ಗ್ರಾಹಕನ ಸೋಗಿನಲ್ಲಿ ಬಂದು ಸರ ಕಸಿದು ಪರಾರಿ

232

Get real time updates directly on you device, subscribe now.

ತುರುವೇಕೆರೆ: ಮಡಕೆ ಖರೀದಿಸುವ ಸೋಗಿನಲ್ಲಿ ತೋಟದ ಮನೆಯಲ್ಲಿದ್ದ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ದರೋಡೆಕೋರ ಕೊರಳಿನಲ್ಲಿದ್ದ 45 ಗ್ರಾಂ ಬಂಗಾರದ ಸರ ಕಸಿದು ಪರಾರಿಯಾಗಿರುವ ಘಟನೆ ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಸಿಂಗಸಂದ್ರ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.
ದರೋಡೆಕೋರನ ಮಚ್ಚಿನಿಂದ ಹಲ್ಲೆಗೊಳಗಾದ ಮಹಿಳೆ ಅನಸೂಯ (42), ತಾಲ್ಲೂಕಿನ ಸಿಂಗಸಂದ್ರ ಗ್ರಾಮದ ದೇವರಾಜು ಕುಂಬಾರಿಕೆ ವೃತ್ತಿ ಮಾಡುವವರಾಗಿದ್ದು, ಗ್ರಾಮದ ಹೊರವಲಯದ ತೋಟದಲ್ಲಿ ಪತ್ನಿ ಅನಸೂಯ ಹಾಗೂ ಮಗಳೊಂದಿಗೆ ವಾಸವಿದ್ದರು. ದೇವರಾಜ್ ಅನ್ಯ ಕಾರ್ಯ ನಿಮಿತ್ತ ಹೊರಗೆ ತೆರಳಿದ್ದ ವೇಳೆ ಗ್ರಾಹಕನ ಸೋಗಿನಲ್ಲಿ ಅಪರಿಚಿತನೊಬ್ಬ ತೋಟದ ಮನೆಯಲ್ಲಿ ಮಹಿಳೆ ಅನಸೂಯರಿಗೆ ಮಡಕೆ ಬೇಕೆಂದು ಕೇಳಿದ್ದಾನೆ. ಮಡಕೆ ನೀಡಿದ ಮಹಿಳೆಯ ಕೈಗೆ ಅಪರಿಚಿತ ನೂರರ ನೋಟನ್ನು ಕೊಟ್ಟಿದ್ದಾನೆ. ಗ್ರಾಹಕನಿಗೆ ಚಿಲ್ಲರೆ ನೀಡುವತ್ತ ಮಹಿಳೆ ಚಿತ್ತ ಹರಿಸಿದ ವೇಳೆ ಅಪರಿಚಿತ ವ್ಯಕ್ತಿ ಮಹಿಳೆಯ ಕೊರಳಲ್ಲಿದ್ದ ಸರ ಕಸಿಯಲು ಮುಂದಾಗಿದ್ದಾನೆ. ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದಾಗ ಮಚ್ಚಿನಿಂದ ಹಲ್ಲೆ ನೆಡೆಸಿ ಸರ ಕಸಿದು ಪರಾರಿಯಾಗಿದ್ದಾನೆ.
ಚಿಕಿತ್ಸೆ ಕೊಡಿಸಿ ನಡೆದ ವಿಷಯವನ್ನು ದಂಡಿನಶಿವರ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಿಲ್ಲಾ ಎಸ್.ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹಲ್ಲೆಗೊಳಗಾದ ಮಹಿಳೆಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಡಿವೈಎಸ್ಪಿ ರಮೇಶ್, ಸಿಪಿಐ ನವೀನ್, ಎಎಸ್ಐ ಗಂಗಣ್ಣ ಹಾಜರಿದ್ದರು. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿ ಕ್ರಮಕ್ಕೆ ಮುಂದಾಗಿದ್ದಾರೆ.

Get real time updates directly on you device, subscribe now.

Comments are closed.

error: Content is protected !!