲೂಕು ಆಡಳಿತ ಸೇರಿದಂತೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಂತ್ರಣಕ್ಕೆ ಹರಸಾಹಸ ಪಟ್ಟಿದ್ದಲ್ಲದೆ, ಕಂಟೈನ್ಮೆಂಟ್ ಝೋನ್ ಆಗಿತ್ತು, ಕೋವಿಡ್ ಲಾಕ್ ಡೌನ್ ಸಡಿಲಿಕೆ ಹಿನ್ನೆಲೆಯಲ್ಲೆ ಜಿನ್ನಾಗರ ಸಮೀಪದ ಹುಚ್ಚಮ್ಮ ದೇವಿಯ ಉತ್ಸವ ಹಮ್ಮಿಕೊಂಡಿದ್ದು, ಈ ಉತ್ಸವದಲ್ಲಿ ನೂರಾರು ಮಂದಿ ಯಾವುದೇ ಸಾಮಾಜಿಕ ಅಂತರ ಇಲ್ಲದೆ ಜಮಾವಣೆಗೊಂಡು ಪೂಜೆ, ಉತ್ಸವ ಕಾರ್ಯದಲ್ಲಿ ಪಾಲ್ಗೊಂಡರೆ, ಸುಮಾರು 12 ರಿಂದ 14 ವಯೋಮಾನದ ಅಪ್ರಾಪ್ತ ಬಾಲಕನಿಂದ ಗಾವು ಸಿಗಿಯುವ ಸಂಪ್ರಾದಾಯ ನೆರವೇರಿಸಿರುವ ವೀಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿವೆ. ಕೋವಿಡ್ ಇನ್ನು ತಾಲೂಕಿನಿಂದ ಸಂಪೂರ್ಣವಾಗಿ ಹೋಗಿಲ್ಲದೆ ದಿನಾಲೂ 5 ರಿಂದ 16 ಪ್ರರಕಣ ಪತ್ತೆಯಾಗುತ್ತಿದ್ದರೆ 125 ಪ್ರಕರಣ ಸಕ್ರಿಯವಾಗಿದೆ. ಇಂತಹ ಸಮಯದಲ್ಲಿ ನೂರಾರು ಮಂದಿ ಸೇರಿ ಉತ್ಸವ ಆಚರಣೆ ಮಾಡುವ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸುವುದು ಬಿಟ್ಟು ನಿಯಮ ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಅಪ್ರಾಪ್ತ ಬಾಲಕನಿಂದ ಗಾವು ಸಿಗಿಯುವ ಸಂಪ್ರದಾಯ ನಡೆಸಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂಬ ಆರೋಪಕ್ಕೆ ಗುರಿಯಾಗಿದೆ.

Get real time updates directly on you device, subscribe now.

Comments are closed.

error: Content is protected !!