ಮಾಸ್ಕ್ ತಯಾರಿಸಿ ಹಂಚಿದ 12 ವರ್ಷದ ಬಾಲಕಿ

481

Get real time updates directly on you device, subscribe now.

ಕೊಡಿಗೇನಹಳ್ಳಿ: ಕೋವಿಡ್ ಸಂದರ್ಭದಲ್ಲಿ ಶಾಲೆಗೆ ರಜೆ ಇದೆ ಎಂದು 12 ವರ್ಷ ವಿದ್ಯಾರ್ಥಿ ಸುಮಾರು 3 ಸಾವಿರ ಮಾಸ್ಕ್ ತಯಾರಿಸಿ ತನ್ನ ಹುಟ್ಟುಹಬ್ಬಕ್ಕೆ ಗ್ರಾಮಗಳಲ್ಲಿ ಉಚಿತವಾಗಿ ವಿತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ.
ತಾಲೂಕಿನ ಪುರವರ ಗ್ರಾಮದ ಶ್ರೀದೇವಿ ಹಾಗೂ ರಾಮಚಂದ್ರಪ್ಪ ದಂಪತಿಯ ಪುತ್ರಿ ವೈಷ್ಣವಿ (12) ತನ್ನ ಅಕ್ಕ ಭಾವನ ಮತ್ತು ತಾಯಿ ಸಹಕಾರದಿಂದ ಬಿಡುವಿನ ವೇಳೆಯಲ್ಲಿ ಮಾಸ್ಕ್ ತಯಾರಿಸಿದ್ದು ಎಸ್ಬಿಐ ಬ್ಯಾಂಕ್, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 3 ಸಾವಿರ ಮಾಸ್ಕ್ ಗಳನ್ನು ವಿತರಿಸಿದ್ದಾಳೆ. 7ನೇ ತರಗತಿ ಸರಕಾರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಕಾಳಜಿಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಏಳನೇ ತರಗತಿ ಓದುತ್ತಿರುವ ವೈಷ್ಣವಿ ಮತ್ತು ಆಕೆ ಅಕ್ಕ ಭಾವನ ಇಬ್ಬರು ಸೇರಿ ಪ್ರತಿ ದಿನ ಮನೆಯಲ್ಲಿ ಮಾಸ್ಕ್ ತಯಾರಿದ್ದು ಇದಕ್ಕೆಲ್ಲಾ ಪ್ರೇರಣೆ ತನ್ನ ಪೋಷಕರು ಎನ್ನುತ್ತಾರೆ. ಕಳೆದ ಒಂದು ವಾರದ ಹಿಂದೆ ಕೋಡ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಜನ ಸ್ನೇಹಿ ವೈದ್ಯಾಧಿಕಾರಿ ಡಾ.ರವಿ ಯವರನ್ನು ಸರಕಾರ ಬೇರೆಡೆ ವರ್ಗಾವಣೆ ಮಾಡಿದ್ದು ಇಂತಹ ಜನ ಸ್ನೇಹಿ ಅಧಿಕಾರಿಯನ್ನು ಗ್ರಾಮೀಣ ಭಾಗದಲ್ಲೇ ಉಳಿಸುವಂತೆ ಈ ಬಾಲಕಿಯರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!